ಜೈಪುರ: ಕಾಂಗ್ರೆಸ್ ಶಾಸಕನನ್ನು ನಿವೃತ್ತ ಸಿಆರ್ಪಿಎಫ್ ಯೋಧರೊಬ್ಬರು ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕನನ್ನು ರಫೀಕ್ ಖಾನ್ ಎಂದು ಗುರುತಿಸಲಾಗಿದ್ದು, ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಿಕಾಸ್ ಜಾಖಾ ಎಂದು ಗುರುತಿಸಲಾಗಿದೆ.ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Shocking video coming from Rajasthan: Congress MLA Rafiq Khan's goons assaulted a Shaurya Chakra awardee CRPF veteran when he tried to confront the MLA.
— Mr Sinha (@MrSinha_) August 29, 2024
As per his statement, the MLA was harassing his wife for a long time. pic.twitter.com/wDzK2xMTHe
ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ಶಾಸಕನ ಮೇಲೆ ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ಸಾರ್ವಜನಿಕರು ಹಾಗೂ ಬೆಂಬಲಿಗರು ಹಿಡಿದು ಥಳಿಸುತ್ತಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸುವ ಪೊಲೀಸರು ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಶಕ್ಕೆ ಪಡೆಯುವುದನ್ನು ನೋಡಬಹುದಾಗಿದೆ.
ಈ ಕುರಿತು ಡಿಸಿಪಿ ಅನಿತ್ ಕುಮಾರ್ ಮಾತನಾಡಿ, ವಿಕಾಸ್ ಜಾಖಾ ಇವರು ನಿವೃತ್ತ ಸಿಆರ್ಪಿಎಫ್ ಯೋಧರೆಂದು ತಿಳಿದು ಬಂದಿದೆ. ಯೋಧನ ಪತ್ನಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಶಾಸಕರನ್ನು ಸಂಪರ್ಕಿಸಿದ್ದರು. ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಕುಪಿತಗೊಂಡ ಆತ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.