ಅಮೆರಿಕಾ ಪ್ರವಾಸ (America tour) ಮುಗಿಸಿ ಬೆಂಗಳೂರಿಗೆ (Bangalore) ವಾಪಸ್ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (Dcm dk shivakumar) ಶಾಸಕ ಮುನಿರತ್ನ (muniratna) ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಾಸಕ ಮುನಿರತ್ನಾ ಬಂಧನದ ಬಗ್ಗೆ ಬಿಜೆಪಿಯವರೇ ಹೇಳಬೇಕು, ವಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಂತ್ರಿಗಳು ಮಾತಾಡಬೇಕು ಎಂದಿದ್ದಾರೆ.
ಕೇಚಲ ರಾಜಕಾರಣಿಗಳು ಮಾತ್ರವಲ್ಲ, ಸಮುದಾಯದ ಮುಖ್ಯಸ್ಥರು, ಸ್ವಾಮಿಗಳು ಮತ್ತು ಹಿರಿಯರು ಮಾತಾಡಬೇಕು. ಶಾಸಕರು ಮಾತನಾಡಿರುವುದು ಸರಿ ಅಂದ್ರೆ ಸರಿ, ತಪ್ಪು ಇದ್ರೆ ತಪ್ಪು ಅಂತ ಹೇಳಬೇಕು 20໖.
ಇದೇ ವೇಳೆ, ವಿದೇಶದಲ್ಲಿ ರಾಹುಲ್ ಗಾಂಧಿ (Rahul gandhi) ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕಾಂಗ್ರೆಸ್ ಪಾರ್ಟಿ, ನಮ್ಮ ಲೀಡರ್ ಭೇಟಿ ಮಾಡಲು ನಾನು ಯಾರ ಅನುಮತಿ ಕೇಳಬೇಕಾಗಿಲ್ಲ, ನಮ್ಮ ನಾಯಕರು ಮತ್ತು ನಮ್ಮ ಕುಟುಂಬಸ್ಥರ ಜೊತೆ ಏನು ಮಾತನಾಡುತ್ತೇನೆ ಎಂದು ಹೇಳಕ್ಕೆ ಆಗಲ್ಲ ಅಂತ ಹೇಳಿದ್ದಾರೆ.