ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris olympics 2024) .ಹಾಕಿಯಲ್ಲಿ (Hockey) ಭಾರತ ವರ್ಷಗಳ ಬಳಿಕ ಪದಕ ಗೆದ್ದಿದೆ. ಕಂಚಿನ ಪದಕ ಗೆಲ್ಲುವ ಮೂಲಕ 52 ವರ್ಷಗಳ ಬಳಿಕ ಇತಿಹಾಸ ಬರೆದಿದೆ. ಸ್ಪೇನ್ (Spain) ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸುವುದರೊಂದಿಗೆ, ಭಾರತೀಯ (India) ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ (Bronze) ತನ್ನದಾಗಿಸಿಕೊಂಡಿದೆ.
ಈ ಹಿಂದೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ (Tokiyo) ಕಂಚಿನ ಪದಕ ಗೆದ್ದಿದ್ದ ಭಾರತ ತಂಡ, ಈ ಬಾರಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸಿದೆ. ಇದರೊಂದಿಗೆ ಹರ್ಮನ್ ಪ್ರೀತ್ ಸಿಂಗ್ ಬಳಗ ಗಮನಾರ್ಹ ಸಾಧನೆ ಮಾಡಿದೆ.
ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದ ಜಯ ಸಾಧಿಸಿದ ಭಾರತ, 1972ರ ನಂತರ ಇದೇ ಮೊದಲ ಬಾರಿಗೆ ಸುಮಾರು 52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ.