ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆ ನಡೆಯಲಿದೆ. ಈ ಸಭೆಯಲ್ಲಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಜುಲೈ ತಿಂಗಳ ಕಾವೇರಿ ನದಿ ನೀರು (Cauvery river) ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಈ ಹಿಂದೆ ಜುಲೈ 12 ರಿಂದ 31ರವರೆಗೆ ಕೆ.ಆರ್.ಎಸ್ (KRS dam) ನಿಂದ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವ ಶಿಫಾರಸ್ಸು ಮಾಡಲಾಗಿತ್ತು. ಇದುವರೆಗೆ ಕರ್ನಾಟಕದಿಂದ (Karnataka to Tamil nadu) ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗಿದೆ ಎಂಬುದರ ಬಗ್ಗೆ ಕಾವೇರಿ ಪ್ರಾಧಿಕಾರ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಜುಲೈ 18 ರ ಬಳಿಕ ಹೆಚ್ಚಿನ ಕಾವೇರಿ ಕಣಿವೆಯ ಡ್ಯಾಮ್ ಗಳಿಗೆ ಹೆಚ್ಚಿನ ಒಳ ಹರಿವು ಲಭ್ಯವಾಗಿದ್ದು, ಜುಲೈ 18 ರಿಂದ ಇಲ್ಲಿಯವರೆಗೂ ತಮಿಳುನಾಡಿಗೆ ಹೆಚ್ಚುವರಿಯಾಗಿ ಕಾವೇರಿ ನೀರನ್ನು ಹರಿಸಲಾಗಿದೆ. ಜುಲೈ 31ರೊಳಗೆ 30 ಟಿಎಂಸಿಗಿಂತ ಹೆಚ್ಚಿನ ನೀರು ಹರಿಯುವ ನಿರೀಕ್ಷೆಯಿದ್ದು, ಹೀಗಾಗಿ ಜೂನ್, ಜುಲೈ ತಿಂಗಳ 40 ಟಿಎಂಸಿ ನೀರು ಹರಿಸಲು ತೊಂದರೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.