ಉತ್ತರ ಕನ್ನಡ (Uttara kannada) ಜಿಲ್ಲೆಯಲ್ಲಿ ರಣಭೀಕರ ಮಳೆಯಾಗಿದ್ದು, ಹೆದ್ದಾರಿಯಲ್ಲಿ ಭಾರೀ ಗುಡ್ಡಕುಸಿತ ಸಂಭವಿಸಿದೆ. ಅಂಕೋಲಾ (Ankola) ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು ಒಂದೇ ಕುಟಂಬದ ಐವರು ಗುಡ್ಡದ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಐಆರ್‌ಬಿ (IRB) ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಆದ್ರೆ ಇದುವರೆಗೂ 7 ಜನ ಸಾವನ್ನಪ್ಪಿದ್ದಾರೆ ಎಂದು ಸಂಸದ ವಿಶ್ವೇಶ್ವರಕಾಗೇರಿ (Vishveshwara hegde kageri) ಹೇಳಿದ್ರು. ಇದರ ಬಗ್ಗೆ ಅಧಿಕೃತವಾಗಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಸ್ಪಷ್ಟನೆ ನೀಡಿದ್ದಾರೆ. ಹೆದ್ದಾರಿಯ ನಿರ್ಮಾಣ ಕಾಮಗಾರಿ (Highway construction) ಅವೈಜ್ಞಾನಿಕವಾಗಿ ನಡೆಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐ.ಬಿ.ಆರ್ (IRB) ಎಂಬ ಕಂಪೆನಿ ಈ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿದ್ದು, ನಿರಂತರವಾಗಿ ಇಂತಹ ದುರಂತಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದ್ದು, ಹೆದ್ದಾರಿಯ ಸಮೀಪದ ಟೀ ಅಂಗಡಿಯ ಬಳಿ ಗಾಡಿ ನಿಲ್ಲಿಸಿ ಕುಟುಂಬ ಕೆಳಗಿಳಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗ್ತಿದೆ.
ಇನ್ನೂ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ದೇಹಗಳು ಪತ್ತೆಯಾಗಿಲ್ಲ. ಆದ್ರೆ ಸ್ಥಳದಲ್ಲಿನ ಪರಿಸ್ಥಿನಿ ನೋಡಿದ್ರೆ, ಮಣ್ಣಿನ ಅಡಿ ಸಿಲುಕಿದವರು ಬದುಕುಳಿದಿರುವ ಸಾಧ್ಯತೆ ತೀರ ವಿರಳ ಎಂದು ಅಂದಾಜಿಸಲಾಗಿದೆ.