ವಿಶ್ವದಾದ್ಯಂತ ಈಗಾಗಲೇ ಹಲವು ದೇಶಗಳಲ್ಲಿ ಎಂಪಾಕ್ಸ್ (Mpox) ಭಯ ಆವರಿಸಿದ್ದು, ಇದೀಗ ಈ ವೈರಸ್ ಭಾರತಕ್ಕೂ (India) ಕಾಲಿಟ್ಟಿದ್ಯಾ ಎಂಬ ಆತಂಕ ಮನೆ ಮಾಡಿದೆ. ನಿನ್ನೆಯಷ್ಟೇ ಭಾರತದಲ್ಲಿ ಮೊದಲ ಶಂಕಿತ ಎಂಪಾಕ್ಸ್ ಪ್ರಕರಣ ದಾಖಲಾಗಿದೆ.
ವಿದೇಶದಿಂದ ಭಾರತಕ್ಕೆ ಬಂದ ಯುವಕನೊಬ್ಬನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿದ್ದು,ಮಂಕಿಪಾಕ್ಸ್ ಭೀತಿ ಎದುರಾಗಿದೆ. ಈಗಾಗಲೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಐಸೋಲೆಟ್ (Isolate) ನಲ್ಲಿ ಇಡಲಾಗಿದ್ದು,ವ್ಯಕ್ತಿಯ ರಕ್ತದ ಸ್ಯಾಂಪಲ್ಗಳನ್ನು (blood sample) ಪರಿಶೀಲಿಸಲಾಗುತ್ತಿದೆ.
ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಯುವಕನ ಆರೋಗ್ಯ ಸದೃಢವಾಗಿದ್ದು, ಈ ಒಂದು ಪ್ರಕರಣವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ NCDC ಗಮನಿಸುತ್ತಿದ್ದು, ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ.