ಕೆಲವು ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ತೂಕವಿರುವುದಿಲ್ಲ ತುಂಬಾನೇ ತೆಳ್ಳಗಿರುತ್ತಾರೆ. ಮಕ್ಕಳನ್ನು ನೋಡಿ ಯಾರಾದರೂ ತುಂಬಾ ತೆಳ್ಳಗಿದ್ದಾರೆ ಅಂತ ಹೇಳಿದರೆ ಹೆತ್ತವರಿಗೆ ಸಾಮಾನ್ಯವಾಗಿ ಬೇಜಾರಾಗುತ್ತದೆ. ಮಕ್ಕಳು ಸರಿಯಾದ ಸಮಯಕ್ಕೆ ತಿನ್ನುವುದಿಲ್ಲ ಇನ್ನು ಕೆಲ ಮಕ್ಕಳು ಸ್ಕೂಲಿಗೆ ಟಿಫನ್ ಬಾಕ್ಸ್ ಹಾಕಿಕೊಟ್ಟರು ಹಾಗೆ ಉಳಿಸಿಕೊಂಡು ಬರುತ್ತಾರೆ. ಇದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ..

ನಿಮ್ಮ ಮಕ್ಕಳು ತುಂಬಾನೇ ತೆಳ್ಳಗಿದ್ದರೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತದೆ ಹಾಗೂ ಮುಖ್ಯವಾಗಿ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಮಕ್ಕಳ ತೂಕವನ್ನ ಹೆಚ್ಚಿಸಲು ಪ್ರತಿದಿನ ತಪ್ಪದೆ ಈ ಆಹಾರವನ್ನ ತಿನಿಸುವುದರಿಂದ ಬೇಗನೆ ವೇಟ್ ಗೈನ್ ಆಗತ್ತೆ.
ಆವಕಾಡೊ
ಮಕ್ಕಳಿಗೆ ಪ್ರತಿದಿನ ಅವಕಾಡು ಹನ್ನು ಅಥವಾ ಮಿಲ್ಕ್ ಶೇಕ್ ಮಾಡಿ ಕುಡಿಸುವುದರಿಂದ ಬೇಗನೆ ತೂಕ ಹೆಚ್ಚಾಗುತ್ತದೆ. ಅದರಲ್ಲೂ ಅವಕಾಡೊ ಹೆಲ್ದಿ ಫ್ಯಾಟ್ಸ್ ಅನ್ನ ಹೊಂದಿರುತ್ತದೆ ಮತ್ತು ಕ್ಯಾಲೋರಿಸ್ ಜಾಸ್ತಿ ಇರುತ್ತದೆ ಇದೆಲ್ಲದರ ಜೊತೆಗೆ ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶ ಕೂಡ ಹೆಚ್ಚಿರುತ್ತದೆ.

ಮೊಟ್ಟೆ
ಪ್ರತಿದಿನ ಮಕ್ಕಳಿಗೆ ಒಂದೊಂದು ಮೊಟ್ಟೆಯನ್ನು ತಿನ್ನಿಸುವುದರಿಂದ ಬೇಗನೆ ತೂಕ ಹೆಚ್ಚಾಗುತ್ತದೆ ಮೊಟ್ಟೆಯಲ್ಲಿ ಪ್ರೋಟೀನ್ ಹೆಲ್ತಿ ಫ್ಯಾಕ್ಸ್ ಮಿನರಲ್ಸ್ ಹಾಗೂ ವಿಟಮಿನ್ ಅಂಶ ಹೆಚ್ಚಿರುತ್ತದೆ. ಮೊಟ್ಟೆಯನ್ನು ಬಾಯ್ಲ್ ಮಾಡಿಕೊಡಬಹುದು ,ಆಮ್ಲೆಟ್ ಮಾಡಿ ತಿನ್ನಿಸಬಹುದು.

ಬಾಳೆಹಣ್ಣು
ಬಾಳೆಹಣ್ಣಲ್ಲಿ ನ್ಯೂಟ್ರಿಷಿಯಸ್ ಅಂಶ ಹೆಚ್ಚಿರುತ್ತದೆ. ಬಾಳೆಹಣ್ಣು ತೂಕವನ್ನು ಹೆಚ್ಚು ಮಾಡುವುದಕ್ಕೆ ಎಕ್ಸಲೆಂಟ್ ಚಾಯ್ಸ್ ಅಂತ ಹೇಳಿದ್ರೆ ತಪ್ಪಾಗಲ್ಲ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಕಾರ್ಬೋಹೈಡ್ರೇಟ್ಸ್ ಮತ್ತು ನ್ಯಾಚುರಲ್ ಶುಗರ್ ಇರೋದ್ರಿಂದ ತೂಕವನ್ನು ಬೇಗನೆ ಹೆಚ್ಚು ಮಾಡುತ್ತದೆ.

ಯೋಗರ್ಟ್
ಯೋಗಟ್ ನಲ್ಲಿ ಪ್ರೊಟೀನ್ ಅಂಶ ಹೆಚ್ಚಿರುತ್ತದೆ ಹಾಗೂ ತೂಕವನ್ನು ಜಾಸ್ತಿ ಮಾಡೋದಕ್ಕೆ ಬೇಕಾದಂತಹ ನ್ಯೂಟ್ರಿಷಿಯಸ್ ಕೂಡ ಇದರಲ್ಲಿ ಇರುತ್ತದೆ. ಬರೀ ಮೊಸರನ್ನ ತಿನ್ನೋದಕ್ಕೆ ಆಗದಿದ್ದಲ್ಲಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನ ಹಾಗೂ ಹಣ್ಣನ್ನ ಬೆರೆಸಿ ಸ್ಮೂದಿ ಮಾಡಿ ಸೇವಿಸುವುದರಿಂದ ಬೆಸ್ಟ್ ಐಟಂ ವೇಟ್ ಗೇನ್ ಮಾಡೋದಕ್ಕೆ ಅಂತ ಹೇಳಿದ್ರೆ ತಪ್ಪಾಗಲ್ಲ.
