ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಡಿ-ಗ್ಯಾಂಗ್ ಜೈಲುವಾಸ 72 ದಿನಗಳನ್ನು ಮುಗಿಸಿದೆ. ಇನ್ನೇನು ಪೊಲೀಸ್ರು ವಿಚಾರಣೆ ಮುಗಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಈ ನಡುವೆ ಕೊಲೆ ಕೇಸ್ನಲ್ಲಿ A1 ಆರೋಪಿ ಆಗಿರುವ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
57ನೇ ಸೆಷನ್ಸ್ ಕೋರ್ಟ್ನಲ್ಲಿ ಹಿರಿಯ ವಕೀಲರಾದ ರೇನಿ ಸೆಬಾಸ್ಟಿಯನ್ ಅರ್ಜಿ ಸಲ್ಲಿಕೆ ಮಾಡಿದ್ದು, ಆಗಸ್ಟ್ 22ರಂದು ವಿಚಾರಣೆಗೆ ಬರಲಿದೆ ಎನ್ನಲಾಗಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A7 ಆಗಿರುವ ಆರೋಪಿ ಅನುಕುಮಾರ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ವಿಚಾರಣೆಗೆ ನಿಗದಿ ಆಗಬೇಕಿದೆ.
ಇಷ್ಟು ದಿನಗಳ ಕಾಲ ಜಾಮೀನು ಅರ್ಜಿ ಸಲ್ಲಿಕೆ ಮಾಡದ ಆರೋಪಿಗಳು, ಇದೀಗ ಪೊಲೀಸ್ರ ಪ್ರಿಕ್ರಿಯೆ ಹಾಗು ಕೋರ್ಟ್ ಏನು ಹೇಳುತ್ತದೆ ಅನ್ನೋದನ್ನು ಅರಿತುಕೊಳ್ಳಲು ಜಾಮೀನು ಅರ್ಜಿ ಮೊರೆ ಹೋಗಿದ್ದಾರೆ ಎನ್ನಲಾಗ್ತಿದೆ. ಪೊಲೀಸ್ರು ತನಿಖೆ ಯಾವ ಹಂತದಲ್ಲಿದೆ. ಅವರ ವಿರುದ್ಧದ ಆರೋಪಗಳ ಬಗ್ಗೆ ಸೂಕ್ತ ಮಾಹಿತಿ ಸಿಗ್ತಿಲ್ಲ. ಇದೀಗ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವಾಗ ಪೊಲೀಸ್ರ ಉತ್ತರ ಏನು ಅನ್ನೋ ಬಗ್ಗೆ ತಿಳಿದುಕೊಳ್ಳಬೇಕಿದೆ ಎನ್ನಲಾಗ್ತಿದೆ.