ಹೈದರಾಬಾದ್ನ (Hyderabad)ಖೈರತಾಬಾದ್ ಗಣೇಶ ಉತ್ಸವದಲ್ಲಿ (Ganesha festival)ಮಹಿಳಾ ಭಕ್ತರೊಂದಿಗೆ ಅನುಚಿತವಾಗಿ (inappropriately)ವರ್ತಿಸಿದ 285 persons)ವ್ಯಕ್ತಿಗಳನ್ನು ಒಂದು ವಾರದೊಳಗೆ ಬಂಧಿಸಲಾಗಿದೆ. ತೆಲಂಗಾಣ ಪೊಲೀಸ್ (Telangana Police )ಮಹಿಳಾ ಸುರಕ್ಷತಾ ವಿಭಾಗವು ಈ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ ನ ಓಲ್ಡ್ ಸಿಟಿಯಲ್ಲಿ ನಡೆದ ಜನಪ್ರಿಯ ಉತ್ಸವದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು.
ಇಂತವರನ್ನ She ತಂಡ ಬಂಧಿಸಿದೆ ಮುಂದಿನ ಕಾನೂನು ಕ್ರಮಕ್ಕಾಗಿ ಅಪರಾಧಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಇಂತಹ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಒತ್ತಿ ಹೇಳಿದ ಅಧಿಕಾರಿಗಳು, ಕಿರುಕುಳ ಅಥವಾ ಚುಡಾಯಿಸುವ ಘಟನೆಗಳ ಬಗ್ಗೆ ವರದಿ ಮಾಡುವಂತೆ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.
Your behavior is being recorded by our She Teams on the roads, public places and wherever you are misbehaving, killing your ill intentions is the only mantra to keep you safe from being jailed.#SheTeams #HyderabadCityPolice pic.twitter.com/w9OHMYPAaX
— Hyderabad City Police (@hydcitypolice) September 14, 2024
ತೆಲಂಗಾಣ ಪೊಲೀಸರ ವಿಭಾಗವಾದ ಶೀ ಟೀಮ್ಸ್, ಎಲ್ಲರಿಗೂ ರಕ್ಷಣೆ ನೀಡಲು ಮತ್ತು ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಾಥಮಿಕವಾಗಿ ಕಾರ್ಯನಿರತ ಸಾರ್ವಜನಿಕ ಪ್ರದೇಶಗಳಲ್ಲಿ ಕಿರುಕುಳ ನೀಡುವವರನ್ನು ಬಂಧಿಸಲು ಸಣ್ಣ ತಂಡವಾಗಿ ಶಿ ಟೀಮ್ ಕಾರ್ಯನಿರ್ವಹಿಸುತ್ತದೆ.