ಶಾಸಕ ಬಸವನಗೌಡ ದದ್ದಲ್ (Basanagowda daddal) ಮನೆಯಲ್ಲಿ ಇ.ಡಿ (ED) ದಾಳಿ ಅಂತ್ಯವಾಗಿದೆ. ನಿನ್ನೆಯಿಂದ ಸತತವಾಗಿ ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಸುಮಾರು 37 ತಾಸು ದದ್ದಲ್ ಮನೆಯಲ್ಲಿ ಶೋಧ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಂಟರ್ (Printer) ಲ್ಯಾಪಟಾಪ್ (Laptop)ಸೇರಿ ಕೆಲ ದಾಖಲೆಗಳನ್ನ ಕೂಡ ಇಡಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ (Bangalore)ಯಲಹಂಕದ ಕೋಗಿಲು ಕ್ರಾಸ್ ಬಳಿಯ ನಿವಾಸದಲ್ಲಿ ನಡೆದಿದ್ದ ದಾಳಿ ಅಂತ್ಯವಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂದಿಸಿದಂತೆ ದದ್ದಲ್ ರನ್ನ ವಿಚಾರಣೆ ನಡೆಸಿರೋ ಇ.ಡಿ, ಮನೆಯಲ್ಲಿ ಸಿಕ್ಕಿರೋ ದಾಖಲೆಗಳ ಬಗ್ಗೆ ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಂಡಿರೋ ಇ.ಡಿ ಅಧಿಕಾರಿಗಳು, ನಂತರ
ದಾಖಲೆಗಳನ್ನು ತೆಗೆದುಕೊಂಡು ಕಚೇರಿಗೆ ತೆರಳಿದ್ದಾರೆ.