ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕವಿಶೈಲ(kavishyla), ಆಗುಂಬೆ(Agumbe), ಕವಲೆದುರ್ಗ(Kavale Durga) , ಕೊಡಚಾದ್ರಿ (Kodachadri) ಮತ್ತಿತರ ಪ್ರವಾಸಿ ತಾಣಗಳು ಜನರನ್ನು ಆಕರ್ಷಿಸುವ ತಾಣವಾಗಿದೆ. ತೀರ್ಥಹಳ್ಳಿ ತಾಲೂಕಿನ ಭಾರತಿ ಪುರದಲ್ಲಿರುವ ವಿಹಂಗಮ ರೆಸಾರ್ಟ್ ತುಂಗಾ ನದಿಯ ದಂಡೆಯ ಮೇಲಿದೆ, ಇದು ಬಫರ್ ಜೊನ್ ಒಳಗೆ ರೆಸಾರ್ಟ್ ಮಾಲೀಕರು ಕಾಟೇಜ್ ಗಳನ್ನು ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಣೆಗೊಳಪಡಿಸಿದ್ದಾರೆ.
ಈಗಂತೂ ಮಳೆಗಾಲ ವಾಗಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ .
ಪ್ರಭಾಸಿಗರು ಉಳಿದುಕೊಳ್ಳುವ ಕಾಟೇಜ ಕೆಳಗೆ ನದಿ ದಂಡೆಯು ಕುಸಿತಗೊಂಡಿದ್ದು ಕಾರ್ಟೇಜ್ ಗಳು ಅಪಾಯದ ಅಂಚಿನಲ್ಲಿ ಇವೆ.
ಇಲ್ಲಿ ಕೃಷಿ ಚಟುವಟಿಕೆಗಳ ಒಳಗೊಂಡಿರುವ ರೆಸಾರ್ಟ್ ಆಗಿದ್ದು. ಅಡಿಕೆ ತೋಟ ಕೃಷಿ ಜೊತೆ ಜೊತೆಗೆ ಕಮರ್ಷಿಯಲ್ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಇದಕ್ಕೆ ಅನುಮತಿ ನೀಡಿದವರು ಯಾರು?
ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಮತಿ ನೀಡಿದ್ದಾರ?.
ತುಂಬಿ ಹರಿಯುತ್ತಿರುವ ತುಂಗಾ ನದಿಯ ದಡದಲ್ಲಿಯೇ ರೆಸಾರ್ಟ್ ನಿರ್ಮಾಣವಾಗಿರುವುದು ಅದು ಬಫರ್ ಜೋನ್ ಒಳಗೆ ಅವಕಾಶವನ್ನು ನೀಡಿದ ಅಧಿಕಾರಿಗಳು ಯಾರು? ಈ ಬಗ್ಗೆ ತನಿಕೆಯ ಅಗತ್ಯವಿದೆ.
ಈ ರೆಸಾರ್ಟಿಗೆ ಬರುವವರು ಆನ್ಲೈನ್ ಬುಕಿಂಗ್ ಮಾಡಲೇಬೇಕು. ಪ್ರಕೃತಿಯ ಸೊಬಗಿನ ಒಳಗೆ ಜೀವಕ್ಕೆ ಅಪಾಯವು ಒಡ್ಡುವ ನದಿ ದಡದಲ್ಲಿ ನಾವಿದ್ದೇವೆ ಎಂಬ ಅರಿವು ಇವರಿಗಿರುವುದಿಲ್ಲ.!!
ಕರ್ನಾಟಕ ಸರ್ಕಾರ ಶಿವಮೊಗ್ಗ ಜಿಲ್ಲಾಡಳಿತವು ಈ ಕೃಷಿ ಭೂಮಿಯಲ್ಲಿ ಮತ್ತು ಬಫರ್ ಜೊನ್ನಲ್ಲಿ ರೆಸಾರ್ಟ್ ನಡೆಸಲು ಅನುಮತಿ ಕೊಡಲು ಹೇಗೆ ಸಾಧ್ಯ ? ಕಾನೂನಿಗೆ ವಿರುದ್ಧವಾಗಿ ರೆಸಾರ್ಟ್ ನಡೆಸಲು ಅವಕಾಶ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಗುರುತರ ಜವಾಬ್ದಾರಿ ಈಗನಿಮ್ಮ ಮೇಲಿದೆ.
ಒಂದು ವೇಳೆ ರೆಸಾರ್ಟ್ ಮಾಲೀಕರು ಎಲ್ಲಾ ಕಾನೂನು ಪ್ರಕ್ರಿಯೆಗಳ ಮುಖಾಂತರವೇ ರೆಸಾರ್ಟ್ ನಡೆಸುತ್ತಿದ್ದರೆ ನಮ್ಮದು ಯಾವುದೇ ಅಭ್ಯಂತರವಿರುವುದಿಲ್ಲ
ಆದರೆ ತುಂಬಿ ಹರಿಯುತ್ತಿರುವ ತುಂಗಾ ನದಿಯ ತಟದಲ್ಲಿ ಮಳೆಗಾಲದ ಕಾರಣ ನೀರಿನ ಹರಿವು ಜಾಸ್ತಿಯಾಗಿ ತುಂಗಾ ನದಿಯ ದಂಡೆ ಕುಸಿಯುತ್ತಿದೆ. ಅದು ರೆಸಾರ್ಟ್ ಅಲ್ಲಿ ಉಳಿದುಕೊಳ್ಳುವ ಪ್ರವಾಸಿಗರು ಕಾಟೇಜಿನ ಹೊರಗೆ ನದಿ ನೀರು ನೋಡಿ ಖುಷಿಪಡುತ್ತಿದ್ದಾರೆ, ಇದರ ಹಿಂದಿನ ಅಪಾಯದ ಅರಿವಿಲ್ಲ, ಒಂದಲ್ಲ ಒಂದು ದಿನ ನದಿಯ ನೀರು ಉಕ್ಕಿ ನದಿ ದಂಡೆಯ ಮಣ್ಣು ಕುಸಿದು ಉಳಿದುಕೊಂಡಿರುವ ಪ್ರವಾಸಿಗರ ಜೀವಕ್ಕೆ ಅಪಾಯ ಒಡ್ಡುವುದಂತೂ ಸತ್ಯ.
ಬೇಸಿಗೆ ಸಮಯದಲ್ಲಿ ನದಿಯ ನೀರು ಕಡಿಮೆಯಾದಾಗ ನದಿಯಲ್ಲಿ ಬೋಟಿಂಗ್ ಕೂಡ ನಡೆಯುತ್ತಿದೆ. ನದಿಯು ಸಾರ್ವಜನಿಕರ ಸ್ವತ್ತಾಗಿದ್ದು ಇದಕ್ಕೆಲ್ಲ ಅವಕಾಶ ಕೊಟ್ಟ ಅಧಿಕಾರಿಗಳು ಯಾರು?
ಒಟ್ಟಿನಲ್ಲಿ ತೀರ್ಥಹಳ್ಳಿಯ ಪ್ರಕೃತಿಯ ಸೊಬಗನ್ನು ಸವಿಯಲು ಬರುವ ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಹಾಗೂ ಪ್ರಕೃತಿ, ಪರಿಸರ ,ನದಿಯನ್ನು ದುರುಪಯೋಗಪಡಿಸಿಕೊಂಡ ರೆಸಾರ್ಟ್ ಮಾಲೀಕರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆಯು ಮಾನ್ಯ ಸಚಿವರಲ್ಲಿ ಒತ್ತಾಯ ಪಡಿಸುತ್ತಿದೆ.
ತುಂಗಾ ನದಿಯ ದಡದಲ್ಲಿಯೇ ಬಫರ್ ಜೋನ ಒಳಗೆ ಕಾರ್ಟೇಜ್ ಗಳನ್ನು ನಿರ್ಮಾಣ ಮಾಡಲು, ತುಂಗಾ ನದಿಯ ಒಳಗಡೆ ಬೋಟಿಂಗ್ ನಡೆಸಲು ಅನುಮತಿ ಕೊಟ್ಟಿರುವುದು ನಮಗೆ ಅನುಮಾನ ಹುಟ್ಟಿಸಿದೆ.
ರೆಸಾರ್ಟ್ ಮಾಲೀಕರೊಂದಿಗೆ ಸ್ಥಳೀಯ ಅಧಿಕಾರಿಗಳು ಶಾಮಿಲಾಗಿರಬಹುದು. ಹೀಗಾಗಿ ಪ್ರಕೃತಿ, ಪರಿಸರದ ಮತ್ತು ನದಿಯನ್ನು ಉಪಯೋಗಿಸಿಕೊಂಡು ಅದರ ಲಾಭವನ್ನು ಪಡೆಯುತ್ತಿರುವ ರೆಸಾರ್ಟ್ ಮಾಲೀಕರು ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ತಕ್ಷಣ ಜರುಗಿಸದೆ ಇದ್ದಲ್ಲಿ ಸಾರ್ವಜನಿಕರ ಪ್ರವಾಸಿಗರ ಜೀವಕ್ಕೆ ಅಪಾಯವಾಗುವುದು ಸತ್ಯ.
ನಮ್ಮ ಈ ಮನವಿಯನ್ನುತಾವು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಆಡಳಿತದ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿ ಜನರ ಜೀವವನ್ನು ರಕ್ಷಿಸುವ ಗುರುತರ ಜವಾಬ್ದಾರಿ ನಿಮ್ಮದಾಗಿರುತ್ತದೆ.
ಈ ಹಿಂದೆ ಕೂಡ ಅರಣ್ಯ ಮತ್ತು ಪ್ರಾಣಿಗಳ ಅಂಗಾಂಗಗಳನ್ನು ರೆಸಾರ್ಟ್ ಅಲ್ಲಿ ಇರಿಸಿದ ಬಗ್ಗೆ ತೀರ್ಥಹಳ್ಳಿಯ ಸ್ಥಳೀಯ ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳು ಸಹ ವರದಿ ಮಾಡಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮಾನ್ಯ ಅರಣ್ಯ ಮತ್ತು ಜೀವಿ ಶಾಸ್ತ್ರ ಪರಿಸರ ಸಚಿವರಾದ ತಾವು ಮಲೆನಾಡಿನ ಭಾಗದಲ್ಲಿ ತೀವ್ರ ರೂಪದ ಮಳೆಯಾಗುತ್ತಿರುವುದರಿಂದತುಂಗಾ ನದಿ ತುಂಬಿ ಹರಿಯುತ್ತಿರುವ ಈ ಸಂದರ್ಭದಲ್ಲಿ ತಕ್ಷಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ತಮ್ಮಲ್ಲಿ ಮತ್ತೊಮ್ಮೆ ಪ್ರಾರ್ಥಿಸುತ್ತೇವೆ.
ಹೆಚ್ ಎಂ ವೆಂಕಟೇಶ್
ಸಾಮಾಜಿಕ ಹೋರಾಟಗಾರರು