ಮಾಧ್ಯಮಗಳನ್ನು ಉದ್ದೇಶಿಸಿ ಎಚ್ ಡಿ ಕುಮಾರಸ್ವಾಮಿ (HD kumaraswamy) ಮಾತನಾಡುವ ಸಂದರ್ಭದಲ್ಲಿ ಅವರ ಮೂಗಿನಲ್ಲಿ ಇದ್ದಕ್ಕಿದ್ದ ಹಾಗೆ ರಕ್ತಸ್ರಾವವಾಗಿದೆ . ತಕ್ಷಣ ಅವರನ್ನು ಖಾಸಗಿ ಹೋಟೆಲ್ ನಿಂದ ಜಯನಗರದ (Jayanagar) ಅಪೋಲೋ ಆಸ್ಪತ್ರೆಗೆ (Apolo hospital) ದಾಖಲಿಸಲಾಗಿದೆ.

ಇನ್ನು ರಾಜ್ಯ ಕಾಂಗ್ರೆಸ್ (Congress)ಸರ್ಕಾರದ ಹಗರಣಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತನಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ,ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು ತಕ್ಷಣವೇ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಕರೆದುಯುವ ಕೆಲಸ ಮಾಡಲಾಗಿದೆ.
ಕುಮಾರಸ್ವಾಮಿಯವರಿಗೆ ಇತ್ತೀಚೆಗೆ ಬೈಪಾಸ್ ಸರ್ಜರಿಯಾಗಿದ್ದು ಅದಕ್ಕಾಗಿ ಅವರು ಬ್ಲಡ್ ತಿನ್ನರ್ (Blood thinner) ತೆಗೆದುಕೊಳ್ಳುತ್ತಾರೆ . ಈ ಕಾರಣಕ್ಕಾಗಿ ಈ ರೀತಿ ಕೆಲವೊಮ್ಮೆ ಮೂಗಿನಿಂದ ರಕ್ತಸ್ರಾವವಾಗಬಹುದು ಎಂಬ ಮಾಹಿತಿ ಲಭ್ಯವಾಗಿದ್ದು ,ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರ ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಬೇಕಿದೆ.
