ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ ಗ್ಯಾಂಗ್ ಜೈಲಿನಲ್ಲಿದೆ. ಮೂವರಿಗೆ ಜಾಮೀನು ಸಿಕ್ಕಿದೆ. ಇನ್ನುಳಿದವರೂ ಜಾಮೀನು ಪಡೆಯಲು ಅರ್ಜಿ ಹಾಕಿಕೊಂಡಿದ್ದಾರೆ. ಆದರ ನಡುವೆ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಎದುರು ಬೇಡಿಕೊಳ್ತಿರೋ ಫೋಟೋ ಬಗ್ಗೆ ವಕೀಲರು ಅನುಮಾನ ವ್ಯಕ್ತಪಡಿಸಿದ್ದಾರೆ. ಶೆಡ್ನಲ್ಲಿ ರೇಣುಕಾಸ್ವಾಮಿ ಕೈಮುಗಿಯುತ್ತಿದ್ದ ಹಾಗೆ ಸಿಕ್ಕ 2 ಫೋಟೋಗಳ ಬಗ್ಗೆ ಚರ್ಚೆ ಶುರುವಾಗಿದೆ. ಶೆಡ್ನಲ್ಲಿ ಸಿಕ್ಕ ಆ 2 ಫೋಟೋ ಅಸಲಿ ಅಲ್ಲ ಎಂಬ ವಾದ ಮಾಡಿದ್ದಾರೆ ವಕೀಲರು.
AI (Artificial intelligence) ಫೋಟೋಗಳು ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ಬೆಂಗಳೂರು ಎಫ್ಎಸ್ಎಲ್ಗೆ 2 ಫೋಟೋಗಳನ್ನು ರವಾನೆ ಮಾಡಿದ್ದಾರೆ. ಫೊರೆನ್ಸಿಕ್ ತಜ್ಞರು ನೀಡುವ ರಿಪೋರ್ಟ್ಗಾಗಿ ಕಾಯುತ್ತಿದ್ದಾರೆ ಕಾಮಾಕ್ಷಿಪಾಳ್ಯ ಪೊಲೀಸರು. ಈ ಎರಡೂ ಫೋಟೋಗಳು ಆರೋಪಿ ವಿನಯ್ ಮೊಬೈಲ್ನಲ್ಲಿ ರಿಟ್ರೀವ್ ಮಾಡಿದ್ದವು ಎನ್ನಲಾಗಿದೆ.
ರೇಣುಕಾಸ್ವಾಮಿಯ 2 ಫೋಟೋಗಳನ್ನು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿರುವ ಸಾಧ್ಯತೆಯಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಇದೀಗ ಆ ಎರಡು ಫೋಟೋಗಳು ಅಸಲಿನಾ..? ನಕಲಿನಾ ಅನ್ನೋದನ್ನು ಕನ್ಫರ್ಮ್ ಮಾಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ವರದಿ ಬಂದ ಬಳಿಕ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.