ಕುಸ್ತಿಯಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ವಿನೀಶ್ ಫೋಗಾಟ್ (Vinesh Phogat) ಫೈನಲ್ ಪಂದ್ಯ ಆಡುವ ಮುನ್ನವೇ ಅನರ್ಹಗೊಂಡಿದ್ದಾರೆ. ದೇಹದ ತೂಕ 50 ಕೆಜಿಗಿಂತ (50 kg) ಕೆವಲ 100 ಗ್ರಾಂ ಹೆಚ್ಚಾದ ಕಾರಣಕ್ಕೆ ವಿನೇಶ್ ಫೋಗಟ್ ಪದಕ ವಂಚಿತರಾಗಿದ್ದಾರೆ.
ಈ ಕುಸ್ತಿ ಪಂದ್ಯದ ನಿಯಮಾವಳಿ ಪ್ರಕಾರ ದೇಹದ ತೂಕದ ಮಿತಿ ಕೇವಲ 50 ಕೆ.ಜಿ ಮಾತ್ರ. ಅದಕ್ಕಿಂತ ತೂಕ ಹೆಚ್ಚಿದ್ದರೆ, ಅಂತಹ ಸ್ಪರ್ಥಿಗಳು ಭಾಗವಹಿಸಲು ಅನರ್ಹವೆಂಬ ನಿಯಮವಿದೆ. ಇದೇ ಕಾರಣಕ್ಕೆ ಕೇವಲ 100 ಗ್ರಾಂ ತೂಕ ಹೆಚ್ಚಳ ಆಗಿದ್ದಕ್ಕೆ ಒಲಿಪಿಂಕ್ಸ್ನಿಂದ (Olympics) ವಿನೀಶ್ ಫೋಗಾಟ್ ಅನರ್ಹರಾಗಿದ್ದಾರೆ.
50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಫೈನಲ್ಸ್ ಪ್ರವೇಶಿಸಿದ್ದ ವಿನೇಶ್, ಪದಕದ ಭರವಸೆ ಮೂಡಿಸಿದ್ದರು.ಚಿನ್ನದ ಪದಕ (Gold medal) ಗೆಲ್ಲುವ ಫೇವರಿಟ್ ಆಗಿದ್ದ ಸ್ಪರ್ಧಿ ವಿನೇಶ್ ಫೋಗಟ್ ಅವರ್ಹಗೊಳಿಸಿದ್ದು ನಿಜಕ್ಕೂ ವಿಪರಿಯಾಸ. ನಿನ್ನೆ ತೂಕ ಮಾಡಿದ್ದಾಗ 50 ಕೆ.ಜಿಯ ಒಳಗಡೆಯೇ ತೂಕ ಹೊಂದಿದ್ದರು.
ಆದ್ರೆ ಇವತ್ತು ಬೆಳಗ್ಗೆ ಪರಿಶೀಲನೆಯ ವೇಳೆ 100 ಗ್ರಾಂ ತೂಕ ಹೆಚ್ಚಳವಾಗಿರೋದು ವರದಿಯಾಗಿದೆ.ಕೇವಲ 100 ಗ್ರಾಂ ಹೆಚ್ಚಳದಿಂದಾಗಿ ವಿನೇಶ್ಗೆ ಪದಕ ಮಿಸ್ ಆಗಿದೆ.ಜೊತೆಗೆ ಅನರ್ಹಗೊಳಿಸಿದ ಒಲಿಪಿಂಕ್ಸ್ ಅಸೋಸಿಯೇಷನ್ ತೀರ್ಪಿಗೆ ಕೂಡ ವಿರೋಧ ವ್ಯಕ್ತವಾಗಿದೆ. ಒಲಿಂಪಿಕ್ಸ್ ಅಸೋಸಿಯೇಷನ್ ತೀರ್ಪಿಗೆ ಭಾರತದಿಂದ ತೀವ್ರ ವಿರೋಧ ವ್ಯಕ್ತಪಡಿಸಿದೆ.