ಉಪಚುನಾಣೆಯ ಹಿನ್ನಲೆ, ಒಂದು ವೇಳೆ ಬಿಜೆಪಿಯಿಂದ (Bjp) ಚನ್ನಪಟ್ಟಣ (Channapattana) ಕ್ಷೇತ್ರದಲ್ಲಿ ಸೀಟು ಸಿಗದಿದ್ರೆ,ರಾಮನಗರದಿಂದ (Ramanagar) ಸ್ಪರ್ಧಿಸೋದಾಗಿ ಸಿ.ಪಿ ಯೋಗೀಶ್ವರ್ (CP Yogeshwar) ಹೇಳಿಕೆ ನೀಡಿದ್ರು.ಇದೀಗ ಸಿಪಿವೈ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD kumaraswamy) ಗರಂ ಆಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸಿಪಿ ಯೋಗೀಶ್ವರ್ ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ (Jds ticket) ಬಯಸಿದ್ರು.ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad joshi) ನೇತೃತ್ವದ ಸಭೆ ನಡೆಸಲಾಗಿತ್ತು.ಆಗ ಸಿಪಿವೈ ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಅಂತ ಸೂಚಿಸಿದ್ರು.
ಆದ್ರೀಗ ಧಿಡೀರ್ ಸಿಪಿವೈ ನಡೆಗೆ ಹೆಚ್ಡಿ ಕುಮಾರಸ್ವಾಮಿ ಗರಂ ಆಗಿದ್ದು, ಯಾವುದೇ ಕಾರಣಕ್ಕೂ ಸಿಪಿ ಯೋಗೀಶ್ವರ್ ಗೆ ಚನ್ನಪಟ್ಟಣದಿಂದ ಟಿಕೆಟ್ ನೀಡಬಾರದು ಎಂದು ದೃಢ ನಿರ್ಧಾರ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.