ಕೇಂದ್ರ ಸಚಿವ HD ಕುಮಾರಸ್ವಾಮಿ ಬೆಂಗಳೂರಿನ HMT ಕ್ಯಾಂಪಸ್ನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೆಂಟರ್ ಫಾರ್ ಎಕ್ಸಲೆನ್ಸಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಬಳಿಕ ಸ್ವಚ್ಛ ಭಾರತ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. HMT ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಇತರೆ ಉನ್ನತ ಅಧಿಕಾರಿಗಳು ಹಾಗೂ ಎಕ್ಸಲೆನ್ಸಿ ಕೇಂದ್ರದ ಅನೇಕ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಮಾತನಾಡಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಮುಡಾ ಬೆಳವಣಿಗೆ ಬಗ್ಗೆ ವಾಗ್ದಾಳಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕೋರ್ಟ್ನಲ್ಲಿ ನಿವೇಶನಗಳು ನಮ್ಮದೇ ಎಂದು ಹೇಳಿದ್ದಾರೆ. ಆಸ್ತಿ ವಿವಾದ ಕೋರ್ಟ್ ಅಂಗಳದಲ್ಲಿದೆ. ಯಾವ ಆಧಾರದ ಮೇಲೆ ಸೈಟ್ ವಾಪಸು ತೆಗೆದುಕೊಳ್ಳುತ್ತಾರೆ. ಮುಡಾ ಕಮಿಷನರ್ಗೆ ಸೈಟ್ ವಾಪಸ್ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಆ ಅಧಿಕಾರಿಯನ್ನ ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳನ್ನ ಮುಖ್ಯಮಂತ್ರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತಾನೂ ಇದೇ ವೇಳೆ ಆರೋಪಿಸಿದ್ರು.
ಮುಡಾ ಕಮಿಷನರ್ ಯಾವ ಆಧಾರದ ಮೇಲೆ ಸೈಟ್ ವಾಪಸ್ ಪಡೆದ್ರು ಎಂದಿರುವ ಕುಮಾರಸ್ವಾಮಿ, ಅದು ಯಾರ ಆಸ್ತಿ..? ಗ್ರಾಂಟ್ ಆಗಿರುವ ಲ್ಯಾಂಡ್. ಅದನ್ನ ಖರೀದಿ ಮಾಡಿ ಗಿಫ್ಟ್ ಕೊಟ್ರು. ಬಳಿಕ ಕೋರ್ಟ್ನಲ್ಲಿ ನನ್ನದೇ ಆಸ್ತಿ ಎಂದಿದ್ದಾರೆ. ಜುಜುಬಿ ನಿವೇಶನಗಳು ಅಂತಾನೂ ಹೇಳಿದ್ರು. ಆ ಬಳಿಕ 62 ಕೋಟಿ ಬೆಲೆ ಬಾಳುವ ಆಸ್ತಿ ಅಂದಿದ್ದರು. ಈಗ ಮುಡಾ ಅಧಿಕಾರಿ ಎಲ್ಲಿಗೆ ಬಂದು ವಾಪಸ್ ಪಡೆಯುವ ಮನವಿ ಪತ್ರ ಪಡೆದ್ರು..? ಎಷ್ಟು ಅಧಿಕಾರ ದುರುಪಯೋಗ ಆಗಿದೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಪತ್ನಿ ಪತ್ರ ಬರೆದಿದ್ದಾರೆ. ಮೂವತ್ತು ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ತಪ್ಪು ಮಾಡಿಲ್ಲ ಅಂದ್ರು. ಸೈಟ್ ವಾಪಸ್ ಮಾಡುವ ಮೂಲಕ ಮುಡಾ ಕೇಸ್ಗೆ ಬೆಣೆ ಹೊಡೆಯುವ ಕೆಲಸ ಮಾಡಿದ್ದಾರೆ. ನನ್ನ ಪತ್ನಿ ಸೈಟ್ ವಾಪಸ್ ಕೊಟ್ಟಿರುವುದು ಗೊತ್ತೆ ಇಲ್ಲ ಅಂದ್ರು, ಅಧಿಕಾರಿ ಎಲ್ಲಿಗೆ ಬಂದಿದ್ರು..? ಯಾರ ಕೈಯಿಂದ ದಾಖಲೆ ತೆಗೆದುಕೊಂಡು ಹೋದ್ರು ಎಲ್ಲವೂ ಗೊತ್ತಿದೆ. ಮೇಡಂ ಬಳಿ ಅವರೇ ಬಂದು ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿ ಕಚೇರಿಗೆ ಬಂದಿದ್ರು ಅನ್ನೋದಾದ್ರೆ ಅದು ಕೂಡ ತನಿಖೆಯಾಗಲಿ ಎಂದು ಕುಮಾರಸ್ವಾಮಿ ಆಗ್ರಹ ಮಾಡಿದ್ದಾರೆ.