ಕನ್ನಡದ ಕಿರುತೆರೆಯ ಪ್ರಖ್ಯಾತ ಮತ್ತು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ (Bigboss season 11) ಬಗ್ಗೆ ಈ ಬಾರಿ ಆರಂಭದಲ್ಲೇ ಆರೋಪಗಳು ಕೇಳಿಬರ್ತಿವೆ. ಇದೀಗ ಅಂಥದ್ದೇ ಮತ್ತೊಂದು ವಿಚಾರ ಮುನ್ನಲೆಗೆ ಬಂದಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಪೈಕಿ ನರಕ ವಾಸಿಗಳ ತಂಡದಲ್ಲಿರುವ ಹೆಣ್ಣುಮಕ್ಕಳ ಖಾಸಗಿತನಕ್ಕೆ (Girls privacy) ಧಕ್ಕೆಯಾಗಿದೆ ಅಂತ ವಕೀಲೆ ರಕ್ಷಿತ ಸಿಂಗ್(Lawyer rakshitha singh) ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇದೀಗ ಈ ದೂರಿನ ಹಿನ್ನಲೆ, ಬಿಗ್ ಬಾಸ್ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಪೊಲೀಸರ ಸಮೇತ ಭೇಟಿ ನೀಡಲಿದ್ದು, ಹೆಣ್ಣುಮಕ್ಕಳ ಮೂಲ ಸೌಕರ್ಯ ಹಾಗೂ ಖಾಸಗೀತನದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.