
ಮಂಡ್ಯ: ಮುಡಾ ಹಗರಣ (MUDA Scam) ವಿಚಾರ ಮುನ್ನಲೆಗೆ ಬಂದ ಬಳಿಕ ಸಿಎಂ (CM) ಬದಲಾವಣೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (Union Minister HD Kumaraswamy) ಅವರು ಅವಧಿಗೂ ಮುನ್ನ ಚುನಾವಣೆ (Election) ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಹೆಚ್ಡಿಕೆ ಹೇಳಿಕೆಗೆ ಸಚಿವ ಎನ್.ಚಲುವರಾಯಸ್ವಾಮಿ (Minister N. Chaluvarayaswamy) ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ?.
ಮದ್ದೂರಿನ ತರಮನಕಟ್ಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ ಎಂದು ಹರಿಹಾಯ್ದರು.
ಕುಮಾರಸ್ವಾಮಿ ಅವರು ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅವರಿಗೆ ಅನುಭವ ಇಲ್ಲ, ಅದಕ್ಕೆ ಆ ತರ ಹೇಳ್ತಾರೆ ಅಷ್ಟೆ. ಯಾವ ಸರ್ಕಾರ ಬಂದ್ರು ಅವರಿಗೆ ಅಧಿಕಾರ ಸಿಕ್ಕುದ್ರುನು ಪೂರ್ಣ ಅವಧಿಯನ್ನ ಮುಗಿಸೋಕೆ ಯಾವತ್ತು ರೆಡಿ ಇಲ್ಲ, ಅವರು ಜ್ಯೋತಿಷ್ಯ ಹೇಳೋದಾದ್ರೆ ಹೇಳಿ ನಮ್ಮವರು ಇದ್ದಾರೆ ಒಳ್ಳೆಯ ಜ್ಯೋತಿಷ್ಯ ಹೇಳುವವರಿದ್ದಾರೆ ಹೋಗಿ ಅಂತ ಹೇಳ್ತಿನಿ ಎಂದು ವ್ಯಂಗ್ಯವಾಡಿದರು.
ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ನ್ನು ಭೇಟಿ ಮಾಡಬಾರದಾ? ಗೃಹ ಸಚಿವ ಪರಮೇಶ್ವರ್ -ಸತೀಶ್ ಜಾರಕಿಹೋಳಿ ಭೇಟಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದಾ? ಯಾರು ಯಾರನ್ನು ಭೇಟಿ ಮಾಡಬಾರದು ಅಂತ ನಿಗಧಿ ಮಾಡಕ್ಕಾಗುತ್ತಾ?
ಕುಮಾರಸ್ವಾಮಿ ಎಂಪಿ ಆಗೋವರೆಗೆ ಯೋಗೇಶ್ವರ್ ಬೇಕಿತ್ತು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪವಾಗುತ್ತಿರುವುದು ಅವರ ಪಕ್ಷದ ತೀರ್ಮಾನ ಏನಾದ್ರು ಮಾಡ್ಕೊಳ್ಳಲಿ, ಕುಮಾರಸ್ವಾಮಿ ಎಂಪಿ ಆಗೋವರೆಗೆ ಯೋಗೇಶ್ವರ್ ಬೇಕಿತ್ತು. ಅವರ ಸೆಟಲ್ ಅವರು ಮಾಡ್ಕೊಳ್ತಾರೆ ಅಷ್ಟೆ ಎಂದು ತಿರುಗೇಟು ನೀಡಿದರು.
ಚುನಾವಣೆ ದಿನಾಂಕ ಘೋಷಣೆ ಬಳಿಕ ಅಭ್ಯರ್ಥಿ ಘೋಷಣೆ. ನಮ್ಮ ಪಕ್ಷದಿಂದ ಡಿಕೆ ಶಿವಕುಮಾರ್, ಅವರ ತಮ್ಮ ಅಥವಾ ಆಶ್ಚರ್ಯ ಯಾರೇ ಸ್ಪರ್ಧೆ ಮಾಡ್ಥಾರೋ ಇನ್ನೂ ತೀರ್ಮಾನವಾಗಿಲ್ಲ. ಯಾರೋ ಒಬ್ಬರನ್ನ ಅಭ್ಯರ್ಥಿ ಮಾಡ್ತೀವಿ. ಸೂಕ್ತ ಸಂದರ್ಭದಲ್ಲಿ ಘೋಷಣೆ ಮಾಡುತ್ತೇವೆ. ಸೋಲು,ಗೆಲುವು ಯಾರ ಕೈನಲ್ಲಿ ಇಲ್ಲ ಜನರು ತೀರ್ಮಾನ ಮಾಡ್ತಾರೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.









