• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಸಂಗೀತ ಎಂಬುದು ಸಾಗರದಷ್ಟೇ ಆಳ, ಅಷ್ಟೇ ವಿಶಾಲ.. ಕಲಿತಷ್ಟು ಇಲ್ಲಿ ಹೊಸದು ಸಿಗುತ್ತಲೇ ಹೋಗುತ್ತದೆ”:ಚೇತನ್‌ ರಾವ್‌”

ಪ್ರತಿಧ್ವನಿ by ಪ್ರತಿಧ್ವನಿ
September 24, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಒಂದು ಸಿನಿಮಾ ಗೆಲ್ಲಬೇಕಾದರೆ, ನಟರ ನಟನೆ ಮಾತ್ರವಷ್ಟೇ ಅಲ್ಲದೆ, ತೆರೆಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಪ್ರಮಾಣದಲ್ಲಿರಬೇಕು. ತೆರೆಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗಿಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ಇದೀಗ ಕನ್ನಡದ ಯುವ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಚೇತನ್‌ ರಾವ್‌ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.

ADVERTISEMENT

ಹೌದು, ಕನ್ನಡಿಗ ಅದರಲ್ಲೂ ಬೆಂಗಳೂರಿಗರಾದ ಚೇತನ್‌ ರಾವ್‌, ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ ಮುಗಿಸಿ, ಆಯ್ದುಕೊಂಡಿದ್ದು ಸಂಗೀತ ಕ್ಷೇತ್ರವನ್ನು. ಚೆನ್ನೈನಲ್ಲಿರುವ ಲಂಡನ್‌ ಮೂಲದ Middlesex Universityಯಲ್ಲಿ ಸಂಗೀತ ಕೋರ್ಸ್‌ ಮುಗಿಸಿದ್ದಾರೆ. ಕೇವಲ ಸಂಗೀತಗಾರರಷ್ಟೇ ಅಲ್ಲ ಒಳ್ಳೆಯ ಹಾಡುಗಾರರೂ ಹೌದು. ಅವರು ತಮ್ಮ ಗುರು ಸಂಗೀತಾ ಕಟ್ಟಿ ಅವರಿಂದ ಹಿಂದೂಸ್ತಾನಿ ಸಂಗೀತ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಸಂಗೀತದಲ್ಲಿ ಇಲ್ಲಿಯವರೆಗೆ ಸಾಧಿಸಿದ ಎಲ್ಲಾ ಪ್ರಗತಿಯನ್ನು ಅವರಿಗೆ ಅರ್ಪಿಸುತ್ತಾರೆ.

ಆಸ್ಕರ್ ಪ್ರಶಸ್ತಿ ಪಡೆದಿರುವ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ. ಆರ್‌ ರೆಹಮಾನ್‌( Music Director A. R Rahman)ಅವರ ಜತೆಗೆ ಈ ಹಿಂದೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಚೇತನ್‌ ಅವರಿಗಿದೆ. ಇದೀಗ ರೆಹಮಾನ್‌ ಅವರ ಒಪೆರಾ ಬ್ಯಾಂಡ್‌ ಆದ ಸೆಂಪ್ರೆ ಲಿಬೆರಾದಲ್ಲಿ ಲೀಡ್‌ ಗಾಯಕರಾಗಿ ಇಂದಿಗೂ ಸಕ್ರಿಯರಾಗಿದ್ದಾರೆ. ಕನ್ನಡ ಮತ್ತು ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಜತೆಗೆ ಗಾಯಕರಾಗಿಯೂ ಚೇತನ್‌ ಇನ್ನೂ ಚಾಲ್ತಿಯಲ್ಲಿದ್ದಾರೆ.

ಕನ್ನಡಿಗರಾಗಿ ಕನ್ನಡದಲ್ಲಿ ಏನೂ ಮಾಡೇ ಇಲ್ವಾ? ಅನ್ನೋ ಹಾಗಿಲ್ಲ. ಏಕೆಂದರೆ ಇದೇ ವರ್ಷದ ಫೆಬ್ರವರಿ 16ರಂದು ಬಿಡುಗಡೆ ಆಗಿದ್ದ ದೀಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸಿದ್ದ KTM ಚಿತ್ರದ ಹಾಡುಗಳಿಗೆ ಮತ್ತು ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದರು. ಬಿಡುಗಡೆಯಾದ 5 ವಾರಗಳ ಕಾಲ ಈ ಸಿನಿಮಾ ಚಿತ್ರಮಂದಿರದಲ್ಲಿ ಓಡಿತ್ತು. ಹಾಡುಗಳಿಂದಲೇ ಮೋಡಿ ಮಾಡಿತ್ತು.

ಇದೀಗ ಇದೇ ಚೇತನ್‌ ರಾವ್‌ ಅವರ ‘ಸರ್ವಸ್ವ’ ಹಾಡು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸೆಪ್ಟೆಂಬರ್ 20ರಂದು ಎಲ್ಲರ ಕಿವಿಗೆ ಅಪ್ಪಳಿಸಲಿದೆ. ಈ ಹಾಡಿನ ಸಾಹಿತ್ಯವನ್ನು ಬರೆಯುವುದರ ಜತೆಗೆ ಇದರ ನಿರ್ದೇಶನವನೂ ಮಾಡಿದ್ದಾರೆ ಅರ್ಜುನ್ ಕಿಶೋರ್ ಚಂದ್ರ. ಈಗಾಗಲೇ ಹಿಟ್‌ ಪಟ್ಟಿ ಸೇರಿರುವ ‘ನಿನ್ನ ಗುಂಗಲ್ಲಿ’ ಹಾಡಿಗೂ ಅರ್ಜುನ್ ಕಿಶೋರ್ ಸಾಹಿತ್ಯ ಒದಗಿಸಿದ್ದರು.

ಸಿನಿಮಾ ಜತೆ ಜತೆಗೆ ಅಮೆರಿಕಾ, ದುಬೈ, ಯೂಕೆ ಸೇರಿ ವಿಶ್ವದ ಹಲವೆಡೆ ಹಾಡುಗಳ ಪ್ರದರ್ಶಕರಾಗಿ ಫರ್ಫಾಮನ್ಸ್‌ ನೀಡಿದ್ದಾರೆ. ‘ಆರಿಜಿನ್ ಈಸ್ಟ್ ಮ್ಯೂಸಿಕ್’ ಶೀರ್ಷಿಕೆಯ ಆಡಿಯೊ ಕಂಪನಿಯ ಸಂಸ್ಥಾಪಕರೂ ಹೌದು ಅದರ ನಿರ್ದೇಶಕರಲ್ಲಿಯೂ ಒಬ್ಬರು. ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಸಂಗೀತ ನೀಡಿದ್ದಾರೆ. ಟ್ವಿಟರ್‌, ಹಿಮಾಲಯ, ಪಾಂಡ್ಸ್‌ ಸೇರಿ ಹಲವು ಬ್ರಾಂಡ್‌ಗಳಿಗೂ ಜಿಂಗಲ್ಸ್‌ ಮಾಡಿದ್ದಾರೆ ಚೇತನ್‌ ರಾವ್.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'guru sangita katti.Music Director Chetan Rao"
Previous Post

ಹೈಕೋರ್ಟ್‌ ಆದೇಶ ಬೆನ್ನಲ್ಲೇ ರಾಜ್ಯಾದ್ಯಂತ ಪ್ರತಿಭಟನೆ..

Next Post

ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಬೆನ್ನಲ್ಲೇ ಸಿಎಂಗೆ ಮತ್ತೊಂದು ಸಂಕಷ್ಟ..!

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 18, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ  ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್.‌ ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

April 18, 2026
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು!

ದೇವಾಲಯಗಳ ಚಿನ್ನ ಬಳಕೆ ಬಗ್ಗೆ ಫಾದರ್ ಪೌಲ್ ಹೇಳಿಕೆ ವಿವಾದಕ್ಕೆ ದಾರಿ

April 18, 2026
ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್

ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್

April 17, 2026
Next Post

ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಬೆನ್ನಲ್ಲೇ ಸಿಎಂಗೆ ಮತ್ತೊಂದು ಸಂಕಷ್ಟ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada