ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಮಹಾಮಾರಿ ಕೊರೊನಾ ವೈರಸ್ (Corona virus) ನ ಬಳಿಕ ಅದೇ ರೀತಿ ಸಾಂಕ್ರಾಮಿಕವಾಗಿ ಹರಡುವ ಭೀತಿ ಹುಟ್ಟಿಸಿರುವ Mpox ವೈರಸ್ ವಿಶ್ವಾದ್ಯಂತ ಆತಂಕ ಹುಟ್ಟಿಸಿದೆ. ಮೊದಲಿಗೆ ಆಫ್ರಿಕನ್ ದೇಶಗಳಲ್ಲಿ (Afrian countries) ಕಾಣಿಸಿಕೊಂಡಿದ್ದ ಈ ಸೋಂಕು ಇದೀಗ ಸ್ವೀಡನ್ (Sweden) ನಲ್ಲಿಯೂ ಕಾಣಿಸಿಕೊಂಡಿದೆ.

ಇದೀಗ ಈ ಸೋಂಕಿನ ಮೊದಲ ಪ್ರಕರಣ ಸ್ವೀಡನ್‌ನಲ್ಲಿ ಪತ್ತೆಯಾಗಿದ್ದು, ದೇಶದಲ್ಲಿ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿರುವ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ.
ಈ ವೈರಸ್ ಸೋಂಕಿತರ ಚರ್ಮದಿಂದ ಇತರರ ಚರ್ಮಕ್ಕೆ ಹಬ್ಬುವಂತದ್ದಾಗಿದ್ದು, ಪರಸ್ಪರ ಸಂಪರ್ಕದ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಸೀನು ಮತ್ತು ಕೆಮ್ಮುವಾಗ ಸೋಂಕಿತ ಉಸಿರಾಟದ ಮೂಲಕ ಕೂಡ ಹರಡುತ್ತದೆ.ಹೀಗಾಗಿ ಕಡಿಮೆ ಸಮಯದಲ್ಲಿ ಹೆಚ್ಚು ವ್ಯಕ್ತಿಗಳಿಗೆ ಸೋಂಕು ತಗಲುವ ಕಾರಣ ಭೀತಿ ಹೆಚ್ಚಾಗಿದೆ.