• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪಶ್ಚಿಮಘಟ್ಟದ ನಾಶವೂ, ಮನುಜ ಸಂತತಿಯ ವಿನಾಶವೂ…!

ಪ್ರತಿಧ್ವನಿ by ಪ್ರತಿಧ್ವನಿ
September 6, 2024
in Top Story, ಇದೀಗ, ಕರ್ನಾಟಕ, ವಿಶೇಷ
0
ಪಶ್ಚಿಮಘಟ್ಟದ ನಾಶವೂ, ಮನುಜ ಸಂತತಿಯ ವಿನಾಶವೂ…!
Share on WhatsAppShare on FacebookShare on Telegram

                                                                                                            -ರೂಪ ಹಾಸನ  

ADVERTISEMENT

   ನಾನು ಮದುವೆಯಾಗಿ ಹಾಸನಕ್ಕೆ ಬಂದಾಗ, ಇದು ಅರೆಮಲೆನಾಡು ಪ್ರದೇಶವಾದ್ದರಿಂದ ಆಗಿಲ್ಲಿ ಸಮೃದ್ಧ ಮಳೆಯನ್ನು ಕಂಡು ಹೆಚ್ಚು ಸಂಭ್ರಮಿಸಿದ್ದೆ. ನಾನು ಬೆಳೆದು ಬಂದ ಬಯಲುಸೀಮೆಗಿಂತ ಇಲ್ಲಿ ಉತ್ತಮ ವಾತಾವರಣ. ಎಲ್ಲೆಲ್ಲೂ ಹಸಿರು. ಪಕ್ಕದಲ್ಲೇ ಹರಿವ ಹೇಮೆ. ಮಳೆಗಾಲದ ಜಲಪಾತಗಳು, ಝರಿಗಳು. ಹಾಗೇ ಭೂಮಿ ಮೇಲೆ ನನ್ನ ಅತ್ಯಂತ ಪ್ರಿಯವಾದ ನಿಸರ್ಗ ತಾಣ ಸಕಲೇಶಪುರ, ಚಿಕ್ಕಮಗಳೂರನ್ನು ಆವರಿಸಿರುವ ಪಶ್ಚಿಮಘಟ್ಟ ಪ್ರದೇಶವಾಗಿಬಿಟ್ಟಿತ್ತು! ಏಕೆಂದರೆ ಆಗದು ಅಷ್ಟೊಂದು ಅಪರೂಪದ ಜೀವ ವೈವಿಧ್ಯತೆಯುಳ್ಳ, ದಟ್ಟ ಮರಗಳಿಂದ ಹಸಿರು ಹೊದಿಸಿಕೊಂಡ ಚೈತನ್ಯ ತಾಣ. ಬಹುಶಃ ನಾನು ನನ್ನ ಸೀಮಿತ ಪರಿಧಿಯಲ್ಲಿ ಕಂಡಿರುವ ನಿಸರ್ಗ ತಾಣಗಳಲ್ಲಿನ ನನ್ನ ಆಯ್ಕೆ ಇದಾಗಿರಬಹುದು. ಜೊತೆಗೆ ಇವೆಲ್ಲ ಹಾಸನದ ಹತ್ತಿರದ ತಾಣಗಳೂ ಹೌದು. ಆದರೆ ಹತ್ತಿರದ್ದು ಯಾವತ್ತೂ ಸುಂದರ! ಏಕೆಂದರೆ ಅದನ್ನು ನಾವು ಹೆಚ್ಚು ಗಮನಿಸಿರುತ್ತೇವೆ ಮತ್ತು ಅರ್ಥ ಮಾಡಿಕೊಂಡಿರುತ್ತೇವೆ. ಹೀಗಾಗಿ ಅದರೊಂದಿಗೆ ನಮ್ಮ ಭಾವನಾತ್ಮಕ ಸಂಬAಧವೂ ಇರುತ್ತದೆ. 

   ಆದರೆ ವರ್ಷದಿಂದ ವರ್ಷಕ್ಕೆ ಪಶ್ಚಿಮಘಟ್ಟದ ಒಡಲೊಳಗೆ ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಾ ಬಂದ ಯೋಜನೆಗಳ ಅವೈಜ್ಞಾನಿಕ ಅನುಷ್ಠಾನದಿಂದ ದಟ್ಟಾರಣ್ಯ ಬೋಳಾಗುತ್ತಾ, ಕಾಡಿನ ಅನೇಕ ವನ್ಯ ಪ್ರಾಣಿಗಳು ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳ ಹತ್ತಿರದ ಹಳ್ಳಿಗಳಿಗೆ ನುಗ್ಗಿ ನಡೆಸುತ್ತಾ ಬಂದಿರುವ ದಾಳಿ ಮತ್ತು ದಾಂಧಲೆಯAತೂ, ಈಗ ಅನುಭವಿಸಲು ಸಾಧ್ಯವೇ ಇಲ್ಲದಂತಹ ದುರಂತ ಪರಿಸ್ಥಿತಿಯನ್ನು, ಹಂತವನ್ನೂ ನಿರ್ಮಾಣ ಮಾಡಿಬಿಟ್ಟಿವೆ. ಈ ವನ್ಯಜೀವಿಗಳೊಂದಿಗಿನ ಸಂಘರ್ಷದಲ್ಲಿ ನೂರಾರು ಜನರ ಮತ್ತು ಕಾಡುಪ್ರಾಣಿಗಳ ಜೀವ ಕಳೆದುಹೋಗುವ ಜೊತೆಗೆ, ಅಪಾರ ತೋಟ, ಗದ್ದೆ, ಹೊಲ, ಆಸ್ತಿಪಾಸ್ತಿಯೂ ನಷ್ಟವಾಗಿದೆ. ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಗೋರಿಯಲ್ಲವೇ ಎಂದು ಒದ್ದಾಡಿದ್ದೇನೆ. ಹೀಗೆಂದೇ ಪ್ರಕೃತಿಯನ್ನು ಹಾಗೂ ಅದರ ಜೀವ ವೈವಿಧ್ಯವನ್ನು ಕೇವಲ ಪ್ರೀತಿಸುವ, ಆರಾಧಿಸುವ ಹಂತದಲ್ಲಿಯೇ ನಾವು ಉಳಿದುಬಿಟ್ಟರೆ ಅದು ನಮಗೆ ನಾವೇ ಮಾಡಿಕೊಳ್ಳುವ ವಂಚನೆಯಷ್ಟೇ ಅಲ್ಲ, ನಾಗರಿಕ ದ್ರೋಹವೂ ಹೌದು! ಆದ್ದರಿಂದಲೇ ಇದೇ ಸಂದರ್ಭದಲ್ಲೇ ಪಶ್ಚಿಮಘಟ್ಟದ ಮೇಲೆ ಮತ್ತು ಒಳಗೆ ಅವ್ಯಾಹತವಾಗಿ ನಡೆಯುತ್ತಾ ಬಂದಿರುವ ಸರ್ಕಾರಗಳ, ಮಾನವ ದುರಾಚಾರಗಳ ಬಗ್ಗೆ ತೀವ್ರ ಅಸಹನೆ ಕೂಡ ನನ್ನೊಳಗೆ ಬೆಳೆಯುತ್ತಲೇ ಬಂದಿದೆ. ಈ ಎಲ್ಲ ಅಪಸವ್ಯಗಳನ್ನೂ ಅಷ್ಟೇ ಎಚ್ಚರಿಕೆಯಿಂದ ಗಮನಿಸುತ್ತಾ, ನನ್ನದೇ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾ, ಅಧ್ಯಯನ ಮಾಡುತ್ತಾ, ಸಾಧ್ಯವಾದ ರೀತಿಯಲ್ಲಿ ವೈಯಕ್ತಿಕವಾಗಿಯೂ, ಸಂಘಟಿತವಾಗಿಯೂ ಪ್ರತಿರೋಧಿಸುತ್ತಲೇ ಬಂದಿರುವೆ.

   ಪಶ್ಚಿಮಘಟ್ಟದ ಒಡಲೊಳಗೆ ೨೦೦೯ರಲ್ಲಿ ಗುಂಡ್ಯ ಜಲವಿದ್ಯುತ್ ಯೋಜನೆಯ ಅನುಷ್ಠಾನವೆಂದು ಸರ್ಕಾರ ಘೋಷಿಸಿ, ಭರದ ಸಿದ್ಧತೆಗಳಾಗತೊಡಗಿದಾಗ ಮತ್ತೆ ತಲ್ಲಣಗೊಂಡಿದ್ದೆ. ಇದೊಂದು ಬೃಹತ್ ಯೋಜನೆ. ಬಹಳಷ್ಟು ಕಾಡು ಮತ್ತು ನದಿ ಮೂಲದ ನಾಶ, ಕಣ್ಣಿನ ಮುಂದೆಯೇ ಕಟ್ಟಿದಂತಾಗುತ್ತಿತ್ತು. ಇದು ಕೇವಲ ಕಾಡಲ್ಲ. ದಟ್ಟ ರಕ್ಷಿತಾರಣ್ಯ ಪ್ರದೇಶ! ಗುಂಡ್ಯ ಕಣಿವೆ ಎಂದೇ ಪ್ರಖ್ಯಾತ. ಸಂಪನ್ಮೂಲ ಕೂಡಿಟ್ಟಿರುವ ತಿಜೋರಿಯನ್ನೇ ಛಿದ್ರ ಮಾಡಿದರೆ ಮತ್ತೆ ಏನುಳಿದೀತು? ತೀವ್ರ ಆತಂಕವಾಗಿತ್ತು. ಇದೇ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ ಮೂಲದವರಾಗಿ, ಹಾಸನದಲ್ಲಿ ನೆಲೆಸಿರುವ ಕಿಶೋರ್‌ಕುಮಾರ್, ಅಲ್ಲಿ ಮಿತ್ರರೊಡಗೂಡಿ ಸ್ಥಳೀಯರನ್ನು ಜಾಗೃತಿಗೊಳಿಸಿ ತಮ್ಮ ‘ಮಲೆನಾಡು ಜನಪರ ಹೋರಾಟ ಸಮಿತಿ’ಯ ಮೂಲಕ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿ, ನಡೆಸುತ್ತಿದ್ದ ಪ್ರತಿಭಟನೆಯ ಸುದ್ದಿಗಳು ನಿರಂತರವಾಗಿ ಪತ್ರಿಕೆಗಳಲ್ಲಿ ಬರಲಾರಂಭಿಸಿತ್ತು. ಸಮಾನ ಆಸಕ್ತಿಯ ಕಾರಣದಿಂದ ಮುಂದೆ ಅವರ ಪರಿಚಯವೂ ಆಗಿ, ಈ ವಿಷಯಗಳನ್ನು ಕುರಿತು ಮತ್ತೆ ಮತ್ತೆ ವಿಚಾರ ವಿನಿಮಯ ನಡೆಸುತ್ತಿದ್ದೆವು. ಹಿಂದೆಯೇ ಕಾರ್ಯಕ್ರಮ ಒಂದರಲ್ಲಿ ಪರಿಚಯವಾಗಿದ್ದ ನಾಗೇಶ್ ಹೆಗಡೆಯವರೊಂದಿಗೂ ಪರಿಸರ ಸಂಬAಧಿತ ಅನುಮಾನಗಳನ್ನು ಕುರಿತು ದೂರವಾಣಿಯಲ್ಲಿ ಆಗೀಗ ಚರ್ಚಿಸುತ್ತಿರುತ್ತಿದ್ದೆ. ಇದಕ್ಕೆಲ್ಲಾ ಪರಿಹಾರವಾಗಿ ನಾವು ರಚನಾತ್ಮಕವಾಗಿ ಏನು ಮಾಡಬಹುದೆಂದು ತೀವ್ರವಾಗಿ ಯೋಚಿಸುತ್ತಿದ್ದೆ. 

   ಇದೇ ಸಂದರ್ಭದಲ್ಲೇ ಪಶ್ಚಿಮಘಟ್ಟದ ಒಡಲೊಳಗೇ ಬೃಹತ್ ‘ಎತ್ತಿನಹೊಳೆ ತಿರುವು ಯೋಜನೆ’ ಅನುಷ್ಠಾನಕ್ಕೆ ಸರ್ಕಾರ ನಿರ್ಧರಿಸಿತು! ಈ ವಿಚಾರವಾಗಿ ನಾವು ಸಮಾನಮನಸ್ಕರು ಮತ್ತೆ ಮತ್ತೆ ತೀವ್ರವಾಗಿ ಚರ್ಚಿಸಲಾರಂಭಿಸಿದೆವು. ಈ ಯೋಜನೆಯನ್ನು ವಿರೋಧಿಸಲು, ಅನುಷ್ಠಾನ ಪ್ರದೇಶಗಳಿಗೆ ಹೋಗಿ ಅಧ್ಯಯನ ನಡೆಸಿದೆವು. ಹಲವು ಪ್ರಚಾರ ಸಭೆಗಳನ್ನೂ ಸಕಲೇಶಪುರ ತಾಲ್ಲೂಕಿನಲ್ಲಿ ಸ್ಥಳೀಯವಾಗಿ ಮಾಡಿದೆವು. ಇದೇ ಸಂದರ್ಭದಲ್ಲೇ ಮಾಧ್ಯಮಗಳೊಂದಿಗೆ, ಸರ್ಕಾರದೊಂದಿಗೆ, ಮುಖ್ಯಮಂತ್ರಿಗಳೊAದಿಗೆ ಯೋಜನೆಯನ್ನು ವಿರೋಧಿಸಿ ಮತ್ತೆ ಮತ್ತೆ ಮಾತಾಡುತ್ತಿದ್ದೆವು. ಪತ್ರ, ವರದಿಗಳನ್ನು ಕೊಡುತ್ತಿದ್ದೆವು. ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದೆವು. ಪತ್ರಿಕೆಗಳಿಗೆ ಮಿತ್ರರೆಲ್ಲರ ಪರವಾಗಿ ನಾನು ನಿರಂತರವಾಗಿ ಪತ್ರಗಳನ್ನೂ ಬರೆಯಲಾರಂಭಿಸಿದೆ. ಇದಕ್ಕಾಗಿ ಯೋಜನೆಯ ಕೂಲಂಕಷ ಅಧ್ಯಯನವನ್ನೂ ಮಾಡಲೇಬೇಕಿತ್ತು. ಈ ಸಮಸ್ಯೆಯ ಸಂಬAಧಿತ ನನ್ನ ತೀವ್ರ ಸ್ಪಂದನೆಯನ್ನು ಗಮನಿಸಿ ‘ನಿಮ್ಮ ನೆಲೆಯಿಂದ ವಿವರವಾದ ಲೇಖನವನ್ನೂ ಬರೆಯಿರಿ’ ಎಂದು ನಾಗೇಶ್ ಹೆಗಡೆಯವರು ಹಾಗೂ ಕಿಶೋರ್‌ಕುಮಾರ್ ಹುರಿದುಂಬಿಸಲಾರAಭಿಸಿದರು. ಪರಿಸರ ಸಂಬAಧಿತವಾಗಿ ಬರೆಯಲು ನಾನು ಈ ವಿಷಯದಲ್ಲಿ ತಜ್ಞಳೇನೂ ಆಗಿರಲಿಲ್ಲ. ಆದರೆ ಶತಾಯಗತಾಯ ಎತ್ತಿನಹೊಳೆ ಯೋಜನೆಯ ಅನುಷ್ಠಾನ ತಡೆಯಬೇಕು, ಪಶ್ಚಿಮಘಟ್ಟದ ಮೇಲಾಗುವ ಇನ್ನೂ ಹೆಚ್ಚಿನ ದೌರ್ಜನ್ಯ ತಡೆಯಬೇಕು, ಇದನ್ನು ಜನರಿಗೆ ಹೇಗೆ ಅರ್ಥ ಮಾಡಿಸುವುದು ಎಂದು ಮಾತ್ರ ತೀವ್ರವಾಗಿ ಯೋಚಿಸುತ್ತಿದ್ದೆ. ಅದರ ಫಲವಾಗಿ ೨೦೧೦ರಲ್ಲಿ ಪರಿಸರ ಸಂಬAಧಿತ ನನ್ನ ಮೊದಲ ಬರಹ ಹೊರಬಿದ್ದಿತ್ತು. 

   ಮುಂದೆ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯಳಾಗಿದ್ದಾಗ, ನನ್ನ ಪರಿಸರಾಸಕ್ತಿಯ ಮುಂದುವರೆದ ಭಾಗವಾಗಿ ೨೦೧೬ರಲ್ಲಿ “ಪರಿಸರ ಜ್ಞಾನ ಸಂವಹನ ಕಮ್ಮಟ”ವನ್ನು ಪರಿಸರ ಹೋರಾಟಗಾರ ಎಚ್.ಎ.ಕಿಶೋರ್‌ಕುಮಾರ್ ಅವರ “ಮಲೆನಾಡು ಜನಪರ ಹೋರಾಟ ಸಮಿತಿ”ಯ ಸಹಯೋಗದೊಂದಿಗೆ, ಮೂರು ದಿನಗಳ ಕಾಲ ಪಶ್ಚಿಮಘಟ್ಟದ ತಪ್ಪಲು, ಸಕಲೇಶಪುರದಲ್ಲಿ ಏರ್ಪಡಿಸಿದ್ದೆ. ಕಮ್ಮಟದ ನಿರ್ದೇಶಕರನ್ನಾಗಿ ನಾಗೇಶ್ ಹೆಗಡೆಯವರನ್ನು ಬಲವಂತವಾಗಿ ಒಪ್ಪಿಸಿದ್ದೆವು. ಕೆರೆ ಪುನಶ್ಚೇತನ ತಜ್ಞರಾದ ಶಿವಾನಂದ ಕಳವೆಯವರು ಕಮ್ಮಟದ ಸಂಚಾಲಕರಾಗಿದ್ದರು. ಆಗಲೂ ಪಶ್ಚಿಮಘಟ್ಟದ ಹಲವು ಭಾಗಗಳಿಗೆ ಕ್ಷೇತ್ರಾಧ್ಯಯನಕ್ಕೆ, ಎತ್ತಿನಹೊಳೆ ಯೋಜನೆ ಅನುಷ್ಠಾನ ಪ್ರದೇಶಕ್ಕೆ ನಮ್ಮ ಶಿಬಿರಾರ್ಥಿಗಳ ಯುವ ತಂಡದೊAದಿಗೆ ಹೋಗಿ ಸುತ್ತಾಡಿದ್ದು ಮರೆಯಲಾರದ ಅನುಭವ. ಜೊತೆಗೆ ಶಿಬಿರದುದ್ದಕ್ಕೂ, ಭಾಗಿಯಾಗಿದ್ದ ಎಲ್ಲ ಅತಿಥಿಗಳೂ ಎತ್ತಿನಹೊಳೆ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು! ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ರಾಶಿ ರಾಶಿ ಚೆಲ್ಲಾಡಿ ಬಿದ್ದಿದ್ದ ರಾಕ್ಷಸಾಕಾರದ ಹದಿಮೂರು, ಹತ್ತು, ಎಂಟು ಅಡಿ ಎತ್ತರದ ಪೈಪುಗಳು ಹುಲು ಮಾನವರಾದ ನಮ್ಮನ್ನು ಅಣಕಿಸುವಂತಿದ್ದವು! ಎಂಟು ಅಡಿ ಬೃಹದಾಕಾರದ ಕೊಳವೆಯೊಳಗೆ ನಾವೆಲ್ಲರೂ ಹೋಗಿ ಫೋಟೋ ತೆಗೆಸಿಕೊಂಡು ‘ನಾವೇ ಎತ್ತಿನಹೊಳೆ ನೀರು’ ಎಂದು ತಮಾಷೆ ಮಾಡಿಕೊಂಡಿದ್ದರೂ, ನಮ್ಮ ಮನಸುಗಳಲ್ಲೆಲ್ಲಾ ವಿಷಾದ ಮುಡುಗಟ್ಟಿತ್ತು. ಆಗೆಲ್ಲಾ ಇನ್ನೂ ಒಂದಿಷ್ಟು ಉಳಿದುಕೊಂಡಿದ್ದ ದಟ್ಟಾರಣ್ಯದ ಆ ಪ್ರದೇಶದ ಜೀವವೈವಿಧ್ಯವನ್ನು ಕಂಡು ಒಂದಿಷ್ಟು ಸಂತಸವಾಗಿದ್ದರೂ, ‘ಇನ್ನೇನು ಇದೂ ನಾಶವಾಗಿಬಿಡುತ್ತದಲ್ಲಾ’ ಎಂಬ ಗಾಢ ಸಂಕಟದಿAದ ಸರ್ಕಾರವನ್ನು ಮನದಣಿಯ ಬೈದುಕೊಂಡಿದ್ದೆವು.

   ಈ ಮಧ್ಯೆ ೨೦೧೮ರಲ್ಲಿ ಪಶ್ಚಿಮಘಟ್ಟ ಹಾದು ಹೋಗುವ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ, ಹಿಜ್ಜನಹಳ್ಳಿ, ಮಾಗೇರಿ ಹಾಗೂ ಬಿಸ್ಲೆ ಘಾಟ್ ಬಳಿ ಭೀಕರ ಗುಡ್ಡ ಕುಸಿತವಾಗಿರುವ ಸುದ್ದಿ ಬಂದಿತ್ತು. ಮಿತ್ರರ ತಂಡದೊAದಿಗೆ ಹೋಗಿ ಆ ಪ್ರದೇಶವನ್ನು ಅಧ್ಯಯನ ಮಾಡಿ ಬಂದಾಗಿನಿAದ ಯಾಕೋ ಮನಸು ತೀರಾ ಜರ್ಜರಿತವಾಗಿಬಿಟ್ಟಿತ್ತು. ಸ್ಥಿರವಾಗಿ ನಿಂತ ಎತ್ತರದ ಗುಡ್ಡಗಳು ಹೀಗೆ ಬುಡ ಕಡಿದು ಬಿದ್ದು, ಮನುಷ್ಯ ನಿರ್ಮಿತವಾದುವನ್ನೆಲ್ಲಾ ಕ್ಷಣಾರ್ಧದಲ್ಲಿ ಹಾನಿ, ನಾಶ ಮಾಡಿಬಿಡುವುದೆಂದರೆ? ಸಧ್ಯ ಈ ಗುಡ್ಡ ಕುಸಿತದ ಹೆಸರಲ್ಲಿ ಇಲ್ಲಿ ಜೀವಕ್ಕೆ ಹಾನಿಯಾಗಿಲ್ಲವೆಂಬುದಷ್ಟೇ ಸಮಾಧಾನ! ಆದರೆ ವನ್ಯಜೀವಿ ಸಂಘರ್ಷದ ಹೆಸರಲ್ಲಿ ದಶಕಗಳಿಂದ ಆಗುತ್ತಿರುವ ನೂರಾರು ಮನುಷ್ಯ-ವನ್ಯಜೀವಿಗಳ ಪ್ರಾಣ ಹಾನಿ, ಮತ್ತಿತರ ಆಸ್ತಿ ನಾಶಗಳು ಕಡಿಮೆ ಬೆಲೆಯವೇ? ಪಶ್ಚಿಮಘಟ್ಟಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡುತ್ತಿದ್ದರೆ, ಕಾಡುಗಳು ರಾಕ್ಷಸಾಕಾರದ ಯಂತ್ರಗಳ ಕೈಗಳಿಗೆ ಸಿಕ್ಕು ಬುಡ ಮೇಲಾಗುತ್ತಾ, ಕಾಡಿಗೆ ಕಾಡೇ ಅಲ್ಲೋಲಕಲ್ಲೋಲವಾಗುತ್ತಾ, ಛಿದ್ರವಾಗುತ್ತಾ, ಚಿಂದಿಯಾಗುವುದನ್ನು ಗಮನಿಸಿದರೆ… ಅದರೊಂದಿಗೇ ನಮ್ಮುಳಿವಿನ ದಾರಿಗಳು ಕ್ಷೀಣಿಸುತ್ತಿವೆಯೇನೋ ಎಂದೆನಿಸುತ್ತದೆ. ಎತ್ತಿನಹೊಳೆ ಯೋಜನೆ ಅನುಷ್ಠಾನ ಪ್ರದೇಶದ ಆಸುಪಾಸಿನಲ್ಲೇ ಹೆಚ್ಚಾಗಿ ಈ ಗುಡ್ಡ ಕುಸಿತ ಉಂಟಾಗಿತ್ತು. ನಾವು ಏನನ್ನು ಊಹಿಸಿದ್ದೆವೋ ಅದೇ ಆಗಲಾರಂಭಿಸಿತ್ತು! ಇದರೊಂದಿಗೆ ಶಿರಾಡಿ ಘಾಟಿಯಲ್ಲಿ ರಾಷ್ಟಿçÃಯ ಹೆದ್ದಾರಿ ಬೆಂಗಳೂರು-ಮAಗಳೂರು ನೂತನ ಚತುಷ್ಪತ ರಸ್ತೆ ಕಾಮಗಾರಿಗಾಗಿಯೂ ನಡೆಯಲಾರಂಭಿಸಿ, ದಾರಿಯುದ್ದಕ್ಕೂ ಇಕ್ಕೆಲಗಳ ಬೃಹತ್ ಮರಗಳು ರಾಶಿ ರಾಶಿ ಕಡಿದು ಬಿದ್ದಿದ್ದವು! ಜೊತೆಗೆ ರಸ್ತೆ ವಿಸ್ತರಣೆಗಾಗಿ ದಾರಿ ಇಕ್ಕೆಲದ ಗುಡ್ಡಗಳನ್ನು ಅದು ಸಹಜವಾಗಿ ಇರುವ ರೀತಿಯಲ್ಲೇ ಇಳಿಜಾರಿನಂತೆ ಕತ್ತರಿಸದೇ, ನೇರವಾಗಿ ೯೦ ಡಿಗ್ರಿ ಕತ್ತರಿಸಿದ್ದರಿಂದಾಗಿ ಅದಕ್ಕೆ ಇದ್ದ ಆಸರೆ, ಆಧಾರ ಇಲ್ಲವಾಗಿ ಮಳೆಯ ತೀವ್ರತೆಗೆ ಕುಸಿದು ಕುಸಿದು ಬೀಳುತ್ತಿದ್ದವು! ವರ್ಷದಿಂದ ವರ್ಷಕ್ಕೆ ಈ ಕುಸಿತ ಹೆಚ್ಚುತ್ತಲೇ ಇದೆ.

   ಇತ್ತ ಈ ೨೦೨೪ರ ವರ್ಷದ ಜುಲೈನಲ್ಲಿ ಪಶ್ಚಿಮಘಟ್ಟ ಪ್ರದೇಶದ ಕೇರಳದ ವೈನಾಡಿನಲ್ಲಿ ಭೀಕರವಾಗಿ ದೊಡ್ಡ ಬೆಟ್ಟ ಕುಸಿದು ನೆಲಕ್ಕಪ್ಪಳಿಸಿ, ನಾಲ್ಕೆöÊದು ಹಳ್ಳಿಗಳೇ ಸರ್ವನಾಶವಾಗಿದ್ದು, ನಾಲ್ಕು ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿರುವ ದಾರುಣ ದೃಶ್ಯಗಳು ಎದೆ ನಡುಗಿಸುವಂತಿವೆ. ಅದಕ್ಕೆ ಕೆಲ ದಿನ ಮುಂಚೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಗುಡ್ಡ ಕುಸಿದು ಆದ ಜೀವ ಹಾನಿಯೂ ತಲ್ಲಣಿಸುವಂತೆ ಮಾಡಿಬಿಟ್ಟಿತ್ತು. ಇದಾದ ಕೆಲವೇ ದಿನಕ್ಕೇ ನಿರಂತರ ಮಳೆ ಬೀಳುತ್ತಿದ್ದ ಸಕಲೇಶಪುರದ ಹಾರ್ಲೆ-ನಡಹಳ್ಳಿ ನಡುವಿನ ಮುಖ್ಯ ರಸ್ತೆಯ ಮೇಲೆ ಗುಡ್ಡ ಕುಸಿದು ಬಿದ್ದು, ರಸ್ತೆ ಸಮೇತ, ಒಂದೂವರೆ ಎಕರೆ ಕಾಫಿ ತೋಟವೂ ಕಡಿದುಕೊಂಡು ಆಳ ಪ್ರಪಾತಕ್ಕೆ ಬಿದ್ದಿದೆ! ಇದರಿಂದ ಕೆಳಗಿನ ಅಡಿಕೆ ತೋಟ, ಕೆರೆ, ಹೊಲ, ಗದ್ದೆಗಳೂ ನಾಶವಾಗಿವೆ. ರಸ್ತೆ ಕಡಿದು ಬಿದ್ದಿದ್ದರಿಂದಾಗಿ ಅಂದಾಜು ೩೦ ಗ್ರಾಮಗಳಿಗೆ ಈಗ ಓಡಾಟ ಸಂಪರ್ಕಕ್ಕೆ ಹತ್ತಿರದ ದಾರಿ ಇಲ್ಲವಾಗಿದೆ! ಜನರು ತೀವ್ರವಾಗಿ ತೊಂದರೆಗೀಡಾಗಿದ್ದಾರೆ. ಇದೂ ಕೂಡ ಎತ್ತಿನಹೊಳೆ ಬೃಹತ್ ಪೈಪು ಅಳವಡಿಕೆಯಾದ ಪಕ್ಕದಲ್ಲೇ ಸಂಭವಿಸಿರುವ ಅನಾಹುತ! ಸದ್ಯ ಜೀವ ಹಾನಿಯಾಗಿಲ್ಲವೆಂಬುದಷ್ಟೇ ಸಮಾಧಾನ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಎರಡೂ ರಸ್ತೆ ಹಾಗೂ ರೈಲ್ವೇ ಮಾರ್ಗಗಳ ಮೇಲೆ ಮತ್ತೆ ಮತ್ತೆ ಗುಡ್ಡ ಮತ್ತು ಭೂ ಕುಸಿತ ಸಂಭವಿಸುತ್ತಲೇ ಇದೆ. ಆಗೆಲ್ಲ ಈ ಮಾರ್ಗದ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿರುತ್ತದೆ. ಅದು ತೆರವಾದಾಗಲೂ ಪ್ರಯಾಣಿಸುವ ಅನಿವಾರ್ಯತೆ ಇರುವ ಜನರು, ಪ್ರಾಣ ಕೈಯಲ್ಲಿ ಹಿಡಿದು ರೈಲು, ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪಶ್ಚಿಮಘಟ್ಟದಲ್ಲೇ ವಾಸಿಸುತ್ತಿರುವ ಮಂದಿ, ಮುಂದಿನ ದಿನಗಳಲ್ಲಿ ಇಲ್ಲಿ ಬದುಕುವುದು ಇನ್ನು ಹೇಗೋ ಎಂದು ಆತಂಕಿತರಾಗಿ ದಿನ ದೂಡುತ್ತಿದ್ದಾರೆ. 

   ಏಕೆಂದರೆ ಭೂಮಿಯ ತಾಪಮಾನ ವಿಪರೀತವಾಗಿ ಏರಿಕೆಯಾಗಿರುವುದರಿಂದ ಪಶ್ಚಿಮಘಟ್ಟದ ಮಲೆನಾಡು ಪ್ರದೇಶವಾದ ಸಕಲೇಶಪುರ ಭಾಗದಲ್ಲಿಯೇ ಈಗ ಬೇಸಿಗೆಯಲ್ಲಿ ೪೦ ಡಿಗ್ರಿ ಸೆಲ್ಷಿಯಸ್‌ನಷ್ಟು ತಾಪಮಾನ ಸುಡುತ್ತಿದೆ! ಮಳೆಗಾಲದ ಐದು ತಿಂಗಳಲ್ಲಿ ನಿಧಾನವಾಗಿ, ಹಂತಹAತವಾಗಿ ಬೀಳಬೇಕಿದ್ದ ಮಳೆ, ಮೇಘಸ್ಪೋಟವೂ ಜೊತೆಗೂಡಿ ಬಿರು ಮಳೆಯಾಗಿ ಒಂದು ತಿಂಗಳೊಳಗೆ ಸುರಿದು, ಬೆಳೆದು ನಿಂತ ಬೆಳೆಯನ್ನಲ್ಲದೇ ಇಡಿಯಾಗಿ ತೋಟಗಳನ್ನೆ ನಾಶಗೊಳಿಸುತ್ತಿದೆ! ಇದೂ ಸಾಲದೆಂಬAತೆ ದಶಕದಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ಸೃಷ್ಟಿಯಾಗುತ್ತಿರುವ ಭೀಕರ ಸಮಸ್ಯೆಗಳಿಗೆ ಉತ್ತರಗಳೇ ಸಿಕ್ಕುತ್ತಿಲ್ಲ. ಒಂದೆಡೆ ಕಾಡು ನಾಶವಾಗಿ, ವನ್ಯ ಮೃಗಗಳ ಅವ್ಯಾಹತ ದಾಳಿಯಿಂದ ಬದುಕು ನರಕವಾಗಿದೆ. ಇನ್ನೊಂದೆಡೆ ೧೮-೨೦ ಅಡಿ ಆಳ ತೆಗೆದು ರಾಕ್ಷಸಾಕಾರದ ಪೈಪುಗಳನ್ನು ಹೂಳಿದ ನಂತರ, ಅದನ್ನು ಮಣ್ಣಿನಿಂದಲೋ ಸಿಮೆಂಟಿನಿAದಲೋ ಭದ್ರ ಮಾಡಿ ಕೂರಿಸಿಲ್ಲ. ಅದರ ಪರಿಣಾಮವಾಗಿ ಮಳೆಗಾಲದಲ್ಲಿ ನೀರು ಪೈಪಿನ ಅಕ್ಕಪಕ್ಕದ ಸಂದುಗಳಲ್ಲಿ ಹರಿದು ಹೋಗಿ ಸಂಗ್ರಹವಾಗಿ, ಮೊದಲೇ ಸಡಿಲಗೊಂಡಿದ್ದ ಭೂಮಿಯನ್ನು ಮತ್ತಷ್ಟು ಸಡಿಲಗೊಳಿಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ಭೂಕುಸಿತದ ತೀವ್ರತೆ ಹೆಚ್ಚಿದೆ. ಈಗಾಗಲೇ ಇದರ ಅನುಭವ ಜನರಿಗೆ ಆಗುತ್ತಿದೆ. ಜೊತೆಗೆ ಇತ್ತೀಚೆಗೆ ಎತ್ತಿನಹೊಳೆಯ ಚೆಕ್ ಡ್ಯಾಂ ಮೂಲಕ, ೧೫೦೦೦ ಹಾಗೂ ೮೦೦೦ ಎಚ್‌ಪಿ ಪಂಪ್‌ಗಳ ಮೂಲಕ ಪ್ರಾಯೋಗಿಕವಾಗಿ ರಭಸವಾಗಿ ನೀರು ಹರಿಸಲಾಯ್ತು. ಆಗ ನೀರಿನ ವೇಗದ ಒತ್ತಡ, ಸಡಿಲಗೊಂಡಿರುವ ಮಣ್ಣು ಹಾಗೂ ಜೋರಾದ ಮಳೆಯ ಕಾರಣದಿಂದ ಈ ಪೈಪ್ ಲೈನ್ ಹಾದು ಹೋಗಿರುವ ಸ್ಥಳಗಳಲ್ಲೆಲ್ಲಾ ಜೋರಾದ ಕಂಪನವನ್ನು, ಭೂಮಿ ನಡುಗಿದಂತಹ ಅನುಭವವಾಗಿದ್ದನ್ನು ಜನರು ಆತಂಕದಿAದ ಹಂಚಿಕೊಳ್ಳುತ್ತಿದ್ದಾರೆ. ಇಲ್ಲೇ ಹಲವು ಕಡೆಗಳಲ್ಲಿ ಮಣ್ಣು ಕುಸಿತವೂ ಸಂಭವಿಸಿದೆ. ಈ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಪೈಪ್‌ಗಳಲ್ಲಿ ಬೃಹತ್ ಪ್ರಮಾಣದ ನೀರಿನ ಸೋರಿಕೆ ಸಹ ಉಂಟಾಗಿದ್ದು, ಸಕಲೇಶಪುರ ತಾಲ್ಲೂಕಿನ ಮಾಸಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲೂ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತು, ಅಡಿಕೆ ಹಾಗೂ ಜಾನುವಾರುಗಳಿಗೆ ಮೇವಿಗಾಗಿ ಬೆಳೆದಿದ್ದ ಬೆಳೆ ನಾಶವಾಗಿದೆ. ಮುಂದೆ ಇನ್ನೇನು ಕಾದಿದೆಯೋ?

   ಪಶ್ಚಿಮಘಟ್ಟಕ್ಕೆ ಸಂಬAಧಿಸಿದAತೆ ಪರಿಸರದ ಮೇಲಿನ ಪರಿಣಾಮ ಹಾಗೂ ಸಾಮಾಜಿಕ ಪರಿಣಾಮಗಳನ್ನು ಕುರಿತು ವಿವರವಾಗಿ ಅಧ್ಯಯನ ನಡೆಸಿ ನೀಡಿದ, ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿರಂಗನ್ ವರದಿಗಳೆರಡನ್ನೂ ಸರ್ಕಾರ ಹಾಗೂ ಜನಸಮುದಾಯ ಹಠ ಹಿಡಿದು ನಿರಾಕರಿಸಿವೆ. ಆದರೆ ಈ ಎರಡೂ ಸಮಿತಿಗಳಲ್ಲಿ ಅತ್ಯಂತ ಅವಶ್ಯಕವಾಗಿ, ಸದಸ್ಯರಾಗಿ ಭೂವಿಜ್ಞಾನಿಗಳನ್ನು ಒಳಗೊಳ್ಳಲೇಬೇಕಿತ್ತು. ಇದೊಂದು ಲೋಪ. ಅವರನ್ನೂ ಒಳಗೊಂಡಿದ್ದರೆ ಈ ಇಡೀ ಮನುಷ್ಯ ರೂಪಿತ ಯೋಜನೆಗಳ ಕಾರ್ಯಾಚರಣೆ ನಡೆಯುತ್ತಿರುವ ಅಪರೂಪದ ಪಶ್ಚಿಮಘಟ್ಟದೊಡಲು ಈ ಪರಿಯ ಯೋಜನೆಗಳ ಭಾರವನ್ನೆಲ್ಲಾ ತಡೆದುಕೊಳ್ಳಲು ಸಾಧ್ಯವಿದೆಯೇ? ಭೂಮಿಯ ಇಳಿಜಾರು ಯಾವ ರೀತಿಯಲ್ಲಿದೆ? ದೊಡ್ಡ ಪ್ರಮಾಣದ ಮಳೆಯನ್ನು, ಅಭಿವೃದ್ಧಿ ಯೋಜನೆಗಳನ್ನು ತಡೆದು ನಿಲ್ಲಲು ಇಲ್ಲಿನ ಸೂಕ್ಷö್ಮ ರಚನೆಯ, ಆರ್ದ್ರ ಮಣ್ಣಿನ ಬೆಟ್ಟ ಗುಡ್ಡಗಳಿಗೆ ಸಾಧ್ಯವಿದೆಯೇ? ಅದರ ಧಾರಣ ಶಕ್ತಿ ಎಷ್ಟು? ಮಣ್ಣಿನ ಗುಣವೆಂತದ್ದು? ಬಂಡೆ ಮತ್ತು ಕಲ್ಲಿನ ಸ್ವಭಾವ ಎಂಥದ್ದು? ಅದರೊಳಗಿನ ಶಿಲಾಪದರಗಳ ರಚನೆ ಹೇಗಾಗಿದೆ? ಇದರಲ್ಲಿನ ವ್ಯತ್ಯಾಸಗಳು ಭೂಕುಸಿತಕ್ಕೆ ಕಾರಣವಾಗುತ್ತದೆಯೇ? ಗುಡ್ಡ, ಬೆಟ್ಟಗಳನ್ನು ಹೀಗೆ ಮರಗಳಿಲ್ಲದಂತೆ ಬೋಳಿಸುತ್ತಾ ಬಂದಿರುವುದರಿAದ, ಈಗ ಬೀಳುತ್ತಿರುವ ಅಪಾರ ಮಳೆನೀರನ್ನು ಭೂಮಿಯೊಳಕ್ಕೆ ಸೆಳೆಯಲು ಮರದ ದಟ್ಟ ಬೇರುಗಳ ಹೆಣಿಗೆ ಇಲ್ಲದಿದ್ದರೆ ಏನಾದೀತು? ಭೂಮಿಯಾಳದಲ್ಲಿ ಜಿನುಗುತ್ತಿರುವ, ಹರಿಯುತ್ತಿರುವ ನೀರು ಎಷ್ಟು ಪ್ರಮಾಣದಲ್ಲಿದೆ? ಎತ್ತ ಹರಿಯುತ್ತಿದೆ? ಅಂತರ್ಜಲದ ಸ್ಥಿತಿಯೇನು? ಎಂದು ತಿಳಿಸುತ್ತಿದ್ದರು. ಈಗಲಾದರೂ ತುರ್ತಾಗಿ ಭೂವಿಜ್ಞಾನಿಗಳನ್ನು ನೇಮಿಸಿ ಅಧ್ಯಯನ ನಡೆಸಲೇಬೇಕಿದೆ.

   ಪಶ್ಚಿಮಘಟ್ಟಗಳ ಒಡಲೊಳಗೆ ಇಷ್ಟೆಲ್ಲಾ ಎದೆಯೊಡೆಯುವಂತಹ ಅಪಸವ್ಯಗಳು ನಡೆಯುತ್ತಿದ್ದರೂ, ನಮ್ಮ ಸರ್ಕಾರಗಳ ಹುಂಬತನಕ್ಕೆ ಮಾತ್ರ ಇನ್ನೂ ಕಡಿವಾಣ ಬಿದ್ದಿಲ್ಲವಲ್ಲ! ಈಗ ಮತ್ತೆ ಶಿರಾಡಿ ಘಾಟಿಯಲ್ಲಿ ಹೊಸದಾಗಿ ಸುರಂಗ ಮಾರ್ಗಕ್ಕೆ ಯೋಜನೆ ಸಿದ್ಧವಾಗುತ್ತಿದೆ! ಶಿರಾಡಿ ಘಾಟ್‌ನ ಅರಣ್ಯ ಭೂಮಿಯನ್ನು ವಶಪಡಿಸಿಕೊಂಡು ಈ ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಾಣವನ್ನು ಮಾಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಶಿರಾಡಿ ಘಾಟ್‌ನ ಸುಮಾರು ೨೭ರಿಂದ ೩೦ ಕಿಲೋಮೀಟರ್ ಉದ್ದದ ರಸ್ತೆಯನ್ನು ಸುರಂಗ ಮಾರ್ಗವಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ! ಈ ಯೋಜನೆಯ ಪ್ರಕಾರ ಘಾಟ್‌ನ ನಾಲ್ಕು ಕಡೆಗಳಲ್ಲಿ ಸುರಂಗ ಮಾರ್ಗ, ಉಳಿದ ಕಡೆಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಕೇಂದ್ರ ಹೆದ್ದಾರಿ ಇಲಾಖೆ ಈ ಯೋಜನೆಗೆ ಅಧಿಕೃತ ಒಪ್ಪಿಗೆಯನ್ನೂ ಈಗಾಗಲೇ ನೀಡಿದೆ! ಆದರೆ ಪ್ರಶ್ನೆ ಇರುವುದು- ಇಷ್ಟೆಲ್ಲಾ ಬೃಹತ್ ಯೋಜನೆಯ ಅನುಷ್ಠಾನವನ್ನು ತಡೆದುಕೊಳ್ಳುವ ಧಾರಣಾಶಕ್ತಿ ಈಗ ಪಶ್ಚಿಮಘಟ್ಟದ ಮಣ್ಣಿಗೆ, ಭೂಮಿಗೆ ಇದೆಯೆ? ಹಾಗೂ ಅಗಾಧ ಪ್ರಮಾಣದ ಅರಣ್ಯ ನಾಶದಿಂದ ಸುತ್ತಲಿನ ಜನಸಮುದಾಯಕ್ಕೆ ಉಂಟಾಗಬಹುದಾದ ಪರಿಣಾಮ ಎಷ್ಟೆಂಬ ಅಂದಾಜಾದರೂ ಈ ರಾಜಕಾರಣಿಗಳಿಗೆ ಇದೆಯೆ? ಎಂಬುದು. ಈಗ ಜನರಾದರೂ ಎಚ್ಚೆತ್ತುಕೊಳ್ಳದಿದ್ದರೆ…

   ದಿನದಿಂದ ದಿನಕ್ಕೆ ಭೂಮ್ತಾಯಿ ಹೆಚ್ಚೆಚ್ಚು ಧಗಧಗಿಸುತ್ತಿದ್ದಾಳೆ! ಅವಳ ಆರೋಗ್ಯ ಹೆಚ್ಚು ಹೆಚ್ಚು ಕೆಡುತ್ತಿರುವುದಕ್ಕೆ ಸುತ್ತಲಿನ ಹಲವು ನೇತ್ಯಾತ್ಮಕ ಉದಾಹರಣೆಗಳನ್ನು ಕಂಡರೆ ಸಾಕು. ಈಗ ಹವಾಮಾನ ವೈಪರಿತ್ಯದ ಕಾಲ ಮುಗಿದು, ‘ಹವಾಮಾನ ತುರ್ತು ಪರಿಸ್ಥಿತಿ’ಯ ಕಾಲ ಬಂದು ಬಿಟ್ಟಿದೆ! ಇತ್ತೀಚಿನ ವರ್ಷಗಳಲ್ಲಂತೂ ವಿಪರೀತ ಬಿಸಿಲು/ಧಗೆ, ವಿಪರೀತ ಮಳೆ/ಮೇಘಸ್ಪೋಟ, ವಿಪರೀತದ ಚಳಿಯೂ ಹೆಚ್ಚು! ಯಾವಾಗ ಯಾವ ಕಾಲವೆಂದು ನಿರ್ದಿಷ್ಟವಾಗಿ ಹೇಳಲಾಗದ ಸ್ಥಿತಿ. ಈ ಬಗೆಯ ಹುಚ್ಚುಚ್ಚು ಹವಾಮಾನ ವೈಪರಿತ್ಯವನ್ನು ಈಗ ಜಗತ್ತಿನೆಲ್ಲೆಡೆ ಜನರು ಅನುಭವಿಸುತ್ತಿದ್ದಾರೆ. ನಮಗರ್ಥವಾಗಬೇಕಾದುದೆಂದರೆ- ಈ ಯಾವ ಅತಿರೇಕಗಳಿಂದಲೂ ಭೂಮಿ ನಾಶವಾಗಿಬಿಡುವುದಿಲ್ಲ! ಇದನ್ನು ತಾಳಿಕೊಳ್ಳಲಾಗದೇ ನಾಶವಾಗುವುದು ಮನುಷ್ಯ ಸಂತತಿಯಷ್ಟೇ! ಮನುಷ್ಯನೇ ಆತ್ಮಾಹುತಿ ಬಾಂಬ್! ತನ್ನ ಕೈಯಾರ ತಾನೇ ತನ್ನ ಸಂತತಿಯನ್ನು ವಿನಾಶದೆಡೆಗೆ ತೆಗೆದುಕೊಂಡು ಹೋಗುತ್ತಿದ್ದಾನೆ. ಭೂಮಿಗೆ ಮನುಷ್ಯ ಅನಿವಾರ್ಯವೇನಲ್ಲ. ನಮ್ಮ ಅಳಿವಿನ ನಂತರ ಅದು ತನ್ನಷ್ಟಕ್ಕೆ ತಾನೇ ತನ್ನ ಆರೋಗ್ಯವನ್ನು ಸರಿಪಡಿಸಿಕೊಂಡು ಸಮಸ್ಥಿತಿಗೆ ಬರಬಲ್ಲುದು! 

   ಹೀಗಾಗಿ ಸದ್ಯಕ್ಕೆ ತುರ್ತಾಗಿ ನಮ್ಮುಳಿವಿನ ದಾರಿಗಳನ್ನು ಹುಡುಕಿಕೊಳ್ಳಬೇಕಿದೆ. ಅದಕ್ಕೆ ಪ್ರಕೃತಿಯನ್ನು ಸಮಸ್ಥಿತಿಗೆ ತರಲು ಪ್ರಯತ್ನಿಸಬೇಕಿದೆ. ಮೊದಲಿಗೆ ಹಸಿರು ಮನೆ ಅನಿಲಗಳನ್ನು ಬಿಡುಗಡೆ ಮಾಡುವುದನ್ನು ಆದಷ್ಟೂ ಕಡಿಮೆ ಮಾಡಲು ಎಲ್ಲ ದೇಶಗಳೂ ಪ್ರಯತ್ನ ನಡೆಸಲೇಬೇಕಿದೆ. ಏಕೆಂದರೆ ಪ್ರಾಕೃತಿಕ ಸಮಸ್ಯೆಗಳು ಸ್ಥಳೀಯವಾದವುಗಳು ಎನ್ನಿಸಿದರೂ ಅದಕ್ಕೆ ಸ್ಥಳೀಯವಾಗಿಯಷ್ಟೇ ಪೂರ್ಣ ಉತ್ತರಗಳಿರುವುದಿಲ್ಲ! ಅದನ್ನು ವಿಶ್ವಾತ್ಮಕವಾಗಿಯೇ ಎದುರಿಸಬೇಕು. ಸಾಮುದಾಯಿಕ, ವ್ಯಾಪಕ ಹಾಗೂ ವಿಕೇಂದ್ರೀಕೃತ ತುರ್ತು ಬದಲಾವಣೆಗೆ ಆದ್ಯತೆ ನೀಡಬೇಕು. ಅದಕ್ಕೆ ಒಂದು ದಾರಿ ಅಥವಾ ಏಕಮುಖ ಪರಿಹಾರ ಇಲ್ಲ! ಎಲ್ಲ ರೀತಿಯ ಸಮಗ್ರ ದಾರಿಗಳನ್ನೂ ತುರ್ತಾಗಿ ಹುಡುಕಲೇಬೇಕು. ಎಲ್ಲಕ್ಕಿಂಥ ಮುಖ್ಯವಾಗಿ ಸರ್ಕಾರಗಳು ತಮ್ಮ ಮೂರ್ಖತನದಿಂದ ಪರಿಸರ ಸರ್ವನಾಶ ಮಾಡುವಂತಹ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳುವುದನ್ನು ಶತಾಯಗತಾಯ ನಿಲ್ಲಿಸಲೇಬೇಕು. ನಾವು- ಜನಸಮುದಾಯ ತಡೆಯಲೇಬೇಕಿದೆ. 

   ಹಂತ ಹಂತವಾಗಿ ಪ್ರಕೃತಿ ವಿನಾಶದೆಡೆಗೆ ಸಾಗುತ್ತಿದೆ. ದಾಹ… ದಾಹ… ದಾಹ… ವೇಗ… ವೇಗ… ವೇಗ… ಇದೇ ನಮ್ಮನ್ನು ಶರವೇಗವಾಗಿ ವಿನಾಶದೆಡೆಗೆ ನೂಕುತ್ತಿರುವುದು! ಇದರ ಹಿಂದೆ ಬಕಾಸುರ ಬಂಡವಾಳಶಾಹಿ ಸದ್ದಿಲ್ಲದೇ ಕೆಲಸ ಮಾಡುತ್ತಿದೆ! ಇದನ್ನು ಸರ್ಕಾರಗಳಿಗೆ, ಸಮುದಾಯಕ್ಕೆ ಅರ್ಥ ಮಾಡಿಸುವುದಾದರೂ ಹೇಗೆ? ಹಾಗೇ ಅದೇನು ಯಾರಿಗೂ ಗೊತ್ತಿಲ್ಲದ ವಿಷಯವೇ? ಈಗ ದಿನನಿತ್ಯದ ಸುಳ್ಳು ಸುದ್ದಿಗಳನ್ನು ಕಂಡು ಹಿಡಿಯಲು ಸರ್ಕಾರಗಳು ಲಕ್ಷಗಟ್ಟಲೆ ಹಣ ವ್ಯಯಿಸುತ್ತಿವೆ! ಆದರೆ ಪ್ರಕೃತಿಯ ಆರೋಗ್ಯ ತೀರಾ ಹದಗೆಟ್ಟು, ಕುಸಿದುಹೋಗುವ ಹಂತ ತಲುಪಿರುವುದನ್ನು ಪ್ರಮಾಣೀಕರಿಸಲು ಇಷ್ಟೆಲ್ಲಾ ನಿಜ ಘಟನೆಗಳು ದಿನನಿತ್ಯ ಘೋರವಾಗಿ ಕಣ್ಮುಂದೆ ಘಟಿಸುತ್ತಿದ್ದರೂ- ಅದೇ ಸರ್ಕಾರಗಳು ಜಾಣ ಕುರುಡು, ಜಾಣ ಕಿವುಡು, ಜಾಣ ಮರೆವನ್ನು ನಟಿಸುತ್ತಿವೆಯಲ್ಲಾ? ಈಗೇನು ಮಾಡುವುದು? ಪದಗಳೂ ಸೋಲುತ್ತಿವೆ! 

    ಪ್ರಕೃತಿಯ ಪ್ರತಿಯೊಂದು ಸಂರಚನೆಯನ್ನೂ, ಆಗುಹೋಗನ್ನೂ, ಜೀವಗಳನ್ನೂ- ಮಗುವನ್ನು ನೋಡಿಕೊಳ್ಳುವಷ್ಟೇ ಸೂಕ್ಷö್ಮವಾಗಿ ಆತುಕೊಂಡು ಕಾಪಾಡಲೇಬೇಕಿದೆ. ಈ ವಿಷಮ ಹೊತ್ತಿನಲ್ಲಾದರೂ ಅದು ನಮ್ಮೆಲ್ಲರ ಅರಿವಾಗಿ ಬೆಳೆಯಲಿ, ಬೆಳಗಲಿ ಎಂಬುದಷ್ಟೇ ಕಳಕಳಿ.

Tags: ಅಪಾಯದಲ್ಲಿ ಪಶ್ಚಿಮ ಘಟ್ಟಪಶ್ಚಿಮ ಘಟ್ಟಭೂ ಕುಸಿತಮಲೆನಾಡುಲ್ಯಾಂಡ್ ಸ್ಲೈಡ್
Previous Post

ಕಾರ್ಖಾನೆಯಿಂದ ಹಾರುವ ಬೂದಿಗೆ ಗ್ರಾಮಸ್ಥರು ಹೈರಾಣು

Next Post

ನಿಂತಿದ್ದವರಿಗೆ ಗುದ್ದಿದ ಲಾರಿ!; ಮೂವರ ದಾರುಣ ಸಾವು!

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025
Next Post

ನಿಂತಿದ್ದವರಿಗೆ ಗುದ್ದಿದ ಲಾರಿ!; ಮೂವರ ದಾರುಣ ಸಾವು!

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada