• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್​ ಸರ್ಕಾರಕ್ಕೆ ಕಂಟಕ ಆಗುವತ್ತ ವಾಲ್ಮೀಕಿ ಹಗರಣ..! ಹೊಸ ರಹಸ್ಯ ಬಯಲು

Krishna Mani by Krishna Mani
July 17, 2024
in Top Story, ಇದೀಗ, ದೇಶ, ರಾಜಕೀಯ, ವಿಶೇಷ
0
ಕಾಂಗ್ರೆಸ್​ ಸರ್ಕಾರಕ್ಕೆ ಕಂಟಕ ಆಗುವತ್ತ ವಾಲ್ಮೀಕಿ ಹಗರಣ..! ಹೊಸ ರಹಸ್ಯ ಬಯಲು
Share on WhatsAppShare on FacebookShare on Telegram

ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ 187 ಕೋಟಿ ಹಣವನ್ನು ತೆಲಂಗಾಣ ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ನಕಲಿ ಅಕೌಂಟ್​ ಮೂಲಕ ವರ್ಗಾವಣೆ ಮಾಡಿರುವುದು ಹಳೆಯ ವಿಚಾರ. ಶಿವಮೊಗ್ಗದಲ್ಲಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್​ ಆತ್ಮಹತ್ಯೆ ಮಾಡಿಕೊಂಡ ಬಳಿಕ ಬೆಳಕಿಗೆ ಬಂದ ಈ ಪ್ರಕರಣ ಈಗಾಗಲೇ ನಾಗೇಂದ್ರ ಸಚಿವ ಸ್ಥಾನವನ್ನು ಕಿತ್ತುಕೊಂಡಿದೆ. ಶಾಸನ ಬಸನಗೌಡ ದದ್ದಲ್​ ಬಂಧನದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎನ್ನುವ ಮೂಲಕ ನಾವು ಭ್ರಷ್ಟಾಚಾರಿಗಳನ್ನು ಸಹಿಸೋದಿಲ್ಲ. ಭ್ರಷ್ಟರನ್ನು ರಕ್ಷಣೆ ಮಾಡುವ ಕೆಲಸ ಮಾಡಲ್ಲ ಎನ್ನುವಂತೆ ವರ್ತಿಸುತ್ತಿದೆ. ಆದರೆ ಇದೀಗ ED ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೀಡಿರುವ ಮಾಧ್ಯಮ ಪ್ರಕಟಣೆ ಬೆಚ್ಚಿ ಬೀಳಿಸುವಂತಿದೆ.

ADVERTISEMENT

2024ರ ಸಾರ್ವತ್ರಿಕ ಚುನಾವಣೆ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಸಿಕೊಂಡು ಮದ್ಯ ಖರೀದಿ ಮಾಡಿರುವುದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬಯಲಾಗಿದೆ. ಅಂದರೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್​ ಮೂಗಿನ ನೇರದಲ್ಲೇ ಈ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ನಾಯಕರ ಆರೋಪಕ್ಕೆ ಪುಷ್ಟಿ ನೀಡುವಂತಿದೆ. 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಆ ಹಣವನ್ನು ಮದ್ಯ ಖರೀದಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಅಂಶ ತನಿಖೆ ವೇಳೆ ಬಯಲಾಗಿದೆ. ಈ ವಿಚಾರದ ಬಗ್ಗೆ ಜಾರಿ ನಿರ್ದೇಶನಾಯಲವನ್ನು ಆಗ್ರಹ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ತೆಲಂಗಾಣ ಹಾಗು ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆಗಿದೆ. ಹಣಕಾಸು ಇಲಾಖೆ ಅಧಿಕಾರಿಗಳನ್ನು ತನಿಖೆಗೆ ಒಳಪಟಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಇಡಿ ಕೊಟ್ಟಿರುವ ಮಾಹಿತಿ ಪ್ರಕಾರ ಕರ್ನಾಟಕ 23 ಸ್ಥಳಗಳಲ್ಲಿ ರೇಡ್​ ಮಾಡಿ 89.62 ಕೋಟಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಮಾಡಿದ್ದು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಕ್ಕೆ ಹಣ ಹೋಗಿದೆ. 18 ನಕಲಿ ಅಕೌಂಟ್​ ಮೂಲಕ ಈ ವ್ಯವಹಾರ ಮಾಡಲಾಗಿದೆ. ನಾಗೇಂದ್ರ ಹಾಗು ಬಸನಗೌಡ ದದ್ದಲ್​ ಮನೆಯಲ್ಲಿ ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಲಭ್ಯವಾಗಿದ್ದು, ನಾಗೇಂದ್ರ ಸೂಚನೆಯಂತೆಯೇ ಹಣ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ. ಜುಲೈ 18ತ ತನಕ MP and MLA Court ಕಸ್ಟಡಿಗೆ ನೀಡಿದ್ದು, ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ. ಜೊತೆಗೆ ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಚುನಾವಣೆಯಲ್ಲಿ ಹಂಚುವುದಕ್ಕಾಗಿ ಎಣ್ಣೆ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಮಾಡದೆ ಹಣ ವರ್ಗಾವಣೆ ಆಯ್ತಾ ಎನ್ನುವುದು ಈಗ ಇರುವ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ಇದರಲ್ಲಿ ಪಾಲುದಾರರು, ನಾಗೇಂದ್ರ ಇದರಲ್ಲಿ ಕೇವಲ ಪಾತ್ರಧಾರಿ ಎನ್ನುವುದು ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ನೇರ ಆರೋಪ. ED ಅಧಿಕಾರಿಗಳು ನಾಗೇಂದ್ರ ಹಾಗು ದದ್ದಲ್​ ಮನೆ ಬಾಗಿಲಿಗೆ ಬಂದಿದ್ದಾರೆ. ಒಂದಿಷ್ಟು ಮಾಹಿತಿ ಸಿಕ್ಕರೂ ಸಿಎಂ ಹಾಗು ಡಿಸಿಎಂ ಮನೆ ಬಾಗಿಲು ಬೆಲ್​ ಬಡಿಯುವುದರಲ್ಲಿ ಸಂದೇಹವಿಲ್ಲ. ಅಥವಾ ನೋಟಿಸ್​ ಕೊಟ್ಟು ವಿಚಾರಣೆಗೆ ಬನ್ನಿ ಎಂದು ಕರೆಯುವುದು ನಿಶ್ಚಿತ ಎನ್ನಲಾಗ್ತಿದೆ. SC ST ಸಮುದಾಯದ ಪರ ಎನ್ನುವ ಕಾಂಗ್ರೆಸ್​​, SC-ST ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನು ಹೀಗೂ ಗುಳುಂ ಮಾಡಬಹುದು ಎಂದುಕೊಂಡಿದ್ದು ಅಸಹ್ಯಕರ ಸಂಗತಿ.

ಕೃಷ್ಣಮಣಿಕಾಂಗ್ರೆಸ್​ ಸರ್ಕಾರಕ್ಕೆ ಕಂಟಕ ಆಗುವತ್ತ ವಾಲ್ಮೀಕಿ ಹಗರಣ..! ಹೊಸ ರಹಸ್ಯ ಬಯಲು

ಕೃಷ್ಣಮಣಿ

Tags: basavanagouda yatnalBJPCongress PartycongressgovernmentNagendraArrestNagendrawifeValmikiCorporationScamValmikiNigamaScamಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದೇವಸ್ಥಾನದಲ್ಲಿ ಜಾರಿಬಿದ್ದ ರೇವಣ್ಣ.. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ

Next Post

ಮಲಗಿದ್ದ ತಂದೆ ಮತ್ತು ಇಬ್ಬರು ಪುತ್ರಿಯರ ಕೊಲೆ ; ಓಡಿ ಜೀವ ಉಳಿಸಿಕೊಂಡ ಹೆಂಡತಿ

Related Posts

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..
Top Story

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

by ಪ್ರತಿಧ್ವನಿ
May 23, 2026
0

ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ...

Read moreDetails
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
Next Post

ಮಲಗಿದ್ದ ತಂದೆ ಮತ್ತು ಇಬ್ಬರು ಪುತ್ರಿಯರ ಕೊಲೆ ; ಓಡಿ ಜೀವ ಉಳಿಸಿಕೊಂಡ ಹೆಂಡತಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!