
ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಷಾ ಅವರು ರಾಂಚಿಯ ಧುರ್ವಾದಲ್ಲಿರುವ ಪ್ರಭಾತ್ ತಾರಾ ಮೈದಾನಕ್ಕೆ ಹೋಗುತ್ತಿದ್ದರು, ಅಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಸಿದ್ದತೆ ನಡೆದಿತ್ತು. ಆಗ ಇಬ್ಬರು ಯುವಕರು ಅವರ ಬೆಂಗಾವಲು ಪಡೆಯ ಜತೆಯೇ ವಾಹನ ಚಲಾಯಿಸಿದರು.
ಕೂಡಲೇ ಮಾರ್ಗದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ಬಂಧಿಸಿದ್ದಾರೆ.ಯುವಕರನ್ನು ಬಿಹಾರದ ನಿವಾಸಿ ಅಂಕಿತ್ ಮತ್ತು ಧುರ್ವಾ ನಿವಾಸಿ ಮೋಹಿತ್ ಎಂದು ಗುರುತಿಸಲಾಗಿದ್ದು, ವಿಚಾರಣೆಗಾಗಿ ಜಗನ್ನಾಥಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಇಬ್ಬರು ಶಂಕಿತರನ್ನು ಪತ್ತೆ ಹಚ್ಚಿದ ಕೂಡಲೇ ಅವರನ್ನು ಹಿಡಿಯಲಾಯಿತು ಎಂದು ಡಿಎಸ್ಪಿ ಪಿಕೆ ಮಿಶ್ರಾ ಭದ್ರತಾ ಲೋಪವನ್ನು ನಿರಾಕರಿಸಿದರು. ಒಂದು ವೇಳೆ ಯುವಕರು ತಪ್ಪಿಸಿಕೊಂಡಿದ್ದರೆ ಅದನ್ನು ಭದ್ರತಾ ಲೋಪ ಎನ್ನಬಹುದಿತ್ತು. ಆದರೆ, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದರು. ವಿಚಾರಣೆ ವೇಳೆ, ಆರೋಪಿಗಳಲ್ಲಿ ಒಬ್ಬನಾದ ಅಂಕಿತ್, ತಾನು ಯಾರ ಬೆಂಗಾವಲು ಪಡೆ ತಪ್ಪಾಗಿ ಪ್ರವೇಶಿಸಿದೆ ಎಂದು ನನಗೆ ತಿಳಿದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಅವರು ಯಾವುದೇ ದುರುದ್ದೇಶ ಹೊಂದಿಲ್ಲ ಎಂದು ಹೇಳಿದರು.
ಅಂಕಿತ್ ಅವರು ವಾಹನ ನಿಲುಗಡೆ ಸ್ಥಳದಿಂದ ಬೆಂಗಾವಲು ಪಡೆಯನ್ನು ಹಿಂಬಾಲಿಸಿದರು ಮತ್ತು ಕೂಡಲೇ ಪೊಲೀಸರು ತಡೆದು ಇಬ್ಬರನ್ನೂ ವಶಕ್ಕೆ ಪಡೆದುಕೊಂಡರು. ಮತ್ತೋರ್ವ ಯುವಕ ಮೋಹಿತ್ ಪ್ರಭಾತ್ ತಾರಾ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ತನಗೆ ಗೊತ್ತಿತ್ತು ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ. ಪೋಲೀಸ್ ತನಿಖೆ ಮುಂದುವರೆದಿದೆ.





