ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಬಂಧನವಾಗಿರುವ ನಟ ದರ್ಶನ (Actor darshan) ಜೈಲಿನಲ್ಲಿ ಪರದಾಡುತ್ತಿದ್ದಾರೆ. ತಾನು ಇರುವ ಸೆಲ್ ನಿಂದ ಬೇರೆಡೆಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ವಾಲ್ಮೀಕಿ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ನಾಗೇಂದ್ರ (X minister nagendra) ಇರುವ ಸೆಲ್ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಊಟದ ವಿಚಾವಾಗಿ ಹೈಕೋರ್ಟ್ (Highcourt) ಮೊರೆ ಹೋಗಿರುವ ಆರೋಪಿ ದರ್ಶನ್ ಮಾಂಸಾಹಾರ ಊಟಕ್ಕಾಗಿ ಪರಿತಪಿಸುತ್ತಿರುವಂತಿದೆ. ಹೀಗಾಗಿ ಜೈಲಿನಲ್ಲಿ ಇರುವ ಕುಖ್ಯಾತ ರೌಡಿಶೀಟರ್‌ಗಳು, ರೌಡಿ ಗಳಗೆ ವಿಸಿಟರ್ ಗಳು ನೀಡುವ ಆಹಾರವನ್ನು ದರ್ಶನ್ ಗೂ ನೀಡುತಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತಿ ದಿನ ಒಂದಲ್ಲಾ ಒಂದು ರೌಡಿ ಶೀಟರ್ ಅನ್ನು ಭೇಟಿ ಮಾಡಲು ಬರುವ ವಿಸಿಟರ್ಸ್ ತಂದ ಆಹಾರವನ್ನು ದರ್ಶನ್ ಗೆ ರೌಡಿಗಳು ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗೆ ಸಜೆಯಾಗಿರುವ ಕೆಲ ಕೈದಿಗಳು ದರ್ಶನ್ ಗೆ ಊಟ ತಲುಪಿಸುತ್ತಿದ್ದು, ಈ ಹಿನ್ನೆಲೆ ದರ್ಶನ್ ಇರುವ ಸೆಲ್ ಬಳಿ ಕೆಲವ ಸಿಬ್ಬಂದಿಯನ್ನು ಮಾತ್ರ ಜೈಲು ಅಧಿಕಾರಿಗಳು ನೇಮಕ ಮಾಡಿದ್ದಾರೆ.