
ದರ್ಶನ್ -ಪವಿತ್ರಾ ಗೌಡ ನಡುವಿನ ಸಂಬಂಧ ಏನು ಎಂಬ ಪ್ರಶ್ನೆ ಹಲವಾರು ದಿನಗಳಿಂದ ಎಲ್ಲೆಡೆ ಚರ್ಚೆಯಾಗುತ್ತಿದೆ. ಪೊಲೀಸರ ವಿಚಾರಣೆ ವೇಳೆ ಈ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ದರ್ಶನ್ ತನಿಖಾಧಿಕಾರಿಗಳ ಎದುರು ಇದಕ್ಕೆ ಉತ್ತರ ನೀಡಿದ್ದಾರೆ. ನಾನು- ಪವಿತ್ರಾಗೌಡ ಮದುವೆ ಆಗಿಲ್ಲ, ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ ಎಂದು ಕೊಲೆ ಆರೋಪಿ ನಟ ದರ್ಶನ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಮಸೇಜ್‌ಗಳನ್ನು ಮಾಡಿದ್ದಕ್ಕೆ, ಆತನನ್ನು ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

ಇದೀಗ ಇದೇ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಕಂಬಿ ಎಣಿಸುತ್ತಿದ್ದಾರೆ.
ಡಿಸಿಪಿಯಿಂದಲೇ ವಿಚಾರಣೆ ನಡೆದಾಗ ನಟ ದರ್ಶನ್ ತನ್ನ ಹಾಗೂ ಪವಿತ್ರಗೌಡ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ನಾನು ಪವಿತ್ರಾಗೌಡ ಮದುವೆ ಆಗಿಲ್ಲ. ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ ಎಂದಿದ್ದಾರೆ. ದರ್ಶನ್ ಹಾಗೂ ಪವಿತ್ರಾಗೌಡ ಲಿವಿಂಗ್ ಟುಗೆದರ್‌ನಲ್ಲಿಇರುವುದಾಗಿ ಬಾಯ್ಬಿಟ್ಟಿದ್ದಾರೆ. ಸದ್ಯ ಇಬ್ಬರ ಸಂಬಂಧದ ಬಗ್ಗೆಯೂ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.