ಇತ್ತೀಚಿನ ದಿನಗಳಲ್ಲಿ ಅಸ್ತಮಾ ಅನ್ನೋದು ತುಂಬಾನೇ ಕಾಮನ್ ಆಗ್ಬಿಟ್ಟಿದೆ ದೊಡ್ಡವರಲ್ಲಿ ಮಾತ್ರವಲ್ಲದೇ ಚಿಕ್ಕ ಮಕ್ಕಳಲ್ಲೂ ಕೂಡ ಅಸ್ತಮಾದ ಸಮಸ್ಯೆ ಹೆಚ್ಚಾಗುತ್ತಿದೆ.. ಧೂಳು ಧೂಮಪಾನದ ಅಭ್ಯಾಸ ವಾಹನದ ಹೊಗೆ ಪೊಲ್ಲ್ಯೂಷನ್ ಇವೆಲ್ಲವೂ ಕೂಡ ಅಸ್ತಮಕ್ಕೆ ಪ್ರಮುಖ ಕಾರಣವಾಗುತ್ತದೆ.

ಇನ್ನು ಮಳೆಗಾಲ ಬಂತು ಅಂದ್ರೆ ಸಾಮಾನ್ಯ ಜನರಿಗೆ ಶೀತ ಕೆಮ್ಮು, ನೆಗಡಿ, ಆಗುವುದು ಹೆಚ್ಚು.ಅಂತದ್ದರಲ್ಲಿ ಅಸ್ತಮ ಇದ್ದವರಿಗೆ ಕಫ ಕಟ್ಟುವುದು ಕೆಮ್ಮು ಜೋರಾಗುವುದು ಜ್ವರ ಶುರುವಾಗುವುದು ಇದೆಲ್ಲದರ ಬಗ್ಗೆ ಕೇಳೋದೆಬೇಡ. ಅಸ್ತಮ ಜೋರಾಗಲು ಮಳೆಯಲ್ಲಿ ನೆನೆಲೇಬೇಕೆಂದೇನಿಲ್ಲ ಹವಮಾನ ಬದಲಾಗುತ್ತಿದ್ದಂತೆ, ತಂಡಿ ವಾತಾವರಣ ಹೆಚ್ಚಾದಂತೆ ಅಸ್ತಮ ಇದ್ದವರಿಗೆ ಒಂದೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಅಸ್ತಮ ಇದ್ದವರಲ್ಲಿ ಎದೆಯಲಿ ಕಫ ಕಟ್ಟುವುದು, ಶ್ವಾಸಕೋಶದ ತೊಂದರೆ, ಉಸಿರಾಡಲು ಸರಿಯಾಗಿ ಆಗುವುದಿಲ್ಲ, ಉಬ್ಬಸ, ಉಸಿರಾಟದ ಮಾರ್ಗಗಳು ಗಿರಿಧಾಗುವ ಮೂಲಕ ನಾಳಗಳು ಊದಿಕೊಳ್ಳುತ್ತದೆ ಹಾಗೂ ಹೆಚ್ಚು ಲೋಳೆಗಳು ಉತ್ಪತ್ತಿಯಾಗುತ್ತದೆ, ಹಾಗೂ ಮಲಗಿರುವ ವೇಳೆ ಗೊರಕೆ ಹೊಡೆಯುವುದು ಕೂಡ ಹೆಚ್ಚು. ಹಾಗಾಗಿ ಅಸ್ತಮ ಇದ್ದವರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರು ಅದು ಕಮ್ಮಿನೆ..

ಅಸ್ತಮವನ್ನ ಪರಿಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಥವಾ ಸೇವಿಸುವ ಆಹಾರವನ್ನು ಗಮನ ಹರಿಸಿದರೆ ಅಸ್ತಮವನ್ನ ಕಂಟ್ರೋಲ್ ಗೆ ತರಬಹುದು. ಹಾಗಿದ್ರೆ ಯಾವ ರೀತಿಯ ಆಹಾರ ಸೇವಿಸುವುದು ಉತ್ತಮ ಅನ್ನೋದರ ಮಾಹಿತಿ ಇಲ್ಲಿದೆ.

ಬೆಳ್ಳುಳ್ಳಿ ಮತ್ತು ಶುಂಠಿ
ಅಸ್ತಮಾ ಇದ್ದವರು ತಮ್ಮ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಬೆರೆಸಿ ಸೇವಿಸುವುದರಿಂದ ಅಸ್ತಮವನ್ನು ನಿಯಂತ್ರಿಸಲು ಉತ್ತಮ ಮದ್ದು. ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಹಾಕಿ ಕಷಾಯವನ್ನು ತಯಾರಿಸಬಹುದು. ಇಲ್ಲವಾದಲ್ಲಿ ತರಕಾರಿಯಿಂದ ತಯಾರಿಸಿದ ಸೂಪ್ ಮತ್ತು ನಾನ್ ವೆಜ್ ಸೂಪ್ಗಳಲ್ಲಿ ಶುಂಠಿ ಬೆಳ್ಳುಳ್ಳಿ ಬಳಸಿ ಸೇವಿಸಿದರೆ ಕಫ ಕಟ್ಟುವುದು ನಿಯಂತ್ರಣವಾಗುತ್ತದೆ.

ಮೆಗ್ನೀಷಿಯಂ ಹೆಚ್ಚಿರುವ ಆಹಾರ
ಸಂಶೋಧಕರ ಪ್ರಕಾರ, ದೇಹದಲ್ಲಿ ಮುಖ್ಯವಾಗಿ ಮೆಗ್ನೀಷಿಯಂ ಅಂಶದ ಕೊರತೆ ಇದ್ದಾಗ ಅಸ್ತಮಕ್ಕೆ ಹೆಚ್ಚು ಒಳಗಾಗುತ್ತೇವೆ. ಹಸಿರು ಎಲೆಗಳು , ತರಕಾರಿಗಳು, ಡಾರ್ಕ್ ಚಾಕಲೇಟ್, ಕುಂಬಳಕಾಯಿ ಬೀಜ, ಇವೆಲ್ಲದರಲ್ಲೂ ಹೇರಳವಾದ ಮೆಗ್ನೀಷಿಯಂ ಅಂಶ ಕಂಡುಬರುತ್ತದೆ .ಇನ್ನು ತಮ್ಮ ಡಯಟ್ ನಲ್ಲಿ ಇವುಗಳನ್ನು ಬಳಸಿ ಸೇವಿಸುವುದರಿಂದ ಅಸ್ತಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಸೇಬು
ಸೇಬುಗಳನ್ನ ತಿನ್ನುವುದರಿಂದ ಅಸ್ತಮಾದ ಅಪಾಯವನ್ನ ಕಡಿಮೆ ಮಾಡುತ್ತದೆ ದಿನಕೊಂದು ಸೇಬು ತಿನ್ನೋದು ವೈದ್ಯರನ್ನ ದೂರವಿರಿಸುತ್ತದೆ ಎಂಬ ಮಾತನ್ನು ನೀವು ಕೇಳೇ ಇರ್ತೀರ. ಈ ಆರೋಗ್ಯಕರ ಹಣ್ಣು ಅಸ್ತಮ ರೋಗಿಗಳ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ದೇಹಕ್ಕೆ ಬೇಕಾದ ಸಾಕಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
