ಪ್ರಧಾನಿ ನರೇಂದ್ರ ಮೋದಿ (Pm narendra modi) ನವದೆಹಲಿಯ ತಮ್ಮ ನಿವಾಸದಲ್ಲಿ ಭಾರತದ ಪ್ಯಾರಿಸ್ ಪ್ಯಾರಾಲಿಂಪಿಯನ್‌ಗಳನ್ನು (Paralympics) ಭೇಟಿಯಾಗಿ ಶುಭಾಶಯ ಕೋರಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪ್ಯಾರಾ ಅಥ್ಲೆಟ್‌ಗಳೊಂದಿಗೆ ಸಂವಾದ ನಡೆಸಿದರು.
ಐತಿಹಾಸಿಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಈ ಬಾರಿ 29 ಪದಕಗಳನ್ನು ಗೆದ್ದುಕೊಂಡಿದೆ. ಪ್ಯಾರಿಸ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದ ಶೂಟರ್ ಅವನಿ ಲೆಖರಾ ಪ್ರಧಾನಿ ಮೋದಿಗೆ ಸಹಿ ಮಾಡಿದ ಟೀ ಶರ್ಟ್ ಅನ್ನ ಉಡುಗೊರೆಯಾಗಿ ನೀಡಿದರು.
ಪ್ಯಾರಾಲಿಂಪಿಯನ್ ಜೊತೆ ಕುಳಿತು ಅಶ್ಲೀಟ್ ಉಡುಗೊರೆಯಾಗಿ ನೀಡಿದ ಟೋಪಿ ಸ್ವೀಕರಿಸಿದರು. ಈಗಾಗಲೇ ಕೇಂದ್ರ ಕ್ರೀಡಾ ಇಲಾಖೆಯ ವತಿಯಿಂತ ಪದಕ ಗೆದ್ದಿರುವ ಪ್ಯಾರಾಲಂಪಿಕ್ಸ್ ಚಾಂಪಿಯನ್ ಗಳಿಗೆ ನಗದು ಬಹಮಾನ ಘೋಷಣೆ ಮಾಡಲಾಗಿದೆ.