ರಾಕಿಂಗ್ ಸ್ಟಾರ್ ಯಶ್ (rocking star yash) ಅಭಿನಯದ ಕೆಜಿಎಫ್ 1 & 2 ಬ್ಲಾಕ್ ಬಸ್ಟರ್ ಆದ ಹಿನ್ನಲೆಯಲ್ಲಿ, ಕೆ.ಜಿ.ಎಫ್ 3 (KGF 3) ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದ್ರೆ ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಕೆಜಿಎಫ್ 2 ನಂತರ ಯಶ್ ಟಾಕ್ಸಿಕ್ನಲ್ಲಿ (Toxic) ಬ್ಯಸಿಯಾದ್ರೆ ಇತ್ತ ಪ್ರಶಾಂತ್ ನೀಲ್ (Prashanth neel) ಸಲಾರ್ ಸಿನಿಮಾದಲ್ಲಿ ಬಸುಯಾಗಿದ್ರು, ಇದೀಗ ಆ ಟೈಂ ಕೂಡಿ ಬಂದಿದ್ಯಾ ಎಂಬ ಕುತೂಹಲ ಮೂಡಿದೆ.
ಕೆಜಿಎಫ್ 3 ಸಿನಿಮಾದ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಈ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಅಜಿತ್ (tamil star ajith) ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅಜಿತ್ ಜೊತೆ ಒಂದು ಸಪರೇಟ್ ಸಿನಿಮಾ ಮಾಡೋದಕ್ಕೆ ನಿರ್ಧರಿಸಿದ್ದಾರಂತೆ.
ಈ ಬೆನ್ನಲ್ಲೇ ನಟ ಅಜಿತ್ರನ್ನ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಈ ಎರಡೂ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರಂತೆ. ಇದೇ ವೇಳೆ ಕೆಜಿಎಫ್ 3 ನಲ್ಲೂ ಅಜಿತ್ ನಟಿಸುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗ್ತಿದೆ. ಇತ್ತ ಈ ಎರಡು ಸಿನಿಮಾಗಳಿಗೂ ಹೊಂಬಾಳೆ ಸಂಸ್ಥೆಯ (Hombale films) ವಿಜಯ್ ಕಿರಗಂದೂರು ಬಂಡವಾಳ ಹೂಡಲಿದ್ದಾರೆ.