
ಮನುಷ್ಯ ಸದೃಢವಾಗಿರಲು ಯೋಗ ಎಷ್ಟು ಅವಶ್ಯಕವೊ ಪೌಷ್ಟಿಕ ಆಹಾರ ಸೇವನೆ ಕೂಡ ಅಷ್ಟೇ ಅಗತ್ಯವಾಗಿದೆ ಎಂದು ಸೂರ್ಯ ಫೌಂಡೇಶನ್ ಸಂಯೋಜಕರಾದ ಗುರುನಾಥ ರಾಜಗೀರಾ ಹೇಳಿದರು.ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ರೈತರಿಗೆ ಉಚಿತವಾಗಿ ಪೌಷ್ಟಿಕ ಆಹಾರದ ಬೀಜಗಳನ್ನು ವಿತರಿಸಿ ಮಾತನಾಡಿದರು.

ಸೂರ್ಯ ಫೌಂಡೇಶನ್ ದೇಶಾದ್ಯಂತ ಆರೋಗ್ಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ಮಾಡುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿನ ಜನರ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿಯು ಕೂಡ ಫೌಂಡೇಶನ್ ರಾಷ್ಟ್ರೀಯ ಟ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ಪ್ರತಿವರ್ಷ ರೈತರಿಗೆ ಪೌಷ್ಟಿಕ ಆಹಾರ ಸೇವನೆಯ ದೃಷ್ಟಿಯಿಂದ ಬೀಜಗಳನ್ನು ವಿತರಿಸುತ್ತಾ ಬರುತ್ತಿದೆ ರೈತರು ಕೂಡ ಇದರ ಸದುಪಯೋಗ ಪಡೆದುಕೊಳ್ಳುತ್ತಿರುವದು ಸಂತಸದ ವಿಷಯವಾಗಿದೆ ಪ್ರತಿಯೊಬ್ಬರು ಕೂಡ ಆರೋಗ್ಯಯುತ ಬಾಳನ್ನು ಬಾಳಬೇಕು ಇದಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ರಾಜಗೀರಾ ಹೇಳಿದರು.ಈ ಸಂಧರ್ಭದಲ್ಲಿ ಪ್ರಮುಖರಾದ ವಿನೋದ ಪಾಟೀಲ, ಸಿದ್ದು ಕಾಡೊದೆ, ರಮೇಶ ಅರಾಳೆ, ಸಂಗಮೇಶ ದಾನಿ, ಸಂಗಮೇಶ ಬಿರಾದಾರ, ನವಿನ ದಾನಿ ಸೇರಿದಂತೆ ಇತರರಿದ್ದರು.