ಆಫ್ರಿಕಾದ ನೈಋತ್ಯ ಇಥಿಯೋಪಿಯಾದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಕನಿಷ್ಠ 229 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯ ಅಧಿಕಾರಿಗಳು ಮಂಗಳವಾರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ.
ಮೃತರಲ್ಲಿ ಅಧಿಕ ಮಂದಿ ರಕ್ಷಣಾ ಸಿಬ್ಬಂದಿಗಳಾಗಿದ್ದಾರೆ. ಭೂಕುಸಿತದಿಂದಾಗಿ ಮಣ್ಣಿನಡಿ ಸಿಲುಕಿರುವವರ ರಕ್ಷಣಾ ಕಾರ್ಯಚರಣೆ ಮಾಡುವ ಸಂದರ್ಭದಲ್ಲಿ ಮತ್ತೊಂದು ಭೂಕುಸಿತ ಉಂಟಾಗಿದ್ದು, ರಕ್ಷಣಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಜನರು ಪತ್ತೆಯಾಗಿಲ್ಲ ಎಂದು ಗೋಫಾ ವಲಯದ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಮಾರ್ಕೋಸ್ ಮೆಲೆಸೆ ಹೇಳಿದ್ದಾರೆ.
BREAKING – Dozens killed by mudslides in southern Ethiopia
— Abhay (@AstuteGaba) July 23, 2024
JULY 23, 2024
Over two hundred people are feared dead after heavy rains triggered mudslides in a remote part of southern Ethiopia#Landslide #Mudslides #WorldNews #NEWS #NewsBreak #BreakingNews #Weather #Ethiopia #Rain… pic.twitter.com/x6lvI5Hc3e
ಅಪಘಾತದಿಂದಾಗಿ ತಾಯಿ, ತಂದೆ, ಸಹೋದರ ಮತ್ತು ಸಹೋದರಿ ಸೇರಿದಂತೆ ಇಡೀ ಕುಟುಂಬವನ್ನು ಕಳೆದುಕೊಂಡಿರುವ ಮಕ್ಕಳು ಶವಗಳನ್ನು ತಬ್ಬಿಕೊಳ್ಳುತ್ತಿದ್ದಾರೆ” ಎಂದು ಮಾರ್ಕೋಸ್ ಮೆಲೆಸೆ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ.
ಗೋಫಾ ವಲಯ ಪ್ರಾಧಿಕಾರವು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಚಿತ್ರಗಳು ಕೆಂಪು ಮಣ್ಣಿನಲ್ಲಿ ಜನಸಮೂಹ ನಿಂತಿರುವುದನ್ನು ಮತ್ತು ಕೆಲವರು ರಕ್ಷಣಾ ಪ್ರಯತ್ನಗಳಲ್ಲಿ ತಮ್ಮ ಕೈಗಳನ್ನೇ ಬಳಸಿ ಅಗೆಯುತ್ತಿರುವುದು ಕಾಣಬಹುದಾಗಿದೆ.ಆಫ್ರಿಕನ್ ಯೂನಿಯನ್ ಆಯೋಗದ ಅಧ್ಯಕ್ಷರಾದ ಮೌಸಾ ಫಕಿ ಮಹಮತ್, “ನಮ್ಮ ಪ್ರಾರ್ಥನೆ ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ.
ರಕ್ಷಣಾ ಪ್ರಯತ್ನಗಳು ಕಾಣೆಯಾದವರನ್ನು ಹುಡುಕಲು ಮತ್ತು ಸ್ಥಳಾಂತರಗೊಂಡವರಿಗೆ ಸಹಾಯ ಮಾಡುತ್ತದೆ. ನಾವು ಇಥಿಯೋಪಿಯಾದ ಜನರು ಮತ್ತು ಸರ್ಕಾರದೊಂದಿಗೆ ಬಲವಾದ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ” ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಗೋಫಾ ವಲಯವು ದಕ್ಷಿಣ ಇಥಿಯೋಪಿಯಾ ಪ್ರಾದೇಶಿಕ ರಾಜ್ಯದಲ್ಲಿ ಪರ್ವತ ಪ್ರದೇಶವಾಗಿದೆ. ಇಲ್ಲಿ ಏಪ್ರಿಲ್ ಮತ್ತು ಮೇ ನಡುವೆ ಸುರಿದ ಮಳೆಯು ಪ್ರವಾಹಕ್ಕೆ ಕಾರಣವಾಗಿದ್ದು ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.2016ರಲ್ಲಿ, ದಕ್ಷಿಣ ಇಥಿಯೋಪಿಯಾದ ಮತ್ತೊಂದು ಪ್ರದೇಶವಾದ ವೊಲೈಟಾದಲ್ಲಿ ಧಾರಾಕಾರ ಮಳೆಯ ನಂತರ ಮಣ್ಣಿನ ಕುಸಿತದಲ್ಲಿ 41 ಜನರು ಸಾವನ್ನಪ್ಪಿದ್ದರು.