ಪಾಕಿಸ್ತಾನದ (Pakistan) ಜಾವೆಲಿನ್ ಥೋ ಕ್ರೀಡಾಪಟು ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ (Paris olympics) 2024 ರ ಫೈನಲ್ನಲ್ಲಿ ಇತಿಹಾಸ ಕ್ರಿಯೇಟ್ ಮಾಡಿದ್ದಾರೆ. ಸುಮಾರು 92.97 ಮೀಟರ್ ದೂರ ಜಾವೆಲಿನ್ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಭಾರತಕ್ಕೆ (India) 5ನೇ ಪದಕ ದಕ್ಕಿದೆ. ಜಾವೆಲಿನ್ ಥೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಲಭಿಸಲಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್ ಆಗಿದೆ. ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಪ್ಯಾರಿಸ್ (Neeraj chopra) ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಬಿಟ್ಟುಕೊಟ್ಟಿದ್ದಾರೆ.
ನೀರಜ್ ಭಾರತಕ್ಕೆ ಪ್ರಸಕ್ತ ಕ್ರೀಡಾಕೂಟದಲ್ಲಿ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ. ನೀರಜ್, ಆರು ಪ್ರಯತ್ನಗಳಲ್ಲಿ ಎರಡನೇ ಎಸೆತ ಅತ್ಯುತ್ತಮವಾಗಿತ್ತು. ಅವರ ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳು ಫೌಲ್ ಆದವು. ಇನ್ನೂ ನೀರಜ್ ಪ್ರಯತ್ನಕ್ಕೆ ಪ್ರಧಾನಿ ಮೋದಿ (Pm modi) ಟ್ವಿಟ್ ಮಾಡಿ ಶುಭ ಹಾರೈಸಿದ್ದಾರೆ.






