
ನವದೆಹಲಿ:ಪಂಜಾಬ್‌ನಲ್ಲಿ ನಡೆದ ವಿಎಚ್‌ಪಿ ನಾಯಕ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಹತ್ಯೆಗೆ ಬಳಸಲಾದ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಿದ್ದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ. ಪ್ರಕರಣದಲ್ಲಿ ಆರೋಪಿ ಧರ್ಮಿಂದರ್ ಕುಮಾರ್ ಅಲಿಯಾಸ್ ಕುನಾಲ್ (22) ನನ್ನು ಎನ್‌ಐಎ ಮತ್ತು ದೆಹಲಿ ಪೊಲೀಸ್ ವಿಶೇಷ ಕೋಶದ ತಂಡಗಳು ಪಂಜಾಬ್‌ನ ಲೂಧಿಯಾನಾದಲ್ಲಿ ಬಂಧಿಸಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ), ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.ಅವನು ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದನು ಮತ್ತು ವಿದೇಶಿ ಮೂಲದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಕುಮಾರ್ ಅಲಿಯಾಸ್ ಸೋನು ಅವರ ನಿರ್ದೇಶನದ ಮೇರೆಗೆ ಗ್ರೌಂಡ್ ಶೂಟರ್‌ಗಳಿಗೆ ಅದನ್ನು ಪೂರೈಸಿದ್ದರು ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ ಎಂದು ಭಯೋತ್ಪಾದನಾ ನಿಗ್ರಹ ದಳದ ಹೇಳಿಕೆ ತಿಳಿಸಿದೆ.
“ವಿಕಾಸ್ ಪ್ರಭಾಕರ್ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಮದ್ಯ ಪ್ರದೇಶದಿಂದ ಸಂಗ್ರಹಿಸಿದ್ದಾನೆ. ಎನ್‌ಐಎ ಮತ್ತು ದೆಹಲಿ ಪೊಲೀಸ್ ವಿಶೇಷ ಸೆಲ್‌ನ ಜಂಟಿ ತಂಡವು ಲುಧಿಯಾನದ ಬಾಲ್ಮಿಕಿ ಕಾಲೋನಿಯಿಂದ ಆತನನ್ನು ಬಂಧಿಸಿದೆ” ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ ಎಸ್ ಕುಶ್ವಾಹ್ ತಿಳಿಸಿದ್ದಾರೆ.
ಪಂಜಾಬ್‌ನ ಎಸ್‌ಬಿಎಸ್ ನಗರದ ನಿವಾಸಿಗಳಾದ ಮಂದೀಪ್ ಕುಮಾರ್ ಅಲಿಯಾಸ್ ಮಾಂಗ್ಲಿ ಮತ್ತು ಸುರೀಂದರ್ ಕುಮಾರ್ ಅಲಿಯಾಸ್ ರಿಕಾ ಎಂದು ಗುರುತಿಸಲಾದ ಶೂಟರ್‌ಗಳನ್ನು ಏಪ್ರಿಲ್ 16 ರಂದು ಬಂಧಿಸಲಾಗಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅದು ಹೇಳಿದೆ.ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ)ದ ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ, ಅವರ ಬಂಧನಕ್ಕೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿರುವ ಹರ್ಜಿತ್ ಸಿಂಗ್ ಅಲಿಯಾಸ್ ಲಾಧಿ ಮತ್ತು ಕುಲ್ವೀರ್ ಸಿಂಗ್ ಅಲಿಯಾಸ್ ಸಿಧು ಎಂದು ಎನ್‌ಐಎ ತಿಳಿಸಿದೆ.ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ನಂಗಲ್ ಅಧ್ಯಕ್ಷ ಬಗ್ಗ ಅವರನ್ನು ಏಪ್ರಿಲ್ 13 ರಂದು ಪಂಜಾಬ್‌ನ ರೂಪ್‌ನಗರ ಜಿಲ್ಲೆಯ ನಂಗಲ್‌ನಲ್ಲಿ ಅವರ ಮಿಠಾಯಿ ಅಂಗಡಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಮೇ 9 ರಂದು ಎನ್‌ಐಎ ರಾಜ್ಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದೆ. ದೆಹಲಿ ಪೊಲೀಸರ ಪ್ರಕಾರ, ಕುಮಾರ್ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಅವರು ಈ ಹಿಂದೆ ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅವರ ವಿರುದ್ಧ ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.




