ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith shetty) ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಕಾಪಿ ರೈಟ್ (Copyright) ಉಲ್ಲಂಘನೆ ಆರೋಪಕ್ಕಾಗಿ 20 ಲಕ್ಷ ಠೇವಣಿ ಇಡಲು ಹೈಕೋರ್ಟ್ (Highcourt) ಆದೇಶಿದೆ.
ಪರಂವಾ ಸ್ಟುಡಿಯೋಸ್ (Paramvah studios) ನಿರ್ಮಾಣದ ಬ್ಯಾಚುಲರ್ ಪಾರ್ಟಿ (Bachelor party) ಸಿನಿಮಾದಲ್ಲಿ ಎಂಆರ್ ಟಿ (MTR music) ಸಂಸ್ಥೆಗೆ ಸೇರಿದ ನ್ಯಾಯ ಎಲ್ಲಿದೆ ಮತ್ತು ಒಮ್ಮೆ ನಿನ್ನನ್ನು ಎಂಬ ಹಾಡುಗಳನ್ನು ರಕ್ಷಿತ್ ಶೆಟ್ಟಿ ಬಳಸಿಕೊಂಡಿದ್ದಾರೆಂದು ಎಂಆರ್ ಟಿ ಮ್ಯೂಸಿಕ್ ಕೃತಿ ಚೌರ್ಯ ಆರೋಪ ಮಾಡಿದ್ರು.
ಇದೇ ವಿಚಾರವಾಗಿ ಎಂ ಆರ್ ಟಿ ಮ್ಯೂಸಿಕ್ ಸಂಸ್ಥೆ ದೆಹಲಿ ಹೈಕೋರ್ಟ್ (Delhi high court) ಮೆಟ್ಟಿಲು ಏರಿದ್ರು.ಆದ್ರೆ ರಕ್ಷಿತ್ ಶೆಟ್ಟಿ ಮಾತ್ರ ಕೋರ್ಟ್ಗೆ ಹಾಜರಾಗಿರಲಿಲ್ಲ.ಹೀಗಾಗಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ ಕಾಪಿ ರೈಟ್ ಉಲ್ಲಂಘನೆಗಾಗಿ 20 ಲಕ್ಷ (20 lakhs) ಠೇವಣಿ ಇಡಲು ನಿರ್ದೇಶಿಸಿದೆ. ಜೊತೆಗೆ ಇನ್ನಾದಲ್ಲಿ ಶೇರ್ ಮಾಡಿರೋ ಹಾಡು ತೆಗೆಯುವಂತೆ ಕೂಡ ಆದೇಶ ಹೊರಡಿಸಿದೆ.