
ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಅಬುಧಾಬಿ (NYUAD) ಕೇಂದ್ರದ ವಿದ್ಯಾರ್ಥಿಯೊಬ್ಬರು “ಫ್ರೀ ಪ್ಯಾಲೆಸ್ತೀನ್!” ಎಂದು ಘೋಷಣೆ ಕೂಗಿದ ಕಾರಣಕ್ಕಾಗಿ ಸೌದಿ ಅರ್ಕಾರ ಆತನನ್ನು ಗಡೀಪಾರು ಮಾಡಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರಮಾಣಪತ್ರ ಸ್ವೀಕರಿಸಲು ವೇದಿಕೆ ಏರುತಿದ್ದಂತೆ ಪ್ಯಾಲೆಸ್ತೀನ್ ಸಾಂಪ್ರದಾಯಿಕ ಕೆಫಿಯೆಹ್ ಸ್ಕಾರ್ಫ್ ಧರಿಸಿದ್ದ ವಿದ್ಯಾರ್ಥಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ಘಟನೆಯು ಇಸ್ರೇಲ್ನ ರಾಜತಾಂತ್ರಿಕ ಮಾನ್ಯತೆ ಮತ್ತು ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ನಡುವಿನ ಯುಎಇಯ ಸೂಕ್ಷ್ಮ ಸಮತೋಲನವನ್ನು ಪ್ರತಿಬಿಂಬಿಸುತ್ತದೆ. ಪ್ಯಾಲೆಸ್ಟೀನಿಯಾದವರಿಗೆ ನೆರವು ನೀಡುವ ಹೊರತಾಗಿಯೂ, ಭಾಷಣ ಮತ್ತು ರಾಜಕೀಯ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣದಿಂದಾಗಿ ಯುಎಇ ಯಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದಿಲ್ಲ.
ವಿದ್ಯಾರ್ಥಿಗಳು ಇಸ್ರೇಲ್-ಹಮಾಸ್ ಸಂಘರ್ಷವನ್ನು ಬೆಂಬಲಿಸುವ ಅಥವಾ ವಿರೋಧಿಸುವ ಚಟುವಟಿಕೆಗಳನ್ನು ಕ್ಯಾಂಪಸ್ನಲ್ಲಿ ನಿಷೇಧಿಸಲಾಗಿದೆ ಮತ್ತು ದೇಶದ ರಾಜಧಾನಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂತಹ ಚಟುವಟಿಕೆ ನಿಷೇಧಿಸಲಾಗಿದ್ದು ಸಮಾರಂಬಗಳಲ್ಲಿ ಕೆಫಿಯೆಹ್ ಧರಿಸಿರುವವರು ಪ್ರವೇಶಿಸುವುದಕ್ಕೂ ನಿರ್ಭಂಧ ಇದೆ.

ಕ್ಯಾಂಪಸ್ನಲ್ಲಿ ಶೈಕ್ಷಣಿಕ ಸೌಲಭ್ಯ ಒದಗಿಸುತ್ತಿರುವಾಗ , ಸ್ಥಳೀಯ ಕಾನೂನುಗಳು ಮತ್ತು ವಲಸೆ ಕ್ರಮಗಳ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ ಎಂದು ಕಾಲೇಜು ತಿಳಿಸಿದೆ.
ಮೇ ತಿಂಗಳಲ್ಲಿ ಪದವಿ ಪಡೆದ NYU ಅಬುಧಾಬಿಯ ಹಳೆಯ ವಿದ್ಯಾರ್ಥಿ ಜಾಕ್ವೆಲಿನ್ ಹೆನ್ನೆಕೆ ಅವರು ಮಾತನಾಡಿ ವಿಶ್ವವಿದ್ಯಾನಿಲಯವು ಪದವಿಗೆ ಮುಂಚಿತವಾಗಿ ಶಿರವಸ್ತ್ರ ಸಹಿತ ಎಲ್ಲಾ “ಸಾಂಸ್ಕೃತಿಕ ಉಡುಗೆ” ಗಳನ್ನು ನಿಷೇಧಿಸಿರುವ ಇಮೇಲ್ ಅನ್ನು ಕಳುಹಿಸಿದೆ. ಆದರೆ ಈ ಸೂಚನೆಯನ್ನು ನಿರ್ಲಕ್ಷಿಸಿ ವೇದಿಕೆಯಲ್ಲಿ “ಫ್ರೀ ಪ್ಯಾಲೆಸ್ಟೈನ್” ಎಂದು ಕೂಗಿದ ವಿದ್ಯಾರ್ಥಿಯನ್ನು ಗಡೀಪಾರು ಮಾಡುವ ಮೊದಲು ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.
NYUAD ಗೆ ಇದು ಮೊದಲ ವಿವಾದವಲ್ಲ, ಇದು ಹಿಂದೆ ಕಾರ್ಮಿಕ ಉಲ್ಲಂಘನೆ ಮತ್ತು ಅಧ್ಯಾಪಕರಿಗೆ ವೀಸಾ ನಿರಾಕರಣೆಗಳಿಗಾಗಿ ಟೀಕೆಗಳನ್ನು ಎದುರಿಸಿದೆ. ಅಮೆರಿಕದ ನಿಕಟ ಮಿತ್ರರಾಷ್ಟ್ರವಾದ UAE, ದೈನಂದಿನ ವಿಮಾನಗಳು ಮತ್ತು ದೂತಾವಾಸದ ಸೇವೆಗಳನ್ನು ಒಳಗೊಂಡಂತೆ ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರೆಸಿದೆ ಮತ್ತು ಪ್ಯಾಲೇಸ್ಟಿನಿಯನ್ ಪರ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ.
ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಹಾಸ್ಯೋತ್ಸವದ ಸಂದರ್ಭದಲ್ಲಿ, ಭದ್ರತಾ ಸಿಬ್ಬಂದಿಗಳು ಭಾಗವಹಿಸಿದವರಿಂದ ಕೆಫಿಯೆಹ್ಗಳನ್ನು ವಶಪಡಿಸಿಕೊಂಡಿದ್ದರು.