• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು.. ಯಾರು ಏನಂದ್ರು..?

ಕೃಷ್ಣ ಮಣಿ by ಕೃಷ್ಣ ಮಣಿ
September 20, 2024
in Top Story, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು.. ಯಾರು ಏನಂದ್ರು..?
Share on WhatsAppShare on FacebookShare on Telegram

ADVERTISEMENT

ತಿರುಪತಿ ಲಡ್ಡುಗೆ ಹಂದಿ, ದನದ ಕೊಬ್ಬು ಹಾಕಿದ್ದಾರೆ ಅನ್ನೋ ವಿಚಾರವಾಗಿ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಆಘಾತ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯ ಮಾಡಿದ್ದು, ಸನಾತನ ಧರ್ಮ ರಕ್ಷಣಾ ಮಂಡಳಿ ರಚಿಸುವ ಮೂಲಕ ಸನಾತನ ಧರ್ಮವನ್ನು ಅಪವಿತ್ರ ಆಗದಂತೆ ತಡೆಯಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಬೇಕು ಎಂದಿದ್ದಾರೆ ಪವನ್ ಕಲ್ಯಾಣ್‌. ಜೊತೆಗೆ ಟಿಟಿಡಿ ಆಡಳಿತ ಮಂಡಳಿ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಅಂತಾನೂ ಹೇಳಿದ್ದಾರೆ.

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಬಗ್ಗೆ ಅಯೋಧ್ಯೆ ಮಂದಿರ ಅರ್ಚಕ ಸತ್ಯೇಂದ್ರ ದಾಸ್ ಮಾತನಾಡಿದ್ದಾರೆ. ಇದು ಸನಾತನ ಧರ್ಮಕ್ಕೆ ಮಾಡಿದ ಅಪಮಾನ, ಮೀನಿನ ಎಣ್ಣೆ, ದನ, ಹಂದಿ ಕೊಬ್ಬು ಬಳಸಿಸುವುದು ವ್ಯವಸ್ಥಿತವಾದ ಪಿತೂರಿ ರೀತಿ ಕಾಣುತ್ತಿದೆ ಎಂದು ಅಯೋಧ್ಯೆ ಮಂದಿರ ಅರ್ಚಕ ಸತ್ಯೇಂದ್ರ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುಪತಿ ಪ್ರಸಾದಕ್ಕೆ ಅಪಮಾನ ಮಾಡಿದ್ದಾರೆ ಎಂದು ತಿರುಮಲ ದೇಗುಲದ ಮಾಜಿ ಅರ್ಚಕ ರಮಣ ದೀಕ್ಷಿತಲು ಹೇಳಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಇದನ್ನು ಹೇಳಿದ್ದೇನೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೂ ನಾನು ತಂದಿದ್ದೆ. ಟ್ರಸ್ಟ್ ಗಮನಕ್ಕೆ ತಂದರೂ ಅವರು ಸುಮ್ಮನಾದರು, ಹೀಗಾಗಿ ಹೋರಾಟದಲ್ಲಿ ನಾನು ಏಕಾಂಗಿ ಆಗಬೇಕಾಯ್ತು ಎಂದು ದೇಗುಲ ಮಾಜಿ ಅರ್ಚಕ ರಮಣ ದೀಕ್ಷಿತಲು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಮಾತನಾಡಿ, ಆಂಧ್ರಪ್ರದೇಶ ಸಿಎಂ ಏನೆಲ್ಲಾ ಆರೋಪ ಮಾಡಿದ್ದಾರೆ, ಆ ವಿಚಾರ ಅತ್ಯಂತ ಗಂಭೀರ ಆಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಷೀದ್‌ ಅಲ್ವಿ ಮಾತನಾಡಿ, ತಿರುಪತಿ ಅನ್ನೋದು ನಂಬಿಕೆಯ ಕ್ಷೇತ್ರವಾಗಿದ್ದು, ಈ ರೀತಿಯ ಘಟನೆಗಳು ಆಗಿದ್ದರೆ, ನಂಬಿಕೆಯನ್ನು ಹಾಳು ಮಾಡುವ ಉದ್ದೇಶವಾಗಿದೆ. ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿಗೆ ಅರ್ಹತೆಯಿಲ್ಲ. ಈ ರೀತಿಯ ಘಟನೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿರಲಿಲ್ಲ ಎಂದಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿ ಲಡ್ಡು ಪ್ರಸಾದದ ಬಗ್ಗೆ ಕೇಂದ್ರ ಸಚಿವ ಬಂಡಿ ಸಂಜಯ್‌ ಮಾತನಾಡಿ, ತಿರುಪತಿ ಲಡ್ಡನ್ನು ಭಕ್ತರು ಶ್ರೇಷ್ಠ ಎಂದು ಭಾವಿಸ್ತಾರೆ. ಈ ಘಟನೆ ಕ್ಷಮೆಗೆ ಅರ್ಹವಾದುದಲ್ಲ. ಹಿಂದಿನ ಸರ್ಕಾರದಲ್ಲಿ ಈ ರೀತಿಯ ಘಟನೆ ನಡೆದಿದೆ. ಬೇರೆ ಧರ್ಮದವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Tags: animal fat in tirupati ladduchandrababu alleges use of animal fat in tirupati ladduimages for laddu scam in tirupatiladduladdu scamladdu scam busted in tirupatiladdu scam in tirupatitirumala laddu scamtirumala tirupati laddutirupatiTirupati Laddutirupati laddu animal fattirupati laddu controversytirupati laddu issuetirupati laddu newstirupati laddu prasadam animal fattirupati laddu recipetirupati laddu row
Previous Post

ನೀರು ಕುಡಿಯಲು ಹೋದಾಕೆಯ ಸುತ್ತಿಕೊಂಡ ದೈತ್ಯ ಹೆಬ್ಬಾವು:2 ಗಂಟೆಗಳ ಕಾಲ ಸೆಣಸಾಡಿ ಕೊನೆಗೂ ಬಚಾವಾದ ಮಹಿಳೆ..!

Next Post

ದಯವಿಟ್ಟು ಸಿನಿಮಾನ ಥಿಯೇಟರ್‌ನಲ್ಲಿ ಬಂದು ನೋಡಿ ಪ್ಲೀಸ್‌ ನಟಿ ರಾದ್ಯ..!

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post

ದಯವಿಟ್ಟು ಸಿನಿಮಾನ ಥಿಯೇಟರ್‌ನಲ್ಲಿ ಬಂದು ನೋಡಿ ಪ್ಲೀಸ್‌ ನಟಿ ರಾದ್ಯ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada