ವಾಲ್ಮೀಕಿ ನಿಗಮದ (Valmiki developement board) ಅಧಿಕಾರಿಗಳು ನಡೆಸಿರುವ ಅಂಧಾ ದರ್ಬಾರ್ ಬೆಚ್ಚಿ ಬೀಳಿಸುವಂತಿದೆ. ವಾಲ್ಮೀಕಿ ನಿಗಮದ 94 ಕೋಟಿ ಹಣ ಸುಮಾರು 200 ಅಕೌಂಟ್‌ಗಳಿಗೆ ವರ್ಗಾವಣೆಯಾಗಿತ್ತು. ಕುರಿಗಾಹಿಗಳ ಖಾತೆಗಳಿಗೂ ಲಕ್ಷಾಂತರ ಹಣ ವರ್ಗಾವಣೆಯಾಗಿದ್ದು 5 ರಿಂದ 10 ಪರ್ಸೆಂಟ್ ಹಣ ಕೊಟ್ಟು ವಂಚಕರು ಕ್ಯಾಷ್ (cash) ಪಡೆಯುತ್ತಿದ್ದರಂತೆ.
ಇನ್ನು ಬಾರ್ (Bar), ಸಣ್ಣಪುಟ್ಟ ಕಂಪನಿಗಳ ಅಕೌಂಟ್‌ಗಳಿಗೂ ಹಣ ವರ್ಗಾವಣೆ ಮಾಡಿದ್ದಾರೆ. ಸದ್ಯ 94 ಕೋಟಿ ಹಣದಲ್ಲಿ ಸುಮಾರು 35 ಕೋಟಿ ರೂ. ರಿಕವರಿ ಮಾಡಲಾಗಿದೆ. ಪ್ರಕರಣದ 13ನೇ ಆರೋಪಿ ಸತ್ಯನಾರಾಯಣ ವರ್ಮಾ ಖಾತೆಗೆ ಹೋಗಿದ್ದ ಹಣ, ಚಿನ್ನ ಸೇರಿ 15 ಕೋಟಿ ಸೀಜ್ ಮಾಡಲಾಗಿದೆ.
ಸದ್ಯ ಎಲ್ಲಾ 200 ಅಕೌಂಟ್‌ಗಳನ್ನೂ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ಈ ಮಧ್ಯೆ ಪ್ರಕರಣದ 13ನೇ ಆರೋಪಿ ಸತ್ಯನಾರಾಯಣವರ್ಮಾಗೆ ಬಿ.ನಾಗೇಂದ್ರ (B nagendra) ಕಡೆಯಿಂದ ಜೀವಬೆದರಿಕೆ ಇರುವ ಆರೋಪ ಕೇಳಿಬಂದಿದೆ. ಕೊಲೆ ಮಾಡುವ ಸಾಧ್ಯತೆ ಇದೆ ಅಂತ ಸತ್ಯನಾರಾಯಣವರ್ಮಾ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ