• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಖ್ಯಾತ ನಟ ಶಿವರಾಜ್ ಕುಮಾರ್ ಅವರಿಂದ ಶ್ರೀರಂಗಪಟ್ಟಣ ದಸರಾಗೆ ಚಾಲನೆ

ಪ್ರತಿಧ್ವನಿ by ಪ್ರತಿಧ್ವನಿ
October 4, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಮಂಡ್ಯ:ದಸರಾದ ಮೂಲ ಸ್ಥಳ ಶ್ರೀರಂಗಪಟ್ಟಣ ದಸರಾಕ್ಕೆ ಶುಕ್ರವಾರ ಚಾಲನೆ ದೊರೆತಿದೆ.ಮೊದಲ ದಿನವೇ ಜಂಬೂ ಸವಾರಿ ವೈಭವದಿಂದ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಜರುಗಿತು. ಮಂಡ್ಯ, ಮೈಸೂರು ಭಾಗಗಳಿಂದಲೂ ಆಗಮಿಸಿದ್ದ ಪ್ರವಾಸಿಗರು, ಸ್ಥಳೀಯರ ಉತ್ಸಾಹದ ನಡುವೆ ಜಂಬೂ ಸವಾರಿ ನಡೆಯಿತು.

ADVERTISEMENT

ಹಿರಣ್ಯ ಆನೆ ಓಟಕಿತ್ತು ಕೊಂಚ ಗಲಿಬಿಲಿ ಸೃಷ್ಟಿಸಿದರೂ ಜಂಬೂ ಸವಾರಿಯಲ್ಲಿ ಸಹಜವಾಗಿಯೇ ಭಾಗವಹಿಸಿ ಗಮನ ಸೆಳೆಯಿತು. ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಖ್ಯಾತ ನಟ ಡಾ. ಶಿವರಾಜ್‌ಕುಮಾರ್‌ ಅವರು ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಿದರು.

ಮಹೇಂದ್ರ ಆನೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ತಂದಾಗ ಗಣ್ಯರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ರೀರಂಗಪಟ್ಟಣ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಪಿ ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಇನ್ನಿತರರು ಉಪಸ್ಥಿತರಿದ್ದರು. ವೇದಬ್ರಹ್ಮ ಡಾ.ಭಾನುಪ್ರಕಾಶ್‌ ಶರ್ಮ ಕಾರ್ಯಕ್ರಮ ನಡೆಸಿಕೊಟ್ಟರು.

ಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ.

ಮಹೇಂದ್ರ ಗಾಂಭೀರ್ಯದೊಂದಿಗೆ ಬನ್ನಿಮಂಟಪ ಕಿರಂಗೂರಿನಿಂದ ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಸಾಗಿತು. ಕಲಾತಂಡಗಳು ಹಾಗೂ ಸ್ಥಬ್ಥಚಿತ್ರಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.

ಪೂಜಾ ಕುಣಿತದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಶ್ರೀ ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಕೆ.ಬಿ.ಸ್ವಾಮಿ ತಂಡ, ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಚೇತನ್.ಡಿ.ಸಿ ತಂಡ, ಬಾಬುರಾಯನಕೊಪ್ಪಲು ಪ್ರೇಮ್ ಕುಮಾರ್ ಬಿ.ಎನ್ ತಂಡ, ಶ್ರೀರಂಗಪಟ್ಟಣ ರವಿ.ಸಿ ತಂಡ ಮತ್ತು ಮಂಡ್ಯ ತಾಲೂಕು ಕಾರಸವಾಡಿ ವಿಕಾಸ್ ಕೆ.ಎಸ್ ತಂಡ ಭಾಗವಹಿಸಿದವು.

ಬಾಬುರಾಯನಕೊಪ್ಪಲು ಕಿರಣ್.ಎಚ್.ವಿ ತಂಡ, ಮಂಡ್ಯ ತಾಲೂಕು ಹುಳ್ಳೇನಹÀಳ್ಳಿ ಗ್ರಾಮದ ಚಂದನ ಡಿ.ಸಿ ತಂಡ, ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ವಿನಯ್.ಎಸ್ ತಂಡ, ಪಾಂಡವಪುರ ತಾಲೂಕು ದೊಡ್ಡಬೋಗನಹಳ್ಳಿ ಗ್ರಾಮ ರುದ್ರಸ್ವಾಮಿ ಡಿ.ವಿ ತಂಡದ ವೀರಗಾಸೆ ಗಮನ ಸೆಳೆಯಿತು.

ಸೋಮನ ಕುಣಿತದಲ್ಲಿ ಮಂಡ್ಯ ತಾಲ್ಲೂಕು ಕಾರಸವಾಡಿ ಸಂತೋಷ್ ಕುಮಾರ್ ಕೆ.ಎಂ ತಂಡ, ನಾಗಮಂಗಲ ಹಳ್ಳಿಸಂದ್ರ ಗ್ರಾಮ ಎ.ವಿಕಾಸ್‌ಗೌಡ ತಂಡ, ದುದ್ದ ಹೋಬಳಿ ಮುದಗಂದೂರು ಗ್ರಾಮದ ದೇವಲಿಂಗಯ್ಯ ತಂಡ, ವಿಕಾಸ್ ಎಂಬಿ ತಂಡ, ನಾಗಮಂಗಲ ಸಿ ಎಸ್ ಮಂಜೇಶ ತಂಡ, ಡೊಳ್ಳು ಕುಣಿತದಲ್ಲಿ ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಜನ್ಮಭೂಮಿ ಜನಪದ ಕಲಾಸಂಘ, ಶ್ರೀರಂಗಪಟ್ಟಣ ತಾಲ್ಲೂಕು ಮೇಳಾಪುರ ಗ್ರಾಮ ಸುಮಂತ ಎಂ.ಸಿ ತಂಡ, ಕಾರಸವಾಡಿ ಗ್ರಾಮದ ಲೋಕೇಶ್.ಎಂ ತಂಡ ಹೆಜ್ಜೆ ಹಾಕಿದವು.ನಗಾರಿ/ತಮಟೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ನೀಲನಕೊಪ್ಪಲು ಸಿದ್ದಲಿಂಗಸ್ವಾಮಿ ತಂಡ, ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮ ಹರ್ಷಕುಮಾರ್‌ಗೌಡ ತಂಡ, ಶ್ರೀರಂಗಪಟ್ಟಣ ಕೀರ್ತಿಕುಮಾರ್.ಆರ್ ತಂಡ, ಮಂಡ್ಯ ಕೊಪ್ಪಲು ಕಲಾತಂಡ, ಶ್ರೀರಂಗಪಟ್ಟಣ ತಾಲೂಕು ಗಾಂಧಿನಗರ ಅಶೋಕ.ಬಿ ಮತ್ತು ತಂಡದ ಸದ್ದಿ ಜೋರಿತ್ತು.

ನಂದಿದ್ವಜ ಕುಣಿತ.

ಮಂಡ್ಯ ತಾಲೂಕು ಕಾರಸವಾಡಿ ಜಗದೀಶ್ .ಎಂ ತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ದ್ಯಾವಣ್ಣ ತಂಡ ನಂದಿ ಧ್ವಜ ತಂಡದಲ್ಲಿದ್ದರು. ಗಾರುಡಿಗೊಂಬೆಯಲ್ಲಿ ಮಂಡ್ಯ ತಾಲೂಕು ಕಾರಸವಾಡಿ ಸಿದ್ದೇಗೌಡ ತಂಡ ಜನಪದ ಕಲಾತಂಡ, ಚಿಲಿಪಿಲಿ ಗೊಂಬೆಯಲ್ಲಿ ಮದ್ದೂರು ತಾಲೂಕು ಬಿದರಹಳ್ಳಿ ಗ್ರಾಮದ ಶ್ರೀ ಕಬ್ಬಾಳಮ್ಮ ಜಾನಪದ ಕಲಾತಂಡ, ಮಳವಳ್ಳಿ ತಾಲೂಕು ಮಾರನಹಳ್ಳಿ ಗ್ರಾಮ ಚಂದ್ರ ತಂಡ, ಕೊಂಬು ಕಹಳೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ಕೊಡಿಯಾಲ ಪವನ್ ಕುಮಾರ್ ತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ರೋಹಿತ್‌ಎಸ್ ತಂಡ, ಮಂಡ್ಯ ತಾಲೂಕು ಮಳೆಕೊಪ್ಪಲು ಗ್ರಾಮದ ನರಸಿಂಹ ಎಂ.ಸಿ ತಂಡದೊಂದಿಗೆ ಗಮನ ಸೆಳೆದರು.

ಒನಕೆ ಕುಣಿತದಲ್ಲಿ ಶ್ರೀರಂಗಪಟ್ಟಣ ತಾಲೂಕು ಬಸವನಪುರ ಯೋಗೇಶ್ ತಂಡಮತ್ತು ದೊಡ್ಡಪಾಳ್ಯ ಕುಮಾರ್ ತಂಡ, ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆಯಲ್ಲಿ ಮಂಡ್ಯ ತಾಲ್ಲೂಕು ಕೊತ್ತತ್ತಿ ಗ್ರಾಮದ ಎಲೆ ತೋಟದ ಖ್ಯಾತಮ್ಮ ಯುವಕರ ಜಾನಪದ ಕಲಾತಂಡ, ಮಹಿಳಾಪಟ ಕುಣಿತದಲ್ಲಿ ಮಂಡ್ಯ ತಾಲೂಕು ಕೀಲಾರ ಗ್ರಾಮ ಕ್ಷೀರಸಾಗರ ಮಿತ್ರ ಕೂಟ ಮತ್ತು ರಾಜಮ್ಮ.ಎನ್ ತಂಡ, ಬ್ಯಾಂಡ್ ಸೆಟ್ ನಲ್ಲಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಹೇಶ ಸಿ ತಂಡ , ನಾದಸ್ವರದಲ್ಲಿ ಶ್ರೀರಂಗಪಟ್ಟಣ ಅಜಯ್.ಕೆ ತಂಡ, ಮಹಿಳಾ ಕೋಲಾಟದಲ್ಲಿ ಹೊಸಗಾವಿ ಶ್ರೀ ವಿನಾಯಕ ಮಹಿಳಾ ಕೋಲಾಟ ತಂಡದವರಿದ್ದರು.

ಸ್ಥಬ್ದ ಚಿತ್ರಗಳ ಮೆರಗು.

ರೇಷ್ಮೆ ಇಲಾಖೆಯಿಂದ ರೇಷ್ನೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳು, ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು. ಎರಡು ಗಂಟೆಯೂ ಹೆಚ್ಚು ಕಾಲ ಮೆರವಣಿಗೆ ನಡೆದು ಸಂಜೆ ಸಂಪನ್ನಗೊಂಡಿತು.

Tags: Darshan PuttanaiahDistrict Collector Dr. KumarHealth Minister Dinesh GunduraoMLAs P RavikumarRevenue Minister Krishna BhairegowdaSrirangapatna DasaraSrirangapatna MLA and Shri Chamundeshwari Power Supply Corporation Limited Chairman AB Ramesh Bandissidde Gowda
Previous Post

ಶ್ರೀರಂಗಪಟ್ಟಣದಲ್ಲಿ ದಸರಾ ಆನೆ ರಂಪಾಟ, ದಿಕ್ಕಾಪಾಲಾಗಿ ಓಡಿದ ಜನ :ತಪ್ಪಿದ ಭಾರಿ ಅನಾಹುತ!

Next Post

ರೇಣುಕಸ್ವಾಮಿ ಹತ್ಯೆ ಕೇಸ್​:ಆರೋಪಿ ದರ್ಶನ್​ ಜಾಮೀನು ಅರ್ಜಿ ಅ.5ಕ್ಕೆ ಮುಂದೂಡಿಕೆ

Related Posts

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
0

ಬೆಳಗಾವಿ: ಬೆಂಗಳೂರು ಮೈಸೂರು ಇನ್ಸ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್(Supreme Court) ಆದೇಶ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಯೋಜನೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು...

Read moreDetails
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

December 18, 2025
Next Post

ರೇಣುಕಸ್ವಾಮಿ ಹತ್ಯೆ ಕೇಸ್​:ಆರೋಪಿ ದರ್ಶನ್​ ಜಾಮೀನು ಅರ್ಜಿ ಅ.5ಕ್ಕೆ ಮುಂದೂಡಿಕೆ

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ
Top Story

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!