ಜಾತಿನಿಂದನೆ ಆಯ್ತು.ಈಗ (Rape case)ರೇಪ್ ಕೇಸ್ MLA Muniratna ಮುನಿರತ್ನಗೆ ಮಹಾಸಂಕಷ್ಟ.! ಗುತ್ತಿಗೆದಾರರೊಬ್ಬರಿಗೆ (contractor)ಬೆದರಿಕೆ ಹಾಗೂ ಜಾತಿನಿಂದನೆ (Caste abuse)ಆರೋಪದ ಮೇಲೆ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಶಾಸಕರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ರಾಮನಗರ ಜಿಲ್ಲೆ ವ್ಯಾಪ್ತಿಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಬುಧವಾರ ಮುನಿರತ್ನ ತನ್ನ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.ಇದೀಗ ಮುನಿರತ್ನ ಸೇರಿದಂತೆ 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ತಡರಾತ್ರಿಯ ವರೆಗೆ ವಿಚಾರಣೆ ನಡೆಸಿದ್ದು, ಶಾಸಕ ಮುನಿರತ್ನ ಎ1 ಆರೋಪಿಯಾಗಿದ್ದರೆ, ವಿಜಯ್ ಕುಮಾರ್, ಕಿರಣ್, ಲೋಹಿತ್, ಮಂಜುನಾಥ್, ಲೋಕೇಶ್ ಎನ್ನುವವರ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಪ್ರಕಾರ, ಮುನಿರತ್ನ ಸಂತ್ರಸ್ತ ಮಹಿಳೆಯನ್ನು ಖಾಸಗಿ ಸ್ಥಳಕ್ಕೆ ಕರೆಸಿಕೊಂಡು ಬಳಿಕ ಅತ್ಯಾಚಾರ ಎಸಗಿದ್ದರು. ಇದರ ವಿಡಿಯೋ ಮಾಡಿಕೊಂಡು ಅನೇಕ ಬಾರಿ ಅನುಚಿತವಾಗಿ ವರ್ತಿಸಿದ್ದಾರೆ. ನಾನು ಹೇಳಿದಂತೆ ಕೇಳದಿದ್ದರೆ ಪತಿ, ಮಕ್ಕಳಿಗೆ ವಿಡಿಯೋ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.