ಯಾದಗಿರಿ,:ಕಲ್ಯಾಣ ಕರ್ನಾಟಕದ (Kalyan Karnataka)ಸ್ವಾಂತ್ರತ್ಯ ಹೋರಾಟ ಗಾರ ದಿ.ವಿಶ್ವನಾಥರೆಡ್ಡಿ ಮುದ್ನಾಳ ಅವರ ಪುತ್ರ, ಮಾಜಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ (Former MLA Venkatareddygowda Mudna)(70) ತೀವ್ರ ಅನಾರೋಗ್ಯದಿಂದ ಇಂದು( passed away)ನಿಧನರಾಗಿದ್ದಾರೆ.
ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡರಾಗಿದ್ದ ಅವರು ಕಳೆದ ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿದ್ದ ಮುದ್ನಾಳ ಅವರು ಕಳೆದ ವಿಧಾನಸಭಾ ಚುನಾವಣೆಯ ನಂತರ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. 2018ರಲ್ಲಿ ಬಿಜೆಪಿಯಿಂದ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮುದ್ನಾಳ ಅವರು 2023ರಲ್ಲಿ ಪರಾಭವಗೊಂಡಿದ್ದರು.
ಕಲ್ಯಾಣ ಕರ್ನಾಟಕದ ಸ್ವಾಂತ್ರತ್ಯ ಹೋರಾಟಗಾರ ದಿ. ವಿಶ್ವನಾಥರಡ್ಡಿ ಮುದ್ನಾಳ ಅವರ ಪುತ್ರರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ನಿಧನರಾಗಿದ್ದಾರೆ.