ಭಯೋತ್ಪಾದಕ ಸಂಘಟನೆ ಅಲ್ ಖೈದಾ (Al-khaida) ನಾಯಕನಾಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ನ (Osama bin laden)ಮಗ ಒಮರ್ ಬಿನ್ ಲಾಡೆನ್ (Omar bin laden) ಕೂಡಲೇ ಫ್ರಾನ್ಸ್ ತೊರೆಯುವಂತೆ ಅಲ್ಲಿನ ಆಡಳಿತ ಆದೇಶ ಹೊರಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನ ಖಂಡಿಸಿ ದೇಶ ತೊರೆಯುವಂತೆ ಫ್ರಾನ್ಸ್ (France)) ಆದೇಶಿಸಿದೆ.
ಒಮರ್ ಬಿನ್ ಲಾಡೆನ್ ತನ್ನ ತಂದೆಯನ್ನ ತೊರೆದ ಬಳಿಕ 2016 ರಿಂದಲೂ ಉತ್ತರ ಫ್ರಾನ್ಸ್ನ ನಾರ್ಮಂಡಿಯಲ್ಲಿ ನೆಲೆಯೂರಿದ್ದ, ಆದ್ರೆ 2023 ರಲ್ಲಿ ತನ್ನ ಭಯೋತ್ಪಾದನೆಯನ್ನು ಪ್ರತಿಪಾದಿಸುವ ಬಗ್ಗೆ ಪೋಸ್ಟ್ ಮಾಡಿದ್ದನಂತೆ.
ಈ ಹಿನ್ನೆಲೆ ಓರ್ನ್ ಪ್ರಿಫೆಕ್ಟ್ ಫ್ರೆಂಚ್ ಪ್ರದೇಶವನ್ನ ತೊರೆಯುವಂತೆ ಆದೇಶ ನೀಡಲಾಗಿದೆ. ಸದ್ಯ ಒಮರ್ ಬಿನ್ ಲಾಡೆನ್ ನೆಲೆ ಕಾಣದಂತಾಗಿತ್ತು. ಇನ್ನೆಲ್ಲಿಗೆ ತೆರಳುವುದೆಂದು ಹೊಸ ನೆಲೆಯ ಹುಡುಕಾಡದಲ್ಲಿದ್ದಾನೆ ಎನ್ನಲಾಗಿದೆ.