ಸಿಎಂ ಸಿದ್ದರಾಮಯ್ಯ (Cm siddaramaiah) ಕುರಿತ ಮೂಡ ಹಗರಣದ (Muda scam) ತನಿಖೆಯನ್ನು ಅನುಮತಿ ನೀಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದಲ್ಲಿ ಸಲ್ಲಿಸಲು ಮುಂದಾಗಿದ್ದ ಆಲಂ ಪಾಷ (Alam pasha) ಅರ್ಜಿಯನ್ನು ಕೋರ್ಟ್ ವಜಗೊಳಿಸಿದೆ.
ಸ್ನೇಹಮಯಿ ಕೃಷ್ಣ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಆಲಂ ಪಾಷ ಮಧ್ಯಂತರದಲ್ಲಿ ವಾದಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ನಿಮಗೆ ಈ ರೀತಿ ಮಧ್ಯಪ್ರವೇಶಿಸಲು ಯಾವ ಹಕ್ಕಿದೆ,ಯಾವ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ರೀತಿ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದೀರಿ ಎಂದು ಜಡ್ಜ್ ಆಲಂ ಪಾಷ ವಿರುದ್ಧ ಗರಂ ಆಗಿದ್ದರು.
ಅಂತಿಮವಾಗಿ ಸುಧೀರ್ಘವಾದ ಪ್ರತಿವಾದ ಆಲಿಸಿದ ನಂತರ ಸಿಎಂ ವಿರುದ್ಧದ ತನಿಖೆಗೆ ಅನುಮತಿ ನೀಡಬಾರದು ಎಂಬ ಆಲಂಪಾಷ ಅರ್ಜಿಯನ್ನು ಕೋರ್ಟ್ ವಜಗೊಳಿಸಿದೆ. ಆ ಮೂಲಕ ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಕೆಗೆ ಅವಕಾಶ ನೀಡುವುದಾಗಿ ಜನಪ್ರತಿನಿಧಿಗಳ ಕೋರ್ಟ್ ತಿಳಿಸಿದ್ದಂತೆ ಆಗಿದೆ.