ಬೆಂಗಳೂರು: ಸಾರ್ವಜನಿಕರನ್ನ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ವಂಚಕರನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.ದುಬೈನ ಯುಸೂಫ್ ಸೇಠ್, ಬೆಂಗಳೂರಿನ ಮಹಮ್ಮದ್ ಶಾಕಿಬ್ , ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತರು.
ಸಿಐಡಿ ಪೊಲೀಸರಿಂದ ದುಬೈ ಮೂಲದ ವ್ಯಕ್ತಿ ಸೇರಿ ಐವರ ಬಂಧನ ಮಾಡಿದ್ದು ನಿಮ್ಮ ಹೆಸರಿನ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಕರೆ ಮಾಡುತ್ತಿದ್ದ ಆರೋಪಿಗಳು ನಾವು ಕ್ರೈಂ ಪೊಲೀಸರು ಇದನ್ನ ಬಗೆಹರಿಸಲು ಹಣ ಕೊಡಬೇಕು ಎಂದು ಬೇಡಿಕೆ.
ಕೊಡುಗು ಮೂಲದ ವ್ಯಕ್ತಿಯಿಂದ ಎರಡು ಕೋಟಿ 21 ಲಕ್ಷ ಆರ್ ಟಿಜಿಎಸ್ ಮಾಡಿಸಿಕೊಂಡಿದ್ರು ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು ಸದ್ಯ ಸಿಐಡಿ ಪೊಲೀಸರಿಂದ ಆರೋಪಿಗಳ ಬಂಧನ ವಂಚನೆ ಹಣದಿಂದ ಬೆನ್ಜ್ ಕಾರು ಖರೀದಿಸಿದ್ದ ಆರೋಪಿಗಳು.
ಆರೋಪಿಗಳಿಂದ ಒಂದು ಕೋಟಿ 70 ಲಕ್ಷ ಹಣ 7700 ಯುಎಸ್ ಡಾಲರ್ ವಶ ಹಾಗೆ ದುಬೈನಲ್ಲಿ ವಂಚನೆ ಮಾಡಲು ಭಾರತೀಯ ಬ್ಯಾಂಕ್ ಅಕೌಂಟ್ ಬಳಸಿರುವ ಆರೋಪಿಗಳು ಹೀಗಾಘಿ ಸಿಐಡಿ ಪೊಲೀಸರಿಂದ ಮುಂದುವರೆದ ತನಿಖೆ ನಡೆಯುತ್ತಿದೆ.