ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಆಗಿದೆ. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಮಹಿಳೆಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಪೊಲೀಸರು. ಕೋವಿಡ್ ಸಮಯದಲ್ಲಿ ನನ್ನ ಸೇವೆ ಗುರುತಿಸಿ ಕರೆ ಮಾಡಿದ್ದ ಮುನಿರತ್ನ. ‘ನಮಸ್ತೆ ಲೀಡರ್ ನಾನು ನಿಮ್ಮ ಭಾಗದ ಶಾಸಕ, ನನ್ನನ್ನು ಬಂದು ಭೇಟಿ ಮಾಡಿ ಅಂತ ಕರೆ ಹೇಳಿದ್ದರು. ಆ ಭೇಟಿ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆಗ್ಗಾಗ್ಗೆ ವೀಡಿಯೊ ಕಾಲ್‌ನಲ್ಲಿ ಮಾತನಾಡ್ತಿದ್ರು. ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ ನಾನು
ನಿರಾಕರಿಸಿದ್ದೆ.
ಆ ಬಳಿಕ ಒಂದು ಕಡೆಗೆ ಬರೋದಕ್ಕೆ ಹೇಳಿ, ನಿನ್ನ ನೋಡಿದ್ರೆ ಮೈ ಜುಮ್ಮೆನ್ನುತ್ತದೆ ಎಂದು ತಬ್ಬಿಕೊಳ್ಳಲು ಮುಂದಾದ್ರು ಎಂದಿದ್ದಾರೆ. ಇನ್ನು ತಬ್ಬಿಕೊಳ್ಳೋದಕ್ಕೆ ನಾನು ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದರು. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ, ನಾನು ಶಾಸಕನಿದ್ದೇನೆ. ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ, ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಅಂತಾ ಹೆದರಿಸಿ ಅತ್ಯಾಚಾರ ಎಸಗಿದ್ರು. ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವಿಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿವೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ನಾನು ಹೇಳಿದಂತೆ ಕೇಳಬೇಕು ಅಂತಾ ಹನಿಟ್ರ್ಯಾಪ್ ಮಾಡುವಂತೆ ಹೇಳಿ ನನ್ನು ಬಳಸಿಕೊಂಡರು ಎಂದಿದ್ದಾರೆ.
ನನ್ನ ಜೊತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ನನಗೆ ತೋರಿಸಿದ್ದಾರೆ. ಇದೇ ವಿಡಿಯೊ ಇಟ್ಕೊಂಡು 2020 ರಿಂದ 2022ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್‌ಗೂ ಬಳಕೆ ಮಾಡಿಕೊಂಡಿದ್ದಾರೆ. ನಾನು ಹೇಳಿದಂತೆ ಕೇಳಲಿಲ್ಲ ಅಂದ್ರೆ ನಿನ್ನ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸೋದಾಗಿ ಬೆದರಿಕೆ ಹಾಕಿದ್ದಾರೆ. ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜೊತೆಗೂ ಸೇರಿಕೊಂಡ ಆತ ಹೇಳಿದವರನ್ನ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮರ್ಯಾದೆ ಹಾಗು ಪ್ರಾಣಕ್ಕೆ ಅಂಜಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದಿದ್ದಾರೆ. ಆದರೆ ಯಾರೆಲ್ಲಾ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.