
ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್ ಸೋಂಕು ಕಂಡು ಬಂದಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣೀ ಎಂದು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.ಅಪಾಯಕಾರಿ ಜೀಕಾ ವೈರಸ್ಗೆ ಕರ್ನಾಟದಲ್ಲಿ ಮೊದಲ ಬಲಿಯಾಗಿದೆ. ಜೀಕಾ ವೈರಸ್ ಸೋಂಕಿನಿಂದ ಬಳಸುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ.

73 ವರ್ಷದ ವ್ಯಕ್ತಿ ಮೃತಪಟ್ಟವರು ಎಂದು ಮೂಲಗಳು ತಿಳಿಸಿವೆ. ಅವರಿಗೆ ಕೆಲವು ದಿನಗಳಿಂದ ಜೀಕಾ ವೈರಸ್ನಿಂದ ಆಗುವ ಸೋಂಕು ಇತ್ತು. ಜತೆಗೆ ಅವರಿಗೆ ಕೋಮಾರ್ಬಿಟಿಸ್ ಕೂಡ ಇತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವೈರಸ್ ಕಾಣಿಸಿಕೊಂಡ ರೋಗಿಗಳ ವಿವರವನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಜಿಗಣಿಯಲ್ಲಿ ಝೀಕಾ ವೈರಸ್ ಕಂಡುಬಂದ ಗರ್ಭಿಣಿಗೆ ಹೆರಿಗೆಯಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಇನ್ನುಳಿದ ನಾಲ್ವರಿಗೆ ಮುಂದುವರೆದ ಚಿಕಿತ್ಸೆ ಮುಂದುವರಿದಿದೆ.