ಕಾಡಾನೆಗಳ ಹಾವಳಿಯಿಂದ ಕಾಫಿ ನಾಡು ಚಿಕ್ಕಮಗಳೂರಿನ (Chikkamagaluru) ಜನತೆ ಹೈರಾಣಾಗಿದ್ದು, ದಯಮಾಡಿ ಇಲ್ಲಿ ಆನೆ ಶಿಬಿರ (Elephant camp) ಸ್ಥಾಪನೆ ಮಾಡಿ ಅಂತ ಮನವಿ ಮಾಡಿದ್ದಾರೆ. ಸದ್ಯ ಜನರ ಬೇಡಿಕೆಗಳನ್ನು ಈಡೇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಹೀಗಾಗಿ ಆನೆ ಶಿಬಿರ ಸ್ಥಾಪನೆಗಾಗಿ ಎಂಟು ಜಾಗಗಳನ್ನ ಗುರುತಿಸಿ ಅರಣ್ಯ ಇಲಾಖೆ (Forest department) ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಕುಮ್ಮಿ ಆನೆಗಳನ್ನ ಹೇಗೆ ಸಾಕಬಹುದು. ಕಾಡಾನೆ ಕಾರ್ಯಚರಣೆಗೆ ಹೇಗೆ ಬಳಸಬಹುದು. ಇಲ್ಲಿಯೇ ಸೆರೆ ಹಿಡಿದ ಕಾಡಾನೆಯನ್ನ ಪಳಗಿಸೋದರ ಬಗ್ಗೆ ಜಾಗದ ವಿವರಣೆಯ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಆದಷ್ಟು ಬೇಗ ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಸಮನ್ವಯ ಸಾಧಿಸಿ ಕಾಡಾನೆಗಳ ಉಪಟಳದಿಂದ ಮುಕ್ತಿ ನೀಡಬೇಕಾಗಿ ಇಲ್ಲಿನ ಸ್ಥಳೀಯರು ಮೇಲಿಂದ ಮೇಲೆ ಮನವಿ ಮಾಡಿಕೊಂಡಿದ್ದಾರೆ.