ಮಹಿಳಾ ಕೆಎಎಸ್ ಅಧಿಕಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪ ಹೊತ್ತ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ, ಸುನೀಲ್ ಇಬ್ಬರ ವಿರುದ್ದ ಚಾರ್ಜ್ ಶೀಟ್ ಸ್ಕಲ್ಲಿಕೆಯಾಗಿದೆ.
ಈ ಮುಂಚೆ ಜೀವನಭೀಮ ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಕೆಎಎಸ್ ಅಧಿಕಾರಿ ಡಾ. ಬಿ ಸುಧಾ ವಿರುದ್ಧ ಲೋಕಾಯುಕ್ತ, ಎಸಿಬಿಗೆ ಅಬ್ರಾಹಂ ದೂರು ನೀಡಿದ್ದರು. ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದಡಿ ಅಬ್ರಾಹಂ ದೂರು ನೀಡಿದ್ದರು.
ಈ ದೂರಿನ ಸಂಬಂಧ ಯಾವುದೇ ತೊಂದರೆ ಕೊಡದಿರಲು , ಅಂದ್ರೆ ಈ ಪ್ರಕರಣ ಮುಂದುವರೆಸದಿರಲು ಅಬ್ರಾಹಂ ಡೀಲ್ ನಡೆಸಿದ್ದರು. ಸುನೀಲ್ ಎಂಬುವನನ್ನ ಬಳಸಿಕೊಂಡು ಅಬ್ರಾಹಂ ಈ ಡೀಲ್ ನಡಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಇಬ್ಬರ ವಿರುದ್ಧ FIR ದಾಖಲಾಗಿತ್ತು, ಹೀಗಾಗಿ ಬಂಧನ ಭೀತಿಯಿಂದ ಈ ಇಬ್ಬರೂ ನೀರಿಕ್ಷಣ ಜಾಮೀನು ಕೂಡ ಪಡೆದಿದ್ರು.
ಈ ನಂತರದಲ್ಲಿ ಇಬ್ಬರಿಗೂ ಜೆಬಿ ನಗರ ಪೋಲಿಸರು ವಿಚಾರಣೆ ಗೆ ಠಾಣೆಗೆ ಬರುವಂತೆ ನೋಟಿಸ್ ನೀಡಿದ್ದರು.ಆರೋಪಿಗಳ ಕಾಲ್ ಡಿಟೈಲ್ಸ್, ದನಿ ಮಾದರಿ ವಿಡಿಯೋ ಪರೀಕ್ಷೆ ಯ ವರದಿಗಳನ್ನು ಎಫ್ ಎಸ್ ಎಲ್‌ಗೆ ಕಳುಹಿಸಲಾಗಿತ್ತು. ಆರೋಪಿಗಳು ಮಾಡಿದ್ದ ಕಾಲ್ ಡಿಟೈಲ್ಸ್, ಚಾಟ್ಸ್ ನ ಪೋಲಿಸರು ಸಂಗ್ರಹಿಸಿದ್ದರು. FSL ವರದಿ ಸೇರಿ ಹಲವು ಸಾಕ್ಷ್ಯಗಳನ್ನ ಸಂಗ್ರಹಿಸಿ ಉಲ್ಲೆಖ ಮಾಡಲಾಗಿದೆ .
ಮೂಡ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಟಿ ಜೆ ಅಬ್ರಹಾಂ ಗೆ ಇದೀಗ ಈ ಸಂದರ್ಭದಲ್ಲಿ ಈ ಪ್ರಕರಣ ಮುಳುವಾಗಿ ಪರಿಣಮಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.