ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟ ಮಂಜು ಪಾವಗಡ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಈ ಮದುವೆಗೆ ನಂದಿನಿ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್ 8 ರ ವಿನ್ನರ್ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ, ಅಲಿಯಾಸ್ ಲ್ಯಾಗ್ ಮಂಜು ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಶೀಘ್ರದಲ್ಲಿ ಮಂಜು ಹಸೆಮಣೆ ಏರಲಿದ್ದಾರೆ. ಇಷ್ಟು ದಿನ ಮದುವೆಯಾಗಿಲ್ಲ ಎಂದು ಎಲ್ಲರೂ ಮಂಜುವನ್ನು ತಮಾಷೆ ಮಾಡುತ್ತಿದ್ದರು. ಆದರೆ ಇದೀಗ ಸದ್ದಿಲ್ಲದೇ ಮಂಜು ಪಾವಗಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಂದಿನಿ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ನಟ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದರು. ಹೊಸ ಮನೆಯೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಇನ್ನು ಮಂಜು ಪಾವಗಡ ಅವರ ಹೊಸ ಮನೆಗೆ ನಟ ರಾಜೀವ್, ಅಂಕಿತಾ ಜಯರಾಮ್ ಸೇರಿದಂತೆ ಮುಂತಾದವರು ಆಗಮಿಸಿ ಶುಭ ಕೋರಿದ್ರು.