ಕೇರಳ ಮತ್ತು ನೇಪಾಳ (Kerala & Nepal) ನಂತರ ಇದೀಗ ಮೇಘಾಲಯದಲ್ಲಿ ಭಾರೀ ಪ್ರವಾಹ (Meghalaya floods) ಉಂಟಾಗಿದೆ. ದಕ್ಷಿಣ ಗಾರೋ ಪರ್ವತ ಜಿಲ್ಲೆಯ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಸಿಲುಕಿ ಇದುವರೆಗೂ 15 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ದಕ್ಷಿಣ ಗಾರೋ ಪರ್ವತದ ಜಿಲ್ಲೆಯ ಭಾಗದಲ್ಲಿ ನಿರಂತರವಾಗಿ ಮಳೆಯಾದ ಪರಿಣಾಮ ಗಾಸುವಾಪಾರ ಎಂಬ ಪ್ರದೇಶದಲ್ಲಿ ಭೂಕುಸಿತವಾಗಿದೆ. ಈ ಪರಿಣಾಮ ಪ್ರವಾಹ ಮತ್ತಷ್ಟು ರಾಕ್ಷಸ ರೂಪ ತಾಳಿ ಹರಿದುಬಂದಿದೆ.
ನಿನ್ನೆ ಸಂಜೆಯಿಂದಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾಕಾರ್ಯ ಆರಂಭವಾಗಿದ್ದು ,ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣೆ ದಳದ ಸಿಬ್ಬಂದಿಯನ್ನು ನಿಯೋಜಸಲಾಗಿದೆ.





