ಕರ್ನಾಟಕದಲ್ಲಿ (Karnataka) ಕನ್ನಡಿಗರಿಗೆ ಶೇ.70 ರಷ್ಟು ಉದ್ಯೋಗದ ಭರವಸೆ ನೀಡಿರೋ ಹಿನ್ನಲೆ ಕರ್ನಾಟಕದ ಉದ್ಯಮ ಹಾಗೂ ಕೈಗಾರಿಕೆಗಳನ್ನು ನಾರಾ ಲೋಕೇಶ್ (Nara lokesh) ಆಂಧ್ರಕ್ಕೆ ಸ್ವಾಗತಿಸಿದ್ದಾರೆ. ನಾವು ನಿಮಗೆ ಉತ್ತಮ ಸೌಲಭ್ಯ ಒದಗಿಸುತ್ತೇವೆ.ಆಂಧ್ರಪ್ರದೇಶ (Andra pradesh) ನಿಮ್ಮನ್ನು ಸ್ವಾಗತಿಸುತ್ತದೆ ಅಂತ ಟ್ವಿಟ್ ಮಾಡಿದ್ದಾರೆ.
ಆಂಧ್ರ ಸಚಿವನ ಈ ಟ್ವಿಟ್ಗೆ (Tweet) ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಜಾಗತಿಕ ಉದ್ಯೋಗಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ.ಹಾಗೆಯೇ ಜಾಗತಿಕ ಹೂಡಿಕೆಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಅಂದಹಾಗೆ, ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡಿದ ಪ್ರತಿಯೊಂದು ಕಂಪನಿಯು ಆಂಧ್ರಪ್ರದೇಶದ ಅರ್ಹ ಮತ್ತು ತರಬೇತಿ ಪಡೆದ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದಿಲ್ಲವಾ ಎಂದು ಆಂಧ್ರಪದೇಶದ ಸಚಿವ ನಾರಾ ಲೋಕೇಶ್ ರನ್ನ ಖರ್ಗೆ ಪ್ರಶ್ನಿಸಿದ್ದಾರೆ.