ಜೂ.ಎನ್.ಟಿ.ಆರ್ (Jr. NTR) ನಟನೆಯ ದೇವರ ಸಿನಿಮಾ ರಿಲೀಸ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿರುವ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ (Director prashanth neel) ಹಾಗೂ ಜೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ನ ಸಿನಿಮಾ ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೆಟ್ಟೇರಿದೆ.
ಈಗಾಗಲೇ ಚಿತ್ರತಂಡದಿಂದ ಶೂಟಿಂಗ್ ಗೆ ಸಕಲ ಸಿದ್ಧತೆ ನಡೆದಿದ್ದು, ಪ್ರಮುಖ ಪಾತ್ರಗಳ ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.ಮೂಲಗಳ ಮಾಹಿತಿ ಪ್ರಕಾರ ಈ ಸಿನಿಮಾಗೆ ನಾಯಕಿಯಾಗಿ ಕನ್ನಡದ ಹುಡುಗಿ ಆಯ್ಕೆ ಆಗಿದ್ದಾರೆ.
ಹೌದು, ರಕ್ಷಿತ್ ಶೆಟ್ಟಿ (Rakshith shetty) ನಟನೆಯ ಸಪ್ತ ಸಾಗರದಾಚೆ ಎಲ್ಲೋ (SSE) ಸಿನಿಮಾದಲ್ಲಿ ಗಮನಾರ್ಹ ನಟನೆಯಿಂದ ಜನಪ್ರಿಯರಾಗಿರೋ ರುಕ್ಕಿಣಿ ವಸಂತ್ (Arukmini vasanth), ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.







